ETV Bharat / bharat

ಕಾಶ್ಮೀರದಲ್ಲಿ ಎನ್​ಕೌಂಟರ್​: ಇಬ್ಬರು ಉಗ್ರರನ್ನು ಸದೆಬಡಿದ ಯೋಧರು

author img

By

Published : Jul 24, 2021, 9:47 AM IST

Updated : Jul 24, 2021, 10:21 AM IST

ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಸಂಬ್ಲಾರ್​ನ ಶೋಕ್​​ಬಾಬಾ ಅರಣ್ಯ ಪ್ರದೇಶದಲ್ಲಿ ಉಗ್ರರ ವಿರುದ್ಧ ಸೈನಿಕರು ಎನ್​​ಕೌಂಟರ್ ಕಾರ್ಯಾಚರಣೆ ಆರಂಭಿಸಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಇಬ್ಬರು ಉಗ್ರರ ಹೆಡೆಮುರಿ ಕಟ್ಟಿದ್ದಾರೆ.

An Encounter Begins at Shokbaba forest area
ಇಬ್ಬರು ಉಗ್ರರ ಹತ್ಯೆ

ಬಂಡಿಪೋರಾ(ಜಮ್ಮು ಕಾಶ್ಮೀರ): ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಸಂಬ್ಲಾರ್​ನ ಶೋಕ್​​ಬಾಬಾ ಅರಣ್ಯ ಪ್ರದೇಶದಲ್ಲಿ ಉಗ್ರರ ವಿರುದ್ಧ ಸೇನೆಯ ಮಿಲಿಟರಿ ಕಾರ್ಯಾಚರಣೆ ಶುರುವಾಗಿದೆ. ಬೆಳ್ಳಂಬೆಳಗ್ಗೆ ಇಬ್ಬರು ಭಯೋತ್ಪಾದಕರನ್ನು ಯೋಧರು ಬೇಟೆಯಾಡಿದ್ದಾರೆ.

ಇಬ್ಬರು ಉಗ್ರರ ಹತ್ಯೆ

ಶೋಕ್​​ಬಾಬಾ ಅರಣ್ಯ ಪ್ರದೇಶದಲ್ಲಿಉಗ್ರರು ಇರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆ ಸಶಸ್ತ್ರ ಪಡೆಗಳ ಜಂಟಿ ತಂಡವು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಭದ್ರತಾ ಪಡೆಗಳು ಉಗ್ರರು ಅಡಗಿರುವ ಶಂಕಿತ ಸ್ಥಳವನ್ನು ಸಮೀಪಿಸುತ್ತಿದ್ದಂತೆ, ಅಡಗಿದ್ದ ಭಯೋತ್ಪಾದಕರು ಗುಂಡು ಹಾರಿಸಲು ಪ್ರಾರಂಭಿಸಿದ್ದಾರೆ. ಆಗ ಯೋಧರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ.

  • #Encounter has started at Shokbaba forest, Sumblar area of #Bandipora. Police and security forces are on the job. Further details shall follow.@JmuKmrPolice

    — Kashmir Zone Police (@KashmirPolice) July 24, 2021 " class="align-text-top noRightClick twitterSection" data=" ">

ಈ ಮಧ್ಯೆ ಜಮ್ಮು ಕಾಶ್ಮೀರ ಪೊಲೀಸರು ಟ್ವೀಟ್ ಮೂಲಕ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಯುತ್ತಿರುವುದನ್ನು ಖಚಿತ ಪಡಿಸಿದ್ದಾರೆ.

Last Updated : Jul 24, 2021, 10:21 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.