ಅಲ್ವಾರ್( ರಾಜಸ್ಥಾನ): ಜಿಲ್ಲೆಯ ಖೇಡ್ಲಿ ಎಂಬಲ್ಲಿ ಸೋಮವಾರ ವಿಚಿತ್ರ ಘಟನೆಯೊಂದು ನಡೆದಿದೆ. ಖೇಡ್ಲಿ ಪಟ್ಟಣದ ಸೌಂಖರ್ ರಸ್ತೆಯಲ್ಲಿ ವಾಸಿಸುವ ವೃದ್ಧ ಮಹಿಳೆಯೊಬ್ಬಳು ತನ್ನ ಸಾವಿನ ದಿನವನ್ನು ತಾನೇ ನಿಗದಿಪಡಿಸಿ, ತಾನಿನ್ನು ಸಾಯುತ್ತೇನೆ ಎಂದು ಮನೆಯ ಹೊರಗೆ ಜಗುಲಿ ಮೇಲೆ ಕುಳಿತುಕೊಂಡಿದ್ದಾರೆ. ಈ ವಿಚಾರ ಬೆಂಕಿಯಂತೆ ಇಡೀ ಪ್ರದೇಶದಲ್ಲಿ ವ್ಯಾಪಿಸಿದ್ದು, ಮಹಿಳೆಯನ್ನು ನೋಡಲು ಅಕ್ಕಪಕ್ಕದ ಜನರು ಜಮಾಯಿಸಿದ್ದರು.
ಸ್ಥಳದಲ್ಲಿ ಕೆಲ ಮಹಿಳೆಯರು ಭಜನೆ ಮಾಡಲಾರಂಭಿಸಿದರು ಮತ್ತು ಅನೇಕ ಜನ ಕಾಣಿಕೆಗಳನ್ನು ಸಲ್ಲಿಸಲಾರಂಭಿಸಿದರು. ಈ ಪ್ರಹಸನ ಹಲವಾರು ಗಂಟೆಗಳ ಕಾಲ ನಡೆದಿದೆ. ನಂತರ ಯಾರೂ ಇಡೀ ವಿಷಯವನ್ನು ಪೊಲೀಸರು ಮತ್ತು ಆಡಳಿತಕ್ಕೆ ತಿಳಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ವೃದ್ಧೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೊಲೀಸರು ಮತ್ತು ಆಡಳಿತದ ಅಧಿಕಾರಿಗಳು ಮಹಿಳೆಯೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿದ್ದಾರೆ. ಖೇಡ್ಲಿ ಪಟ್ಟಣದ ಪ್ರಕಾಶ್ ಮಾರ್ಗದಲ್ಲಿರುವ ಕಾಲೋನಿಯ ಸುಮಾರು 90 ವರ್ಷದ ಮಹಿಳೆ ಚಿರೋಂಜಿ ದೇವಿ ಭಾನುವಾರ ಮಧ್ಯಾಹ್ನ 12 ಗಂಟೆಗೆ ತನ್ನ ಕುಟುಂಬಕ್ಕೆ ತನ್ನ ಸಾವಿನ ಸಮಯವನ್ನು ತಿಳಿಸಿದ್ದಾರೆ.
ನಂತರ ಮನೆಯ ಹೊರಗಿನ ಎತ್ತರವಾದ ಜಗುಲಿಯ ಮೇಲೆ ಕುಳಿತುಕೊಂಡಿದ್ದರು. ಈ ಬಗ್ಗೆ ಮನೆಯವರು ಸಾಕಷ್ಟು ಮನವೊಲಿಸಿದರೂ ವೃದ್ಧೆ ಕೇಳಲಿಲ್ಲ. ವೃದ್ಧೆಯ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೃದ್ಧೆಯ ವಿಚಾರ ವೈರಲ್ ಆಗುತ್ತಿದ್ದಂತೆ ಸುತ್ತಮುತ್ತಲ ಪ್ರದೇಶಗಳಿಂದ ಜನ ಸ್ಥಳಕ್ಕೆ ಬರಲು ಪ್ರಾರಂಭಿಸಿದರು. ಅಲ್ಲಿದ್ದವರು ಈ ವಿಷಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ಆದರೆ, ಈವರೆಗೂ ಜಿಲ್ಲಾಡಳಿತ ಈ ಬಗ್ಗೆ ಏನನ್ನೂ ಹೇಳಿಲ್ಲ. ಕಳೆದ ಒಂದು ತಿಂಗಳಿಂದ ತಾನು ಮಲಗಿಲ್ಲ ಎಂದು ಚಿರೋಂಜಿ ದೇವಿ ಹೇಳಿಕೊಂಡಿದ್ದಾಳೆ. ಆಕೆಗೆ ಒಂದು ಕನಸು ಬಿದ್ದ ನಂತರ ಆಕೆ ಸಮಾಧಿ ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದರಂತೆ
ಇದನ್ನೂ ಓದಿ: 11 ಮಕ್ಕಳಿದ್ದರೂ ತುತ್ತು ಅನ್ನಕ್ಕೆ ವೃದ್ಧೆ ಪರದಾಟ.. ದಯಾಮರಣ ಕೋರಿ ಹಾವೇರಿ ಜಿಲ್ಲಾಧಿಕಾರಿಗೆ ಅರ್ಜಿ