ಅಮರಾವತಿ(ಆಂಧ್ರಪ್ರದೇಶ): ಆನಂದಯ್ಯ ಕಣ್ಣಿನ ಹನಿ ಔಷಧಿ ವಿತರಣೆ ಕುರಿತು ತಜ್ಞರ ಸಮಿತಿಯ ವರದಿ ಬರಬೇಕು ಎಂದು ಆಂಧ್ರ ಸರ್ಕಾರ ನ್ಯಾಯಾಲಯಕ್ಕೆ ಕೋರಿದ್ದು, ಈ ಕುರಿತ ತೀರ್ಪನ್ನು ಎಪಿ ಹೈಕೋರ್ಟ್ ಕಾಯ್ದಿರಿಸಿದೆ.
ತುರ್ತು ಪರಿಸ್ಥಿತಿಯಲ್ಲಿರುವವರಿಗೆ ಕಣ್ಣಿನ ಔಷಧಿ (ಐ ಡ್ರಾಪ್ಸ್) ಅನುಮತಿಸಲಾಗುತ್ತದೆಯೇ ಎಂದು ನ್ಯಾಯಾಲಯ ಪ್ರಶ್ನಿಸಿದ್ದು, ಆಗ ಎಲ್ಲರೂ ತುರ್ತು ಪರಿಸ್ಥಿತಿಯನ್ನು ನೆಪವಾಗಿಸಿಕೊಂಡು ಬರುತ್ತಾರೆ ಎಂದು ಸರ್ಕಾರ ಹೇಳಿದೆ.
ದಿನಕ್ಕೆ 15 ರಿಂದ 20 ಜನರು ಮಾತ್ರ ಬರುತ್ತಾರೆ ಎಂದು ಆನಂದಯ್ಯ ಅವರ ಪರ ನ್ಯಾಯವಾದಿ ಬಾಲಾಜಿ ನ್ಯಾಯಾಲಯಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರ ನಾವು ಆನಂದಯ್ಯರ ಔಷಧವನ್ನು ವಿರೋಧಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿತು.
ಕಣ್ಣಿನ ಔಷಧಿ ಹನಿಗಳನ್ನು ಹೊರತುಪಡಿಸಿ ಎಲ್ಲದಕ್ಕೂ ಸರ್ಕಾರ ಅನುಮತಿ ನೀಡಿದೆ ಎಂದು ನ್ಯಾಯಾಲಯ ತಿಳಿಸಿತು. ಕಣ್ಣಿನ ಔಷಧಿ ನೀಡಲು ಸರ್ಕಾರ ಸಿದ್ಧವಾಗಿಲ್ಲ, ವರದಿ ಬರುವವರೆಗೆ 3 ವಾರಗಳ ಕಾಲಾವಕಾಶ ನೀಡುವಂತೆ ಹೈಕೋರ್ಟ್‌ಗೆ ಆನಂದಯ್ಯ ಪರ ನ್ಯಾಯವಾದಿಗಳು ಮನವಿ ಮಾಡಿಕೊಂಡರು.