ನವದೆಹಲಿ: ತಮಿಳುನಾಡಿನ ಮಾಮಲ್ಲಪುರಂನಲ್ಲಿ 44ನೇ ಚೆಸ್ ಒಲಂಪಿಯಾಡ್ ನಡೆಯುತ್ತಿದೆ. ಇದಕ್ಕಾಗಿ ಸಿದ್ಧಪಡಿಸಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದೆ. ಅಲ್ಲದೇ, ಭಾರಿ ಮೆಚ್ಚುಗೆಗೂ ಪಾತ್ರವಾಗಿದೆ. ಈ ವಿಡಿಯೋವನ್ನು ಉದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
“ಅದ್ಭುತವಾದ ವಿಡಿಯೋ. ಅದ್ಭುತ ನೃತ್ಯ ಸಂಯೋಜನೆ. ವಿಡಿಯೋದಲ್ಲಿನ ಚದುರಂಗದ ತುಣುಕುಗಳು ನಮ್ಮ ಕಲ್ಪನೆಯನ್ನು ಜೀವಂತವಾಗುವಂತೆ ಮಾಡುತ್ತದೆ. ಭಾರತದ ಪ್ರಾಚೀನ ಆಟವು ಅಧಿಕೃತವಾಗಿದೆ. ಇದನ್ನು ಕಟ್ಟಿಕೊಟ್ಟ ತಮಿಳುನಾಡಿನ ಪುದುಕ್ಕೊಟ್ಟೈ ಜಿಲ್ಲಾಧಿಕಾರಿಯಾದ ಶ್ರೀಮತಿ ಕವಿತಾ ರಾಮು ಅವರಿಗೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.
-
Superb. Choreographed, I’m told, by Ms Kavitha Ramu, Collector Pudukkottai. Makes the chess pieces come alive in our imagination. Also it has authenticity, given the game was invented in India. Bravo! pic.twitter.com/BZCQvluyFz
— anand mahindra (@anandmahindra) July 29, 2022 " class="align-text-top noRightClick twitterSection" data="
">Superb. Choreographed, I’m told, by Ms Kavitha Ramu, Collector Pudukkottai. Makes the chess pieces come alive in our imagination. Also it has authenticity, given the game was invented in India. Bravo! pic.twitter.com/BZCQvluyFz
— anand mahindra (@anandmahindra) July 29, 2022Superb. Choreographed, I’m told, by Ms Kavitha Ramu, Collector Pudukkottai. Makes the chess pieces come alive in our imagination. Also it has authenticity, given the game was invented in India. Bravo! pic.twitter.com/BZCQvluyFz
— anand mahindra (@anandmahindra) July 29, 2022
ಒಲಂಪಿಯಾಡ್ಗೆ ಕಳೆದ ವಾರ ಅದ್ಧೂರಿ ಚಾಲನೆ ಸಿಕ್ಕಿದೆ. ಈ ವಿಡಿಯೋ ಕ್ಲಪ್ ಅನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಸರಣಿ ಟ್ವೀಟ್‌ಗಳಲ್ಲಿ ವಿವರಗಳೊಂದಿಗೆ ಹಂಚಿಕೊಂಡಿದ್ದರು.
ನವಿರೇಳಿಸುವ ವಿಡಿಯೋ: ಕಪ್ಪು ಬಿಳುಪಿನಲ್ಲಿ ಚೆಸ್ ಮಾದರಿಯ ಅಂಕಣವನ್ನು ಸಿದ್ಧಪಡಿಸಲಾಗಿದ್ದು, ಕಲಾವಿದರನ್ನು ಬಳಸಿಕೊಂಡು ಶಾಸ್ತ್ರೀಯ, ಜಾನಪದ, ಸಮರಕಲೆಗಳೊಂದಿಗೆ ನೃತ್ಯ ಸಂಯೋಜನೆ ಮಾಡಲಾಗಿದೆ. ಆಟದ ಕಾಯಿಗಳಂತೆಯೇ ಕಲಾವಿದರು ಚಲಿಸುತ್ತಾ ನೃತ್ಯದ ಜೊತೆಗೆ ಭಾವಭಂಗಿಗಳನ್ನು ಪ್ರದರ್ಶಿಸುತ್ತಾರೆ. ಇದು ಚೆಸ್ ಬೋರ್ಡ್ ಮೇಲೆ ಆಟದ ಕಾಯಿಗಳು ಜೀವಂತವಾಗಿ ಯುದ್ಧ ನಡೆಸಿದಂತೆ ಭಾಸವಾಗುತ್ತದೆ.
ಈ ವಿಡಿಯೋಗೆ ಪುದುಕ್ಕೊಟ್ಟೈ ಜಿಲ್ಲಾಧಿಕಾರಿ ಕವಿತಾ ರಾಮು ಅವರು ನೃತ್ಯ ಸಂಯೋಜನೆಯನ್ನು ಮಾಡಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ತ್ರಿವರ್ಣ ಧ್ವಜವನ್ನು ಸಾಮಾಜಿಕ ಮಾಧ್ಯಮಗಳ ಡಿಪಿಯಾಗಿ ಬಳಸಿ: ಪ್ರಧಾನಿ ಮೋದಿ ಕರೆ