ETV Bharat / bharat

ಆನೆ ಮುಂದೆ ಬಾಲಕಿಯ ನೃತ್ಯ: ಕಟೀಲಿನ ವಿಡಿಯೋ ಹಂಚಿಕೊಂಡ ಆನಂದ್‌ ಮಹೀಂದ್ರಾ - ದೇವಾಲಯದ ಆನೆ

ದಕ್ಷಿಣ ಕನ್ನಡ ಜಿಲ್ಲೆಯ ಕಟೀಲಿನ ಪ್ರಸಿದ್ಧ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಆವರಣದಿಂದ ಚಿತ್ರೀಕರಿಸಿದ 57 ಸೆಕೆಂಡ್​ಗಳ ವಿಡಿಯೋವನ್ನು ಮಹೀಂದ್ರ ಗ್ರೂಪ್‌ನ ಚೇರ್‌ಮನ್ ಆನಂದ್ ಮಹೀಂದ್ರಾ ಟ್ವೀಟ್​ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

viral video
ವೈರಲ್​ ವಿಡಿಯೋ
author img

By

Published : Jan 1, 2023, 12:14 PM IST

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಮಹೀಂದ್ರಾ ಸಮೂಹ ಸಂಸ್ಥೆಗಳ ಮುಖ್ಯಸ್ಥ ಆನಂದ್ ಮಹೀಂದ್ರಾ ಅವರು ಆಗಾಗ್ಗೆ ತಮ್ಮ ಇನ್ಸ್​ಸ್ಟಾಗ್ರಾಮ್​, ಟ್ವಿಟರ್ ಖಾತೆಗಳಲ್ಲಿ ಕುತೂಹಲಕಾರಿ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಹೊಸ ವರ್ಷದ ಶುಭ ಸಂದರ್ಭದಲ್ಲಿ ಪೋಸ್ಟ್ ಮಾಡಿರುವ ವಿಡಿಯೋ ಕ್ಲಿಪ್​ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮನ ಗೆದ್ದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕಟೀಲಿನ ಪ್ರಸಿದ್ಧ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಆವರಣದಿಂದ ಚಿತ್ರೀಕರಿಸಿದ 57 ಸೆಕೆಂಡ್​ಗಳ ವಿಡಿಯೋವನ್ನು ಉದ್ಯಮಿ ಶೇರ್​ ಮಾಡಿದ್ದಾರೆ. ಈ ವಿಡಿಯೋದಲ್ಲಿ ದೇವಾಲಯದ ಆನೆಯ ಮುಂದೆ ಸಾಂಪ್ರದಾಯಿಕ ಉಡುಗೆಯಲ್ಲಿ ಬಾಲಕಿಯೊಬ್ಬಳು ನೃತ್ಯ ಪ್ರದರ್ಶನ ನೀಡುತ್ತಿರುವುದನ್ನು ಕಾಣಬಹುದು. ಆಕೆಯ ಹಿಂಭಾಗದಲ್ಲಿ ಆನೆ ಮತ್ತು ಅದರ ಮಾವುತ ನಿಂತಿದ್ದಾರೆ. ಬಾಲಕಿ ಆನೆಯ ಕಡೆ ತಿರುಗಿ, ಆಶೀರ್ವಾದ ಯಾಚಿಸುವ ಹಾಗೆ ಎರಡೂ ಕೈ ಜೋಡಿಸಿ ನಮಸ್ಕರಿಸಿದಾಗ ಆನೆಯು ಬಹಳ ಸೌಮ್ಯವಾಗಿ ತನ್ನ ಸೊಂಡಿಲನ್ನು ಆಕೆಯ ತಲೆಯ ಮೇಲಿಡುತ್ತದೆ. ಬಳಿಕ ಯುವತಿ ತನ್ನ ನೃತ್ಯ ಮುಂದುವರೆಸಿದಾಗ ಆನೆ ಆಶೀರ್ವಸುವುದನ್ನು ಮುಂದುವರಿಸುತ್ತದೆ ಮತ್ತು ಆಕೆಗೆ ಪ್ರೋತ್ಸಾಹ ನೀಡುವ ಹಾಗೆಯೇ ತನ್ನ ತಲೆ ಅಲ್ಲಾಡಿಸುತ್ತದೆ.

  • Sri Durgaaparameshwari temple , Kateel, Karnataka.
    Amazing. And I would like to think the Temple Elephant is bestowing a blessing on all of us for a Happier New Year! 😊 pic.twitter.com/s2xdqV8w5D

    — anand mahindra (@anandmahindra) December 31, 2022 " class="align-text-top noRightClick twitterSection" data=" ">

ಶನಿವಾರ ಈ ವಿಡಿಯೋ ಪೋಸ್ಟ್ ಮಾಡಿರುವ ಆನಂದ್ ಮಹೀಂದ್ರಾ, 'ಅದ್ಭುತ ದೃಶ್ಯವಿದು. ಹೊಸ ವರ್ಷದ ಹಿನ್ನೆಲೆಯಲ್ಲಿ ದೇವಸ್ಥಾನದ ಆನೆಯು ನಮಗೆಲ್ಲರಿಗೂ ಸಂತೋಷದಿಂದ ಆಶೀರ್ವಾದ ಮಾಡುತ್ತಿದೆ ಎಂದು ನಾನು ಭಾವಿಸುತ್ತೇನೆ' ಎಂದು ಬರೆದಿದ್ದಾರೆ. ವಿಡಿಯೋ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ 278,000 ಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಅನೇಕರು ಅದ್ಭುತ ವಿಡಿಯೋ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕುಕ್ಕೆಯ ಪ್ರಾಕೃತಿಕ ಸೊಬಗಿನ ರಸ್ತೆಯ ಚಿತ್ರವನ್ನು ಟ್ವೀಟ್ ಮಾಡಿದ ಆನಂದ್ ಮಹೀಂದ್ರಾ!

ಇತ್ತೀಚೆಗೆ ಗುಂಡ್ಯ-ಸುಬ್ರಹ್ಮಣ್ಯ ಕಾಡಿನ ಫೋಟೋ ಹಂಚಿಕೊಂಡಿದ್ದರು: ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆಯ ಪ್ರಾಕೃತಿಕ ಸೊಬಗಿನ ರಸ್ತೆಯ ಚಿತ್ರವನ್ನು ಆನಂದ್ ಮಹೀಂದ್ರಾ ಟ್ವೀಟ್​ ಮಾಡಿದ್ದರು. ವಿಸಿಟ್ ಉಡುಪಿ ಎಂಬ ಟ್ವಿಟರ್ ಖಾತೆಯವರು ಇಲ್ಲಿನ ಪ್ರಕೃತಿಯ ಸುಂದರ ಚಿತ್ರ ಹಂಚಿಕೊಂಡಿದ್ದರು. ಗುಂಡ್ಯದಿಂದ ಸುಬ್ರಹ್ಮಣ್ಯಕ್ಕೆ ಸಾಗುವ ಅರಣ್ಯ ಪ್ರದೇಶ ಮಧ್ಯದಲ್ಲಿ ಸಿಗುವ ಹೆದ್ದಾರಿಯ ಚಿತ್ರವನ್ನು ‘ಜಗತ್ತಿನ ಅತ್ಯಂತ ಸುಂದರ ಕಾಡಿನ ಪ್ರಯಾಣ’ ಎಂಬ ಶೀರ್ಷಿಕೆಯಡಿ ಪೋಸ್ಟ್‌ ಮಾಡಿದ್ದರು. ಇದನ್ನು ರೀ ಟ್ವೀಟ್​ ಮಾಡಿದ್ದ ಮಹೀಂದ್ರಾ, ‘ಸುಂದರ! ಈ ಸೊಬಗಿನ ಚಿತ್ರದೊಳಗೆ ನಾನು ಧುಮುಕಲು ಬಯಸುವಂತೆ ಮಾಡುತ್ತದೆ’ ಎಂದು ಹರ್ಷ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಜೋಡೆತ್ತು, ಇಂಧನ ರಹಿತ ಕಾರಿಗೆ ರೈತನೇ ಸಾರಥಿ : ಮಹೀಂದ್ರಾ ಗಮನ ಸೆಳೆದ ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.