ETV Bharat / bharat

ತೆಲಂಗಾಣ ಕಾಂಗ್ರೆಸ್​ನಲ್ಲಿ ತೀವ್ರಗೊಂಡ ಆಂತರಿಕ ಜಗಳ; ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ 12 ಮಂದಿ - ಈಟಿವಿ ಭಾರತ್​ ಕನ್ನಡ

ಹಿರಿಯ ನಾಯಕರ ಟೀಕೆಯಿಂದ ಬೇಸರಗೊಂಡ 12 ಮಂದಿ ಕಾಂಗ್ರೆಸ್​ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶಾಸಕಿ ಸೀತಕ್ಕ, ಮಾಜಿ ಶಾಸಕ ವೆಮ್​ ನರೇಂದ್ರ ರೆಡ್ಡಿ ಮತ್ತು ಇತರೆ ನಾಯಕರು ಸ್ಥಾನವನ್ನು ತೊರೆದಿದ್ದಾರೆ.

ತೆಲಂಗಾಣ ಕಾಂಗ್ರೆಸ್​ನಲ್ಲಿ ತೀಕ್ಷ್ಣಗೊಂಡ ಆತಂರಿಕ ಜಗಳ; ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ 12 ಮಂದಿ
an-internal-fight-broke-out-in-the-telangana-congress-12-people-resigned-from-the-membership
author img

By

Published : Dec 19, 2022, 3:08 PM IST

ಹೈದರಾಬಾದ್​: ತೆಲಂಗಾಣ ಕಾಂಗ್ರೆಸ್​ ನಾಯಕರ ಆಂತರಿಕ ಜಗಳ ತೀಕ್ಷ್ಣಗೊಂಡಿದೆ. ತೆಲಂಗಾಣ ಪ್ರದೇಶ ಕಾಂಗ್ರೆಸ್​ ಸಮಿತಿ (ಟಿಪಿಸಿಸಿ) ಅಧ್ಯಕ್ಷರಾಗಿರುವ ರೇವಂತ್​ ರೆಡ್ಡಿ ವಿರುದ್ಧ ಹಿರಿಯ ನಾಯಕರು ಮುನಿಸು ಮುಂದುವರೆಸಿದ್ದಾರೆ. ಬೇರೆ ಪಕ್ಷಗಳಿಂದ ವಲಸೆ ಬಂದ ನಾಯಕರಿಗೆ ಕಾಂಗ್ರೆಸ್​ ಮಣೆ ಹಾಕುತ್ತಿರುವುದರಿಂದ ಅಸಮಾಧಾನಗೊಂಡ ಪಕ್ಷದ ಹಿರಿಯ ನಾಯಕರು ರೇವಂತ್​ ರೆಡ್ಡಿ ನೇತೃತ್ವದಲ್ಲಿ ಭಾನುವಾರ ನಡೆದ ಪಕ್ಷದ ಸಭೆಗೆ ಗೈರಾಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ಹಿರಿಯ ನಾಯಕರ ಟೀಕೆಗಳಿಂದ ಬೇಸರಗೊಂಡ ಟಿಡಿಪಿಯ 12 ಮಾಜಿ ನಾಯಕರು ಕಾಂಗ್ರೆಸ್ ಸದಸ್ಯ​ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಶಾಸಕಿ ಸೀತಕ್ಕ, ಮಾಜಿ ಶಾಸಕ ವೆಮ್​ ನರೇಂದ್ರ ರೆಡ್ಡಿ ಮತ್ತು ಇತರೆ ನಾಯಕರು ಸ್ಥಾನವನ್ನು ತೊರೆದಿದ್ದಾರೆ.

ಏನಿದು ಗಲಾಟೆ: ತೆಲಂಗಾಣ ಚುನಾವಣೆ ಗಮನದಲ್ಲಿರಿಸಿಕೊಂಡು ಪಕ್ಷ ಮುಂದಿನ ತಿಂಗಳು 'ಹಾಥ್​​​ ಸೆ ಹಾಥ್​​​​ ಜೋಡೋ' ಅಭಿಯಾನ ನಡೆಸುತ್ತಿದೆ. ಈ ಸಂಬಂಧ ಪ್ರಿಯಾಂಕಾ ಗಾಂಧಿ ನೇತ್ವತ್ವದಲ್ಲಿ ರೇವಂತ್​ ರೆಡ್ಡಿ ನಾಯಕತ್ವದಲ್ಲಿ ಭಾನುವಾರ ಗಾಂಧಿ ಭವನದಲ್ಲಿ ಪಕ್ಷ ಸಭೆಯನ್ನು ಆಯೋಜಿಸಿತ್ತು. ಆದರೆ, ಈ ಸಭೆಯಿಂದ ಪ್ರಮುಖ ಹಿರಿಯ ನಾಯಕರು ಅಂತರ ಕಾಯ್ದುಕೊಂಡಿದ್ದರು. ಮಲ್ಲು ಭಟ್ಟಿ ವಿಕ್ರಮರ್ಕ, ಉತ್ತಮಕುಮಾರ್​ ರೆಡ್ಡಿ, ದಾಮೋಧರ ರಾಜನರಸಿಂಹ, ಜಗ್ಗರೆಡ್ಡಿ, ಮಧುಯಸ್ಕಿ ಮತ್ತು ಮಹೇಶ್ವರ ರೆಡ್ಡಿ ಗೈರಾಗಿದ್ದರು.

ಸಭೆ ಆರಂಭವಾಗುತ್ತಿದ್ದಂತೆ ವಲಸಿಗರ ವಿಷಯ ಕುರಿತು ವಿವಾದಗಳು ಉಂಟಾದವು. ಈ ವೇಳೆ ಸಭೆಯಲ್ಲಿ ಇತರೆ ವಿಷಯಗಳ ಬಗ್ಗೆ ಚರ್ಚೆ ಬೇಡ ಎಂದು ಶಿಸ್ತು ಸಮಿತಿ ಅಧ್ಯಕ್ಷ ಚಿನ್ನಾರೆಡ್ಡಿ ತಿಳಿಸಿದರು. ಇದಕ್ಕೆ ಹಿರಿಯ ಮುಖಂಡ ನಿರಂಜನ್ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಹಿರಿಯ ನಾಯಕರ ನಡುವೆ ಜಟಾಪಟಿ ಕೂಡ ಏರ್ಪಟ್ಟಿತು. ಬಳಿಕ ಮಧ್ಯ ಪ್ರವೇಶಿಸಿದ ಪಕ್ಷದ ರಾಜ್ಯಾಧ್ಯಕ್ಷ ರೇವಂತ್ ರೆಡ್ಡಿ, ಪ್ರಿಯಾಂಕಾ ಗಾಂಧಿ ಅವರು ಕೈಗೊಂಡಿರುವ ಹಾಥ್​​​ ಸೆ ಹಾಥ್​​​​ ಜೋಡೋ ಅಭಿಯಾನ ಕುರಿತು ಮಾತ್ರ ಸಭೆಯಲ್ಲಿ ಚರ್ಚಿಸುತ್ತೇವೆ ಎನ್ನುವ ಮೂಲಕ ವಿವಾದಕ್ಕೆ ಇತಿಶ್ರೀ ಹಾಡಿದರು.

ಶಬ್ಬೀರ್ ಅಲಿ, ನದೀಂ ಜಾವೇದ್, ಮಹೇಶ್ ಕುಮಾರ್ ಗೌಡ್, ಪೊನ್ನಂ ಪ್ರಭಾಕರ್, ಮಲ್ಲು ರವಿ, ನಾಗಂ ಜನಾರ್ದನ ರೆಡ್ಡಿ, ಬಲರಾಮಾನಾಯ್ಕ್, ಅಂಜನಕುಮಾರ್ ಯಾದವ್, ಚೆರುಕು ಸುಧಾಕರ್, ರಾಜ್ಯ ಉಪಾಧ್ಯಕ್ಷರು, ಪಿಸಿಸಿ ಪ್ರಧಾನ ಕಾರ್ಯದರ್ಶಿಗಳು, ರಾಜಕೀಯ ಸಮಿತಿ ಸದಸ್ಯರು, ಕಾರ್ಯಕಾರಿ ಸಮಿತಿ ಸದಸ್ಯರು, ಸಂಘ ಸಂಸ್ಥೆಗಳ ಅಧ್ಯಕ್ಷರು ಸಭೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: ಭಾರತ್​ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಲಿರುವ ನಟ ಕಮಲ್ ಹಾಸನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.