ETV Bharat / bharat

ASTR: ಒಂದೇ ಭಾವಚಿತ್ರಕ್ಕೆ 658 ಸಿಮ್ ಕಾರ್ಡ್‌ಗಳ ವಿತರಣೆ! ಪತ್ತೆಯಾಗಿದ್ದು ಹೇಗೆ?

ಆಂಧ್ರಪ್ರದೇಶದ ವಿಜಯವಾಡದಲ್ಲಿ ಒಂದೇ ಭಾವಚಿತ್ರದ ಬಳಸಿ 658 ಸಿಮ್ ಕಾರ್ಡ್‌ಗಳನ್ನು ವಿತರಣೆ ಮಾಡಿರುವುದು ದೂರಸಂಪರ್ಕ ಇಲಾಖೆಯ ಎಐ ಆಧಾರಿತ ಎಎಸ್​​ಟಿಆರ್ ತಂತ್ರಜ್ಞಾನದಲ್ಲಿ ಪತ್ತೆಯಾಗಿದೆ.

Andhra Pradesh: AI powered solution exposes 658 SIM cards issued on a single photograph
ಒಂದೇ ಭಾವಚಿತ್ರಕ್ಕೆ 658 ಸಿಮ್ ಕಾರ್ಡ್‌ಗಳ ವಿತರಣೆ! ಪತ್ತೆಯಾಗಿದ್ದು ಹೇಗೆ?
author img

By

Published : Aug 9, 2023, 10:34 PM IST

ವಿಜಯವಾಡ (ಆಂಧ್ರಪ್ರದೇಶ): ಒಂದೇ ಭಾವಚಿತ್ರದ ಬಳಸಿ 658 ಸಿಮ್ ಕಾರ್ಡ್‌ಗಳನ್ನು ವಿತರಿಸಿರುವ ಪ್ರಕರಣ ಆಂಧ್ರಪ್ರದೇಶದ ವಿಜಯವಾಡ ಜಿಲ್ಲೆಯ ಗುಣದಾಳ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಈ ಕುರಿತು ದೂರಸಂಪರ್ಕ ಇಲಾಖೆ ನೀಡಿದ ದೂರಿನ ಮೇಲೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿ, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ವಿಜಯವಾಡದ ಸತ್ಯನಾರಾಯಣಪುರಂ ನಿವಾಸಿ ಪೊಲುಕೊಂಡ ನವೀನ್ ಎಂಬಾತ ಬಂಧಿತ ಆರೋಪಿ. ಈ ಕುರಿತು ಮಂಗಳವಾರ ಪೊಲೀಸ್ ಕಮಿಷನರ್ ಕಂಠೀರಣ ಪ್ರತಿಕ್ರಿಯಿಸಿ, ''ದೂರಸಂಪರ್ಕ ಇಲಾಖೆ (ಡಿಒಟಿ)ಯಿಂದ ಒಂದೇ ಭಾವಚಿತ್ರ ಮೇಲೆ 658 ಸಿಮ್ ಕಾರ್ಡ್‌ಗಳನ್ನು ನೀಡಲಾಗಿದೆ ಎಂದು ದೂರು ಬಂದಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸೂರ್ಯರಾವ್‌ಪೇಟೆ ಪೊಲೀಸರಿಗೆ ಸೂಚಿಸಲಾಗಿದೆ'' ಎಂದು ಹೇಳಿದರು.

''ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನವೀನ್ ಎಂಬಾತನ ಬಂಧನವಾಗಿದೆ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಅಜಿತ್‌ ಸಿಂಗ್‌ ನಗರ ಮತ್ತು ವಿಸ್ಸನ್ನಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚುವರಿ 150 ಸಿಮ್ ಕಾರ್ಡ್‌ಗಳನ್ನು ನಕಲಿ ದಾಖಲೆಗಳ ಮೂಲಕ ವಿತರಿಸಲಾಗಿದೆ ಎಂಬುವುದು ಪತ್ತೆಯಾಗಿದೆ'' ಎಂದು ಅವರು ಮಾಹಿತಿ ನೀಡಿದರು.

ಇದನ್ನೂ ಓದಿ: ಸಿಮ್ ಕಾರ್ಡ್ ಬ್ಲಾಕ್ ಮಾಡಿಸಿ ಬ್ಯಾಂಕ್ ಖಾತೆಯಿಂದ ₹2 ಲಕ್ಷ ದೋಚಿದ ಖದೀಮರು!

ಪತ್ತೆಯಾಗಿದ್ದು ಹೇಗೆ?: ಒಂದೇ ಭಾವಚಿತ್ರದ ಬಳಸಿ 658 ಸಿಮ್ ಕಾರ್ಡ್‌ಗಳನ್ನು ವಿತರಣೆ ಮಾಡಿರುವುದು ದೂರಸಂಪರ್ಕ ಇಲಾಖೆಯ ಅಧಿಕಾರಿಗಳನ್ನು ಬೆಚ್ಚಿ ಬೀಳಿಸಿದೆ. ಅಲ್ಲದೇ, ಇಂತಹ ಪ್ರಕರಣಗಳನ್ನು ಪತ್ತೆ ಮಾಡಲೆಂದು ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧಾರಿತ ಹೊಸ ತಂತ್ರಜ್ಞಾನವನ್ನು ಇಲಾಖೆ ಅಳವಡಿಸಿಕೊಂಡಿದೆ.

ಎಐ ಆಧಾರಿತ ಎಎಸ್​​ಟಿಆರ್​ (Artificial Intelligence and Facial Recognition Powered Solution for Telecom SIM Subscriber Verification) ಎಂಬ ಟೂಲ್‌ಕಿಟ್​ಅನ್ನು ಇಲಾಖೆ ಹೊಂದಿದೆ. ಇದರಲ್ಲಿಯೇ ಈ ಪ್ರಕರಣ ಸಹ ಬಯಲಾಗಿದೆ. ಈ ತಂತ್ರಜ್ಞಾನವು ಸಿಮ್​ ಕಾರ್ಡ್​ ಬಳಕೆದಾರರ ಪತ್ತೆ ಹಚ್ಚಲು ಮುಖದ ಚಿತ್ರವನ್ನು ಗುರುತಿಸಿ, ನಕಲಿ ಎಂದು ಕಂಡು ಬಂದಲ್ಲಿ ಸಂಬಂಧಿಸಿದ ಫೋನ್ ಸಂಖ್ಯೆಗಳನ್ನು ಬಂದ್​ ಮಾಡುತ್ತಿದೆ.

ಈ ಎಎಸ್​​ಟಿಆರ್ ಬಹು ಟೆಲಿಕಾಂ ಆಪರೇಟರ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ನಕಲಿ ದಾಖಲೆಗಳೊಂದಿಗೆ ನೀಡಲಾದ ಸಿಮ್ ಕಾರ್ಡ್‌ಗಳ ಸಂಭಾವ್ಯ ದುರುಪಯೋಗವನ್ನು ಹತ್ತಿಕ್ಕಲು ಪೊಲೀಸರು ಮತ್ತು ದೂರಸಂಪರ್ಕ ಇಲಾಖೆ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ, ನಕಲಿ ದಾಖಲೆಗಳ ಮೇಲೆ ಪಡೆದ ಸಿಮ್​ ಕಾರ್ಡ್​ಗಳು ಸುಲಭವಾಗಿ ದುರುದ್ದೇಶಪೂರಿತ ವ್ಯಕ್ತಿಗಳ ಕೈಗೆ ದೊರೆಯುವ ಕುರಿತು ಅಧಿಕಾರಿಗಳು ಆತಂಕ ವ್ಯಕ್ತಪಡಿಸುತ್ತಾರೆ.

ಇದನ್ನೂ ಓದಿ: ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 4 ಸಾವಿರ ಸಿಮ್​ ಕಾರ್ಡ್​ ವಶಕ್ಕೆ ಪಡೆದ ಎಟಿಎಸ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.