ಪೆರಂಬಲೂರು, ತಮಿಳುನಾಡು: 1861ರ ಮೊದಲು ಬ್ರಿಟಿಷರ ಆಳ್ವಿಕೆಯಲ್ಲಿ ಫ್ರೆಂಚರು ನಿರ್ಮಿಸಿದ ಪವಿತ್ರ ಸೂಸೈಯಪ್ಪ ಚರ್ಚ್ 61 ಅಡಿ ಎತ್ತರವಿದ್ದು, ಎರಡು ಎಕರೆ ಜಾಗದಲ್ಲಿ ಸುಮಾರು 8,800 ಚದರ ಅಡಿ ವಿಸ್ತೀರ್ಣ ಹೊಂದಿತ್ತು. ಈ ಚರ್ಚ್ 2009 ರಲ್ಲಿ ಕುಸಿದು ಬಿದ್ದಿತ್ತು. ಇದರ ನಂತರ, 2016 ರಲ್ಲಿ ಈ ಚರ್ಚ್‌ನ ಆವರಣದಲ್ಲಿ ಹೊಸ ಚರ್ಚ್ ಅನ್ನು ನಿರ್ಮಿಸಲಾಯಿತು.
ಹೊಸ ಚರ್ಚ್ ನಿರ್ಮಾಣದ ಬಳಿಕ ಸುರಕ್ಷತೆ ದೃಷ್ಟಿಯಿಂದ ಶೀಥಲಗೊಂಡಿದ್ದ ಚರ್ಚ್ ಕೆಡವಲು ತೀರ್ಮಾನಿಸಲಾಗಿತ್ತು. ಬಳಿಕ ಚರ್ಚ್ ತೆರವು ಕಾರ್ಯ ಆರಂಭವಾಗಿತ್ತು. ಮುಂಭಾಗದ ಸಭಾಂಗಣವನ್ನು ಜೆಸಿಪಿಯಿಂದ ಕೆಡವಲಾಯಿತು. ಆದ್ರೆ ಚರ್ಚ್‌ನ ಗೋಪುರವನ್ನು ಸ್ಫೋಟಕಗಳಿಂದ ಸ್ಫೋಟಿಸಿ ನೆಲಕ್ಕುರುಳಿಸಲಾಯಿತು.