ETV Bharat / bharat

ಮನೆಮುಂದೆ ಮಲಗಿದ್ದ ದಂಪತಿ ಹತ್ಯೆ ಮಾಡಿದ ದುಷ್ಕರ್ಮಿ.. ರೊಚ್ಚಿಗೆದ್ದ ಗ್ರಾಮಸ್ಥರಿಂದ ಆರೋಪಿಯ ಹತ್ಯೆ - ಅನಂತಪುರ ಕೊಲೆ ಪ್ರಕರಣ

ಮಲಗಿದ್ದ ದಂಪತಿಯನ್ನು ದುಷ್ಕರ್ಮಿಯೊಬ್ಬ ಹತ್ಯೆ ಮಾಡಿರುವ ಘಟನೆ ಅನಂತಪುರದಲ್ಲಿ ನಡೆದಿದೆ.

ಮನೆಮುಂದೆ ಮಲಗಿದ್ದ ದಂಪತಿಯನ್ನು ಹತ್ಯೆಗೈದ ದುಷ್ಕರ್ಮಿ

author img

By ETV Bharat Karnataka Team

Published : Sep 16, 2023, 9:27 AM IST

Updated : Sep 16, 2023, 10:40 AM IST

ಅನಂತಪುರ (ಆಂಧ್ರಪ್ರದೇಶ): ಮನೆಯ ಮುಂದೆ ಮಲಗಿದ್ದ ದಂಪತಿಯನ್ನು ದುಷ್ಕರ್ಮಿಯೊಬ್ಬ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಶುಕ್ರವಾರ ರಾತ್ರಿ ಅನಂತಪುರ ಜಿಲ್ಲೆಯ ಯಡಿಕಿ ಗ್ರಾಮದಲ್ಲಿ ನಡೆದಿದೆ. ನಿಟ್ಟೂರಿನ ಸೊಮ್ಮಕ್ಕ ಮತ್ತು ಬಾಲುರಾಜು ಮೃತರೆಂದು ಗುರುತಿಸಲಾಗಿದೆ. ಅದೇ ಗ್ರಾಮದ ಪ್ರಾಸಾದ್ ಎಂಬ ಆರೋಪಿ ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ದಂಪತಿಯ ಕೊಲೆ ಮಾಡಿ ಸುಮ್ಮನಾಗದ ಕ್ರೂರಿ ಪಕ್ಕದಲ್ಲಿ ಮಲಗಿದ್ದ ಮಗಳನ್ನು ಕೊಲೆ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಬಾಲಕಿ ಅಲ್ಲಿಂದ ತಪ್ಪಿಸಿಕೊಂಡು ಜೋರಾಗಿ ಕಿರುಚಾಟ ನಡೆಸಿದ್ದಾಳೆ. ಶಬ್ದ ಕೇಳಿದ ಗ್ರಾಮದ ಜನರು ಕೂಡಲೇ ಎಚ್ಚೆತ್ತು ಸ್ಥಳಕ್ಕೆ ಆಗಮಿಸಿದ್ದಾರೆ. ಈ ವೇಳೆ ಕೊಲೆ ನಡೆದಿರುವುದು ತಿಳಿದು ಬಂದಿದೆ. ಹಂತಕನನ್ನು ಸುತ್ತುವರಿದ ಗ್ರಾಮಸ್ಥರು ಕಲ್ಲಿನಿಂದ ಹೊಡೆದು ಆತನನ್ನು ಕೊಂದಿದ್ದಾರೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೂರು ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ತನಿಖೆಯನ್ನು ಅನಂತಪುರ ಪೊಲೀಸರು ಮುಂದುವರೆಸಿದ್ದಾರೆ.

ತಕ್ಷಣಕ್ಕೆ ದಂಪತಿ ಕೊಲೆಗೆ ಕಾರಣ ಏನು ಎಂಬುದು ಗೊತ್ತಾಗಿಲ್ಲ. ಈ ನಡುವೆ ಜನರಿಂದ ಏಟು ತಿಂದು ಸತ್ತಿರುವ ಆರೋಪಿಗೂ ದಂಪತಿಗಳ ನಡುವೆ ಏನಾದರೂ ಕಲಹ ಏರ್ಪಟ್ಟಿತ್ತಾ ಎಂಬ ಬಗ್ಗೆ ಪೊಲೀಸರು ಕೂಷಂಕಷ ವಿಚಾರಣೆ ಮತ್ತು ತಪಾಸಣೆ ನಡೆಸುತ್ತಿದ್ದಾರೆ.

ಮಧ್ಯಪ್ರದೇಶದಲ್ಲೂ ನಡೆದಿದ್ದ ಘಟನೆ: ಕೆಲದಿನಗಳ ಹಿಂದೆ ಮಧ್ಯಪ್ರದೇಶದಲ್ಲೂ ಇಂತಹದ್ದೇ ಘಟನೆ ನಡೆದಿತ್ತು. ಮನೆಯ ಮಾಳಿಗೆ ಮೇಲೆ ಮಲಗಿದ್ದ ವೃದ್ಧ ದಂಪತಿ ಹಾಗೂ 12 ವರ್ಷದ ಮೊಮ್ಮಗಳನ್ನು ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿಯಾಗಿದ್ದರು. 62 ವರ್ಷದ ವ್ಯಕ್ತಿ, ಆತನ 57 ವರ್ಷದ ಪತ್ನಿ ಮತ್ತು 12 ವರ್ಷದ ಮೊಮ್ಮಗಳು ಮನೆಯ ಮಾಳಿಗೆ ಮೇಲೆ ಮಲಗಿದ್ದರು. ಈ ವೇಳೆ ಹಂತಕರು ಮೂವರ ಕತ್ತು ಕೊಯ್ದು ಕೊಲೆ ಮಾಡಿದ್ದರು. ಮೃತ ವೃದ್ಧೆಯ ತಲೆಯು ಮನೆಯಿಂದ ಒಂದು ಕಿ.ಮೀ. ದೂರದ ಹೊಲದಲ್ಲಿ ಪತ್ತೆಯಾಗಿತ್ತು.

ಬೆಳಗಾವಿಯಲ್ಲೂ ಪ್ರಕಣ: ಇತ್ತೀಚೆಗೆ ಬೆಳಗಾವಿಯಲ್ಲಿ ಮನೆಯ ಮುಂದೆ ಮಲಗಿದ್ದ ವ್ಯಕ್ತಿಯೊಬ್ಬರನ್ನು ತಡರಾತ್ರಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದ ಘಟನೆ ನಗರದಲ್ಲಿ ನಡೆದಿತ್ತು. ಸುಧೀರ್ ಕಾಂಬಳೆ ಎನ್ನುವವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ತಡರಾತ್ರಿ ಸುಧೀರ್ ಮನೆಗೆ ನುಗ್ಗಿದ ದುಷ್ಕರ್ಮಿಗಳು, ಕತ್ತು, ಕೈ, ಹೊಟ್ಟೆ, ಮುಖಕ್ಕೆ ಇರಿದು ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡ ಸುಧೀರ್ ಸ್ಥಳದಲ್ಲೇ ಮೃತಪಟ್ಟಿದ್ದರು. ಘಟನೆ ಸಂಬಂಧ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕಣ ದಾಖಲಾಗಿದೆ.

ಇದನ್ನೂ ಓದಿ: ಶಿರಸಿ: ಅಪರಿಚಿತ ವ್ಯಕ್ತಿಯ ಬರ್ಬರ ಹತ್ಯೆ

Last Updated : Sep 16, 2023, 10:40 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.