ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ದೇಶದ ಮುಂಚೂಣಿ ಉದ್ಯಮಿ ಆನಂದ್ ಮಹೀಂದ್ರಾ ಸದಭಿರುಚಿಯ ವಿಡಿಯೋದಗನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಇದೀಗ ಹಂಚಿಕೊಂಡಿರುವ ಹೊಸ ವಿಡಿಯೋ ತುಣುಕೊಂದು ನೆಟ್ಟಿಗರ ಗಮನ ಸೆಳೆದಿದ್ದು, ವೈರಲ್ ಆಗುತ್ತಿದೆ. ತಮ್ಮ ಟ್ವಿಟರ್ ಖಾತೆಯಲ್ಲಿ 'ಈತ ಮುಂದಿನ ಪೀಳಿಗೆಯ ಪ್ರತಿಭೆ' ಎಂದು ಶೀರ್ಷಿಕೆ ಕೊಟ್ಟು, ಚಿಕ್ಕ ಬಾಲಕನ ವಿಡಿಯೋ ಶೇರ್ ಮಾಡಿದ್ದಾರೆ. ಇದರ ಜೊತೆಗೆ ಈ ಪ್ರತಿಭೆಗೆ ಟ್ರ್ಯಾಕ್ನ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ.
-
And after the Gold rush for India at the #CWG2022 the next generation of talent is shaping up. Unsupported. We need to get this talent on the fast track. (This video shared by a friend who has seen this boy in a village near Tirunelveli) pic.twitter.com/DXBcGQjMX0
— anand mahindra (@anandmahindra) August 9, 2022 " class="align-text-top noRightClick twitterSection" data="
">And after the Gold rush for India at the #CWG2022 the next generation of talent is shaping up. Unsupported. We need to get this talent on the fast track. (This video shared by a friend who has seen this boy in a village near Tirunelveli) pic.twitter.com/DXBcGQjMX0
— anand mahindra (@anandmahindra) August 9, 2022And after the Gold rush for India at the #CWG2022 the next generation of talent is shaping up. Unsupported. We need to get this talent on the fast track. (This video shared by a friend who has seen this boy in a village near Tirunelveli) pic.twitter.com/DXBcGQjMX0
— anand mahindra (@anandmahindra) August 9, 2022
ವಿಡಿಯೋದಲ್ಲೇನಿದೆ?: ಬಾಲಕನೋರ್ವ ರಸ್ತೆ ಮಧ್ಯ ಭಾಗದಲ್ಲಿ ಪಲ್ಟಿ ಹೊಡೆಯುತ್ತಾ ಮುಂದೆ ಸಾಗುತ್ತಿದ್ದಾನೆ. ತಮಿಳುನಾಡಿನ ತಿರುನೆಲ್ವೇಲಿ ಸಮೀಪದ ಹಳ್ಳಿಯೊಂದರಲ್ಲಿ ತೆಗೆದ ವಿಡಿಯೋ ಇದೆಂದು ಹೇಳಲಾಗುತ್ತಿದೆ. ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತದ ಅಥ್ಲೀಟ್ಸ್ ಅನೇಕ ಚಿನ್ನದ ಪದಕಗಳನ್ನು ಹೊತ್ತು ದೇಶಕ್ಕೆ ಮರಳಿದ್ದಾರೆ. ಆದರೆ, ಇದೀಗ ಮುಂದಿನ ಪೀಳಿಗೆಯ ಪ್ರತಿಭೆಗಳು ರೂಪುಗೊಳ್ಳುತ್ತಿವೆ. ಇವರಿಗೆ ನಮ್ಮ ಬೆಂಬಲ ಬೇಕು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಈ ಮರದ ಟ್ರೆಡ್ಮಿಲ್ಗೆ ಫಿದಾ ಆದ ಆನಂದ್ ಮಹೀಂದ್ರಾ: ತಮಗೂ ಬೇಕು ಎಂದು ಮನವಿ
ಕಳೆದ ಕೆಲ ಗಂಟೆಗಳ ಹಿಂದೆ ಈ ವಿಡಿಯೋ ಆನಂದ್ ಮಹೀಂದ್ರಾ ಅವರ ಟ್ವಿಟರ್ ಖಾತೆಯಲ್ಲಿ ಶೇರ್ ಆಗಿದ್ದು, ಈಗಾಗಲೇ ಲಕ್ಷಾಂತರ ವೀಕ್ಷಣೆ ಸಿಕ್ಕಿದೆ. ಸಾವಿರಾರು ಜನರು ಲೈಕ್ಸ್ ನೀಡಿ ಮೆಚ್ಚಿಕೊಂಡಿದ್ದಾರೆ. ಅನೇಕರು ತರಹೇವಾರಿ ಕಮೆಂಟ್ ಮಾಡಿದ್ದಾರೆ.