ETV Bharat / bharat

ಕೃಷ್ಣಾ ನದಿಯಲ್ಲಿ ಐವರು ಬಾಲಕರ ನಾಪತ್ತೆ, ಶೋಧ ಕಾರ್ಯ ಮುಂದುವರಿಕೆ - ಕೃಷ್ಣಾ ನದಿಯಲ್ಲಿ ನಾಪತ್ತೆಯಾದ ಐವರು ವಿದ್ಯಾರ್ಥಿಗಳು

ಕೃಷ್ಣಾ ಜಿಲ್ಲೆಯ ಏತೂರು ಗ್ರಾಮದ ಏಳನೇ ತರಗತಿ ಓದುತ್ತಿದ್ದ ಐವರು ವಿದ್ಯಾರ್ಥಿಗಳು ಕೃಷ್ಣಾ ನದಿಯಲ್ಲಿ ನಾಪತ್ತೆಯಾಗಿದ್ದು, ಶೋಧ ಕಾರ್ಯಾಚರಣೆ ನಡೆಯುತ್ತಿದೆ.

Andhra Pradesh: Five students go missing in Krishna river
ಕೃಷ್ಣಾ ನದಿಯಲ್ಲಿ ಐವರು ಬಾಲಕರ ನಾಪತ್ತೆ, ಶೋಧ ಕಾರ್ಯ ಮುಂದುವರಿಕೆ
author img

By

Published : Jan 11, 2022, 4:06 AM IST

ಕೃಷ್ಣಾ, ಆಂಧ್ರಪ್ರದೇಶ: ಕೃಷ್ಣಾ ನದಿಯಲ್ಲಿ ಕನಿಷ್ಠ ಐವರು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ಸೋಮವಾರ ಮಾಹಿತಿ ನೀಡಿದ್ದಾರೆ. ನಾಪತ್ತೆಯಾದ ಎಲ್ಲಾ ವಿದ್ಯಾರ್ಥಿಗಳು ಕೃಷ್ಣಾ ಜಿಲ್ಲೆಯ ಏತೂರು ಗ್ರಾಮದವರಾಗಿದ್ದು, 7ನೇ ತರಗತಿ ಓದುತ್ತಿದ್ದರೆಂದು ತಿಳಿದುಬಂದಿದೆ.

ಕಾಣೆಯಾದ ವಿದ್ಯಾರ್ಥಿಗಳನ್ನು ಚರಣ್, ಬಾಲ ಯೇಸು, ಅಜಯ್, ರಾಕೇಶ್ ಮತ್ತು ಸನ್ನಿ ಎಂದು ಗುರುತಿಸಲಾಗಿದೆ.

ಎಎನ್‌ಐ ಜೊತೆ ಮಾತನಾಡಿದ ನಂದಿಗಾಮ ಉಪ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ವರ ರೆಡ್ಡಿ, ವಿದ್ಯಾರ್ಥಿಗಳಿಗೆ ಶೋಧ ಕಾರ್ಯ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಶೋಧ ಕಾರ್ಯಕ್ಕೆ ವೃತ್ತಿಪರ ಈಜುಗಾರರನ್ನು ಕೂಡಾ ಪೊಲೀಸರು ನಿಯೋಜಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Bulli Bai case: ದೂರುದಾರರಿಗೆ ಅಪರಿಚಿತರಿಂದ ಬೆದರಿಕೆ, ಮತ್ತೊಂದು ದೂರು ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.