ETV Bharat / bharat

Must Watch.. ಇದು ಭಾರತದ 'ದೇಶಿ ಡ್ರೈವರ್​​ಲೆಸ್​​ ಬೈಕ್'​.. ವಿಡಿಯೋ ಹಂಚಿಕೊಂಡ ಆನಂದ್​ ಮಹೀಂದ್ರ

ವಿಭಿನ್ನ ಟ್ರೆಂಡಿಂಗ್​ ಟ್ವೀಟ್​ಗಳ ಮೂಲಕ ಸದಾ ಸುದ್ದಿಯಾಗುವ ಮಹೀಂದ್ರ ಕಂಪನಿ ಮಾಲೀಕ ಆನಂದ್ ಮಹೀಂದ್ರ ಮತ್ತೊಂದು ವಿಭಿನ್ನ ವಿಡಿಯೋ ಶೇರ್ ಮಾಡಿದ್ದಾರೆ.

Desi driverless motorcycle
Desi driverless motorcycle
author img

By

Published : Oct 20, 2021, 4:46 PM IST

ಮುಂಬೈ: ಸದಾ ಒಂದಿಲ್ಲೊಂದು ವಿಭಿನ್ನ ರೀತಿಯ ವಿಡಿಯೋ ಶೇರ್​​ ಮಾಡಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಫುಲ್​ ಸಕ್ರಿಯರಾಗಿರುವ ಮಹೇಂದ್ರ ಆಂಡ್ ಮಹೀಂದ್ರ ಕಂಪನಿ ಮುಖ್ಯಸ್ಥರಾಗಿರುವ ಆನಂದ್​ ಮಹೀಂದ್ರ ಇದೀಗ ಮತ್ತೊಂದು ವಿಭಿನ್ನವಾದ ವಿಡಿಯೋ ಹಂಚಿಕೊಂಡಿದ್ದಾರೆ.

ಬೈಕ್​ ಸವಾರನೊಬ್ಬ ಪಲ್ಸರ್​​ ಬೈಕ್​ನ ಹಿಂದಿನ ಸೀಟಿನಲ್ಲಿ ಕುಳಿತುಕೊಂಡು ಹೊರಟಿರುವ ವಿಡಿಯೋ ಇದಾಗಿದ್ದು, ರೈಡರ್​ ಇಲ್ಲದೇ ಬೈಕ್​ ಓಡಿಸುತ್ತಿರುವ ಕಾರಣ ಅದು ತನ್ನಷ್ಟಕ್ಕೆ ತಾನೇ ಹೋಗುತ್ತಿದೆ. ಹೀಗಾಗಿ ಅನೇಕರು ಇದು ಭಾರತದ 'ಡ್ರೈವರ್​ಲೆಸ್​ ಬೈಕ್' ಎಂದು ಕರೆದಿದ್ದಾರೆ. ಈ ವಿಡಿಯೋ ಹಂಚಿಕೊಂಡಿರುವ ಆನಂದ್ ಮಹೀಂದ್ರ, ಅಮೆರಿಕದ ಟೆಸ್ಲಾ ಕಂಪನಿ ವಾಹನಕ್ಕೆ ಪೈಪೋಟಿ ನೀಡಬಹುದಾದ ಭಾರತದ ದೇಸಿ ಡ್ರೈವರ್​​ಲೆಸ್​​ ಬೈಕ್ ಇದಾಗಿದೆ ಎಂದಿದ್ದಾರೆ. ಜೊತೆಗೆ ಹಿಂದಿ ಹಾಡಿನ ಕೆಲ ಸಾಲು ಬರೆದುಕೊಂಡಿದ್ದಾರೆ.

ಈಗಾಗಲೇ ಡ್ರೈವರ್​​ಲೆಸ್​ ವಾಹನ ಅಭಿವೃದ್ಧಿ ಪಡಿಸಲು ಅಮೆರಿಕ, ಜಪಾನ್​, ಚೀನಾ ಸೇರಿದಂತೆ ಅನೇಕ ದೇಶಗಳಲ್ಲಿ ಪ್ರಯೋಗ ನಡೆಯುತ್ತಿದ್ದು, ಈ ಎಲ್ಲ ವಾಹನಗಳಿಗೆ ಭಾರತದ ದೇಶಿ ಡ್ರೈವರ್​ಲೆಸ್​​ ವಾಹನ ಪೈಪೋಟಿ ನೀಡಬಲ್ಲದು ಎಂದಿದ್ದಾರೆ.

ಇದನ್ನೂ ಓದಿರಿ: CCTV Video.. ಮಾಜಿ ಲವರ್​ಗೆ ನಡುರಸ್ತೆಯಲ್ಲೇ ಚಾಕುವಿನಿಂದ ಇರಿದು ಕೊಲೆಗೈದ ಪಾಗಲ್​ ಪ್ರೇಮಿ

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆ ಲಕ್ಷಾಂತರ ಜನರಿಂದ ವೀಕ್ಷಣೆಗೊಳಗಾಗಿದ್ದು, ಸಾವಿರಾರು ಜನರು ತರಹೇವಾರಿ ಕಮೆಂಟ್​ ಸಹ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.