ಮೊಗಾ(ಪಂಜಾಬ್): ಪಂಜಾಬ್‌ನ ಮೊಗಾ ಬಳಿ ನಿನ್ನೆ ತಡರಾತ್ರಿ ಭಾರತೀಯ ವಾಯುಪಡೆಯ ಮಿಗ್ -21 ಯುದ್ಧ ವಿಮಾನ ಅಪಘಾತಕ್ಕೀಡಾಗಿದ್ದು, ಪೈಲಟ್ ಸಾವನ್ನಪ್ಪಿದ್ದಾರೆ.
ಅಪಘಾತ ಸಂಭವಿಸಿದಾಗ ವಿಮಾನವು ದಿನನಿತ್ಯದ ತರಬೇತಿ ಹಂತದಲ್ಲಿತ್ತು. ಐಎಎಫ್ ಪ್ರಕಾರ, ಪೈಲಟ್ ಸ್ಕ್ವಾಟನ್ ಲೀಡರ್ ಆರ್.ಅಭಿನವ್ ಚೌಧರಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು.
"ಕಳೆದ ರಾತ್ರಿ ಪಶ್ಚಿಮ ವಲಯದಲ್ಲಿ ಐಎಎಫ್‌ನ ಬೈಸನ್ ಯುದ್ಧ ವಿಮಾನ ಅಪಘಾತಕ್ಕೀಡಾಗಿದೆ. ಪೈಲಟ್ ಸ್ಕ್ವಾಟನ್ ಲೀಡರ್ ಆರ್.ಅಭಿನವ್ ಚೌಧರಿ ಅವರಿಗೆ ಗಂಭೀರವಾದ ಗಾಯಗಳಾಗಿವೆ. ದುರಂತಕ್ಕೆ ಐಎಎಫ್ ಶೋಕ ವ್ಯಕ್ತಪಡಿಸುತ್ತದೆ ಮತ್ತು ದುಃಖಿತ ಕುಟುಂಬದೊಂದಿಗೆ ನಿಲ್ಲುತ್ತದೆ" ಎಂದು ಐಎಎಫ್ ಟ್ವೀಟ್ ಮಾಡಿದೆ.
ಇದೇ ವೇಳೆ, ವಿಮಾನ ಅಪಘಾತ ಪ್ರಕರಣವನ್ನು ನ್ಯಾಯಾಲಯ ತನಿಖೆಗೆ ಆದೇಶಿಸಿದೆ.
-
A Court of Inquiry has been ordered to ascertain the cause of the accident.
— Indian Air Force (@IAF_MCC) May 21, 2021 " class="align-text-top noRightClick twitterSection" data="
">A Court of Inquiry has been ordered to ascertain the cause of the accident.
— Indian Air Force (@IAF_MCC) May 21, 2021A Court of Inquiry has been ordered to ascertain the cause of the accident.
— Indian Air Force (@IAF_MCC) May 21, 2021
ಈ ವರ್ಷ ಮಿಗ್ -21 ವಿಮಾನದ ಮೂರನೇ ಅಪಘಾತ ಇದಾಗಿದ್ದು, ಮಾರ್ಚ್ನಲ್ಲಿ, ಐಎಎಫ್ ಗ್ರೂಪ್ ಕ್ಯಾಪ್ಟನ್ ಸೆಂಟ್ರಲ್ ಇಂಡಿಯಾದ ಏರ್ ಬೇಸ್ನಲ್ಲಿ ನಡೆದ ಮಿಗ್ -21 ಬೈಸನ್ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದರು.