ETV Bharat / bharat

ಕಾಶ್ಮೀರದಲ್ಲಿ ಬಿಜೆಪಿ ನಾಯಕ, ಅವರ ಪತ್ನಿಗೆ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು - Gh Rasool Dar and

ಕುಲ್ಗಾಂನ ಬಿಜೆಪಿ ಕಿಸಾನ್ ಮೋರ್ಚಾದ ಜಿಲ್ಲಾಧ್ಯಕ್ಷ ಜಿ ಎಚ್ ರಸೂಲ್ ದಾರ್ ಮತ್ತು ಅವರ ಪತ್ನಿ ಜವ್ಹಿರಾ ಅವರನ್ನು ಅನಂತನಾಗ್​ನಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಈ ಕೃತ್ಯವನ್ನು ಖಂಡಿಸಿದ್ದಾರೆ.

ಬಿಜೆಪಿ ನಾಯಕ, ಅವರ ಪತ್ನಿಯ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು
BJP Sarpanch Gh Rasool Dar and his wife Jawhira shot dead
author img

By

Published : Aug 9, 2021, 6:29 PM IST

ಅನಂತನಾಗ್ (ಜಮ್ಮು & ಕಾಶ್ಮೀರ): ಜಮ್ಮು ಕಾಶ್ಮೀರದ ಕುಲ್ಗಾಂನ ಬಿಜೆಪಿ ಕಿಸಾನ್ ಮೋರ್ಚಾದ ಜಿಲ್ಲಾಧ್ಯಕ್ಷ ಜಿ ಎಚ್ ರಸೂಲ್ ದಾರ್ ಮತ್ತು ಅವರ ಪತ್ನಿ ಜವ್ಹಿರಾ ಅವರನ್ನು ಅನಂತನಾಗ್​ನಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ರಸೂಲ್ ದಾರ್ ದಂಪತಿ ಕುಲ್ಗಾಂ ನಿವಾಸಿಗಳಾಗಿದ್ದು, ಅನಂತನಾಗ್‌ ಜಿಲ್ಲೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಅಪರಿಚಿತ ಬಂದೂಕುಧಾರಿಗಳು ಅನಂತನಾಗ್‌ನ ಲಾಲ್ ಚೌಕ್‌ನಲ್ಲಿ ಇವರಿಬ್ಬರ ಮೇಲೆ ಗುಂಡು ಹಾರಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಇವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬದುಕುಳಿಯಲಿಲ್ಲ.

  • I strongly condemn brutal terrorist attack on the Sarpanch GH Rasool Dar and his wife Jawhara Banoo of Redwani Bala,Kulgam.This is an act of cowardice & perpetrators of violence will be brought to justice very soon. My deepest condolences to bereaved family in this time of grief.

    — Office of LG J&K (@OfficeOfLGJandK) August 9, 2021 " class="align-text-top noRightClick twitterSection" data=" ">

ಈ ದಾಳಿಯನ್ನು ಜಮ್ಮು ಕಾಶ್ಮೀರದ ಬಿಜೆಪಿ ವಕ್ತಾರ ಅಲ್ತಾಫ್ ಠಾಕೂರ್ ಖಂಡಿಸಿದ್ದು, ಇದೊಂದು ಅನಾಗರಿಕ ಮತ್ತು ಹೇಡಿತನದ ಕೃತ್ಯವೆಂದು ಹೇಳಿದ್ದಾರೆ. ದುಷ್ಕರ್ಮಿಗಳನ್ನು ಸೆರೆಹಿಡಿದು ಕಠಿಣ ಶಿಕ್ಷೆ ನೀಡುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.

ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಕೂಡ ಕ್ರೂರ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸುವುದಾಗಿ ಟ್ವೀಟ್​ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.