ETV Bharat / bharat

ಸ್ಪೆಷಲ್‌ ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರ: ಈ ರೀತಿಯ ಸುರಂಗ ನಿರ್ಮಿಸಲು ಗಡ್ಕರಿಗೆ ಮನವಿ - ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರ

ಸದಾ ಒಂದಿಲ್ಲೊಂದು ಕುತೂಹಲದ ವಿಡಿಯೋ ಶೇರ್​​ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಉದ್ಯಮಿ ಆನಂದ್​ ಮಹೀಂದ್ರ, ಇದೀಗ ಮತ್ತೊಂದು ವಿಭಿನ್ನವಾದ ವೈರಲ್ ವಿಡಿಯೋವನ್ನು ಮರು ಟ್ವೀಟ್​ ಮಾಡಿದ್ದಾರೆ.

Anand Mahindra
ಆನಂದ್ ಮಹೀಂದ್ರಾ
author img

By

Published : Aug 28, 2022, 11:23 AM IST

ನವದೆಹಲಿ: ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರ ಅವರು ಕೇಂದ್ರ ರಾಜ್ಯ ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಗ್ರಾಮೀಣ ಭಾಗದ ರಸ್ತೆಗಳ ಇಕ್ಕೆಲಗಳಲ್ಲಿ ಮರಗಳನ್ನು ನೆಡುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಕುಕ್ಕೆಯ ಪ್ರಾಕೃತಿಕ ಸೊಬಗಿನ ರಸ್ತೆಯ ಚಿತ್ರವನ್ನು ಟ್ವೀಟ್ ಮಾಡಿದ ಆನಂದ್ ಮಹೀಂದ್ರಾ!

ನಿನ್ನೆ ರಸ್ತೆಯ ಎರಡೂ ಬದಿಗಳಲ್ಲಿ ಮರಗಳಿಂದ ಕೂಡಿದ ಸುಂದರವಾದ ವಿಡಿಯೋವನ್ನು ಮರುಟ್ವೀಟ್ ಮಾಡಿರುವ ಅವರು, ವಿಡಿಯೋ ಕ್ಲಿಪ್ ಹಂಚಿಕೊಳ್ಳುವಾಗ ನಿತಿನ್ ಗಡ್ಕರಿ ಅವರಿಗೆ ವಿಶೇಷ ಮನವಿ ಮಾಡಿದ್ದಾರೆ. ಹೊಸದಾಗಿ ಗ್ರಾಮೀಣ ಭಾಗಗಳಲ್ಲಿ ನಿರ್ಮಿಸುತ್ತಿರುವ ರಸ್ತೆಗಳಲ್ಲಿ ಮರಗಳನ್ನು ನೆಡುವಂತೆ ಸಲಹೆ ಕೊಟ್ಟಿದ್ದಾರೆ.

"ನಾನು ಸುರಂಗಗಳನ್ನು ಇಷ್ಟಪಡುತ್ತೇನೆ. ಅದಕ್ಕಿಂತಲೂ ಹೆಚ್ಚಾಗಿ ಈ ರೀತಿಯ ಟ್ರನಲ್‌ನಲ್ಲಿ ಸಂಚಸಲು ಬಯಸುತ್ತೇನೆ. ನಿತಿನ್ ಗಡ್ಕರಿ ಅವರೇ ನೀವು ನಿರ್ಮಿಸುತ್ತಿರುವ ಹೊಸ ಗ್ರಾಮೀಣ ರಸ್ತೆಗಳಲ್ಲಿ ಈ ರೀತಿಯ ಟ್ರನಲ್‌ಗಳನ್ನು ಉದ್ದೇಶಪೂರ್ವಕವಾಗಿ ನೆಡಲು ಯೋಜಿಸಬಹುದೇ?" ಎಂದಿದ್ದಾರೆ. ಜೊತೆಗೆ ಟ್ರನಲ್‌ ಎಂದ ಹೊಸ ಪದ ಬಳಸಿದ್ದಾರೆ. ಇದು ಆಂಗ್ಲ ಭಾಷೆಯಲ್ಲಿ ಮರಗಳು ಮತ್ತು ಸುರಂಗ ಪದಗಳ ಸಂಯೋಜನೆಯಾಗಿದೆ.

ಇದನ್ನೂ ಓದಿ: ಆನಂದ್ ಮಹೀಂದ್ರ ಟ್ವೀಟ್​ಗೆ ಪುರುಷರು ಸ್ಟನ್​... ಹುಡುಗಿಯರನ್ನು ಚುಡಾಯಿಸುವ ಮುನ್ನ ಈ ಮೆಸೇಜ್​ ಓದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.