ETV Bharat / bharat

ಕಾರು ಖರೀದಿಗೆ ಹೋಗಿದ್ದ ತುಮಕೂರು ರೈತನಿಗೆ ಅವಮಾನ : ಟ್ವೀಟ್ ಮಾಡಿ ಆನಂದ್ ಮಹೀಂದ್ರಾ ಹೇಳಿದ್ರು ಈ ಮಾತು! - ರೈತನ ಅವಮಾನ ಪ್ರಕರಣಕ್ಕೆ ಮಹೀಂದ್ರ ಟ್ವೀಟ್​

Anand Mahindra Reaction on Tumkuru Show room incident : ವಾಹನ ಖರೀದಿಸಲು ರೈತನೋರ್ವ ಕಾರು ಶೋ ರೂಮ್​ಗೆ ತೆರಳಿದ್ದ ವೇಳೆ ಅಲ್ಲಿನ ಸಿಬ್ಬಂದಿ ಹೀಯಾಳಿಸಿ ಕಳಿಸಿರುವ ಘಟನೆ ನಡೆದಿತ್ತು. ಇದರ ಬೆನ್ನಲ್ಲೇ ಅವಮಾನಕ್ಕೊಳಗಾಗಿದ್ದ ಗ್ರಾಹಕ, ಒಂದೇ ತಾಸಲ್ಲಿ 10 ಲಕ್ಷ ರೂ. ತೆಗೆದುಕೊಂಡು ಹೋಗಿದ್ದರು..

Anand Mahindra tweet on Farmer humiliated case

author img

By

Published : Jan 25, 2022, 7:19 PM IST

ನವದೆಹಲಿ : ಕರ್ನಾಟಕದ ತುಮಕೂರು ಜಿಲ್ಲೆಯಲ್ಲಿರುವ ತಮ್ಮ ಶೋರೂಮ್​ಗೆ ಕಾರು ಖರೀದಿಸಲು ಬಂದಿದ್ದ ರೈತನೋರ್ವನಿಗೆ ಆತ ಧರಿಸಿದ್ದ ಬಟ್ಟೆ ನೋಡಿ ಕಾರು ಶೋ ರೂಮ್​ ಸಿಬ್ಬಂದಿ ಹೀಯಾಳಿಸಿರುವ ಘಟನೆ ಇತ್ತೀಚೆಗೆ ನಡೆದಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಹೀಂದ್ರಾ ಆ್ಯಂಡ್​ ಮಹೀಂದ್ರಾ ಕಂಪನಿ ಮುಖ್ಯಸ್ಥ ಆನಂದ್ ಮಹೀಂದ್ರಾ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲ ವ್ಯಕ್ತಿಗಳ ಘನತೆ ಎತ್ತಿ ಹಿಡಿಯುವುದು ನಮ್ಮ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ.

ನಮ್ಮ ಸಮುದಾಯಗಳು ಮತ್ತು ಎಲ್ಲ ಪಾಲುದಾರರಿಗೆ ಶಕ್ತಿ ತುಂಬುವುದು ಮಹೀಂದ್ರಾ ಕಂಪನಿಯ ಪ್ರಮುಖ ಮೌಲ್ಯವಾಗಿದೆ. ಈ ನಿರ್ಧಾರಗಳಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯಲು ಸಾಧ್ಯವಿಲ್ಲ. ಈ ನೀತಿಗಳಿಗೆ ವಿರುದ್ಧವಾಗಿ ನಡೆಯುವ ಬೆಳವಣಿಗೆಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.

  • The Core Purpose of @MahindraRise is to enable our communities & all stakeholders to Rise.And a key Core Value is to uphold the Dignity of the Individual. Any aberration from this philosophy will be addressed with great urgency. https://t.co/m3jeCNlV3w

    — anand mahindra (@anandmahindra) January 25, 2022 " class="align-text-top noRightClick twitterSection" data=" ">

ವಾಹನ ಖರೀದಿಸಲು ರೈತನೋರ್ವ ಕಾರು ಶೋ ರೂಮ್​ಗೆ ತೆರಳಿದ್ದ ವೇಳೆ ಅಲ್ಲಿನ ಸಿಬ್ಬಂದಿ ಹೀಯಾಳಿಸಿ ಕಳಿಸಿರುವ ಘಟನೆ ನಡೆದಿತ್ತು. ಇದರ ಬೆನ್ನಲ್ಲೇ ಅವಮಾನಕ್ಕೊಳಗಾಗಿದ್ದ ಗ್ರಾಹಕ, ಒಂದೇ ತಾಸಲ್ಲಿ 10 ಲಕ್ಷ ರೂ. ತೆಗೆದುಕೊಂಡು ಹೋಗಿದ್ದರು.

ಈ ಘಟನೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆ ಕಂಪನಿಯ ಸಿಇಒ ವಿಜಯ್ ನಕ್ರಾ ಹಾಗೂ ಅಧ್ಯಕ್ಷ ಆನಂದ್ ಮಹೀಂದ್ರಾ ಅವರಿಗೆ ಟ್ಯಾಗ್​ ಮಾಡಿದ್ದರು.

ಇದನ್ನೂ ಓದಿರಿ: ಬಟ್ಟೆ ನೋಡಿ ಶೋ ರೂಮ್ ಸಿಬ್ಬಂದಿ ಅವಮಾನಿಸಿದ ಆರೋಪ: ಕೆರಳಿದ 'ಕೆಂಪೇಗೌಡ' ಮಾಡಿದ್ದೇನು?

ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕಂಪನಿಯ ಸಿಇಒ ವಿಜಯ್​ ನಕ್ರಾ ಕೂಡ ಗ್ರಾಹಕರಿಗೆ ಉತ್ತಮವಾದ ಸೇವೆ ಒದಗಿಸಬೇಕು. ಅವರನ್ನ ಗೌರವ ಮತ್ತು ಘನತೆಯಿಂದ ಕಾಣಬೇಕು ಎಂಬುದು ನಮ್ಮ ನಿಯಮವಾಗಿದೆ. ತುಮಕೂರಿನಲ್ಲಿ ನಡೆದ ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದಿದ್ದಾರೆ.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.