ETV Bharat / bharat

ಕೆಫೆಗೆ 10 ಸ್ಟಾರ್​ ನೀಡಿದ ಉದ್ಯಮಿ ಆನಂದ್​ ಮಹೀಂದ್ರಾ.. ಕಾರಣ ಗೊತ್ತಾ?

ಕಾಶ್ಮೀರದ ಗುರೇಜ್​ ಕಣಿವೆಯಲ್ಲಿ ಸೇನೆಯಿಂದ ನಡೆಸಲಾಗುತ್ತಿರುವ ಸುಂದರ ಕೆಫೆ ವಿಡಿಯೋವನ್ನು ಹಂಚಿಕೊಂಡಿರುವ ಉದ್ಯಮಿ ಆನಂದ್ ಮಹೀಂದ್ರಾ ಅವರು, ಈ ಕೆಫೆ 10 ಸ್ಟಾರ್​ ಕೊಡಬಹುದಾದಷ್ಟು ಸುಂದರವಾಗಿದೆ ಎಂದಿದ್ದಾರೆ..

ಕೆಫೆಗೆ 10 ಸ್ಟಾರ್​ ನೀಡಿದ ಉದ್ಯಮಿ ಆನಂದ್​ ಮಹೀಂದ್ರಾ

author img

By

Published : Jun 15, 2022, 7:51 PM IST

ನವದೆಹಲಿ : ಉದ್ಯಮಿ ಆನಂದ್ ಮಹೀಂದ್ರಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರುತ್ತಾರೆ. ಉಪಯುಕ್ತ ಮಾಹಿತಿಗಳನ್ನು ಹಂಚಿಕೊಳ್ಳುವ ಅವರು ಇದೀಗ ಹೋಟೆಲ್‌ವೊಂದರ ವಿಡಿಯೋವನ್ನು ಹಂಚಿಕೊಂಡಿದ್ದಲ್ಲದೇ, ಅದಕ್ಕೆ 10 ರೇಟಿಂಗ್ ನೀಡಿದ್ದಾರೆ. ಕಾರಣ ಅದು ಯಾರೋ ಖಾಸಗಿ ವ್ಯಕ್ತಿಗಳಲ್ಲ, ಖುದ್ದು ಸೇನೆಯೇ ನಡೆಸುತ್ತಿದೆ ಎಂಬುದು.

ಕಾಶ್ಮೀರದ ಗುರೇಜ್ ಕಣಿವೆಯಲ್ಲಿ ಸೇನೆಯು 'ಲಾಂಗ್ ಹ್ಯಾಟ್' ಎಂಬ ಕೆಫೆಯನ್ನು ನಡೆಸುತ್ತಿದೆ. ಗರಿಮಾ ಗೋಯಲ್ ಎಂಬ ಬ್ಲಾಗರ್ ಎತ್ತರದ ಮಂಜುಗಡ್ಡೆಗಳ ನಡುವೆ ನಡೆಸಲಾಗುತ್ತಿರುವ ಸುಂದರವಾದ ಕೆಫೆಯ ಬಗ್ಗೆ ಪ್ರವಾಸದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಈ ಹೋಟೆಲ್​ ಆಹ್ಲಾದಕರ ವಾತಾವರಣದಲ್ಲಿ ನಿರ್ಮಾಣ ಮಾಡಲಾಗಿದೆ. ಅಲ್ಲಿಗೆ ಹೋದಾಗ ನಿಸರ್ಗದ ಮಡಿಲಲ್ಲಿ ಹಾಯಾಗಿ ಕುಳಿತಂತೆ ಭಾಸವಾಗುತ್ತದೆ. ಕೆಫೆಯಲ್ಲಿನ ತಿಂಡಿ, ಪಾನೀಯ ತುಂಬಾ ರುಚಿಯಾಗಿದೆ. ಭಾರತೀಯ ಸೇನೆಯನ್ನು ಬೆಂಬಲಿಸಲು ಪ್ರತಿಯೊಬ್ಬರೂ ಈ ಕೆಫೆಗೆ ಭೇಟಿ ನೀಡುವಂತೆ ಕೋರಿ ಬರೆದುಕೊಂಡಿದ್ದಾರೆ.

ಈ ವಿಡಿಯೋ ವೈರಲ್ ಆಗಿದ್ದು, ಆನಂದ್ ಮಹೀಂದ್ರಾ ಅವರ ಗಮನ ಸೆಳೆದಿದೆ. ಈ ವಿಡಿಯೋವನ್ನು ಟ್ಯಾಗ್​ ಮಾಡಿರುವ ಅವರು, ನನ್ನ ಪ್ರಕಾರ ಈ ಕೆಫೆಗೆ 5 ಸ್ಟಾರ್, 7 ಸ್ಟಾರ್ ಅಲ್ಲ 10 ಸ್ಟಾರ್ ಕೊಡಬಹುದಾದ ಹೋಟೆಲ್​ ಇದಾಗಿದೆ ಎಂದು ಬರೆದುಕೊಂಡಿದ್ದಾರೆ. ಆನಂದ್​ ಮಹೀಂದ್ರಾರ ಟ್ವೀಟ್‌ಗೆ ಹಲವು ನೆಟಿಜನ್‌ಗಳು ಕಾಮೆಂಟ್ ಮಾಡಿದ್ದಾರೆ. ಕೆಲವರು ಸೇನೆಯಿಂದ ನಡೆಸಲ್ಪಡುವ ಇತರ ಕೆಫೆಗಳು ಮತ್ತು ಮಳಿಗೆಗಳ ಬಗ್ಗೆ ರೀ ಪೋಸ್ಟ್ ಮಾಡಿದ್ದಾರೆ.

ಓದಿ: ಕೇರಳದಲ್ಲಿ 'ಚಿನ್ನ'ದ ಫೈಟ್: ಪಿಣರಾಯಿ ವಿರುದ್ಧ ಸ್ವಪ್ನಾ ಸಾಕ್ಷ್ಯ ಬೆದರಿಕೆ, ರಾಜೀನಾಮೆಗೆ ಬಿಜೆಪಿ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.