ಅಮೃತ್ಸರ್ (ಪಂಜಾಬ್): ಪಂಜಾಬ್ನ ಪ್ರಸಿದ್ಧ ಗೋಲ್ಡನ್ ಟೆಂಪಲ್‌ಗೆ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಬುಧವಾರ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಇಲ್ಲಿನ ದುರ್ಗಿಯಾನ ದೇವಸ್ಥಾನದಲ್ಲಿ ಸುಮಾರು ಅರ್ಧ ಗಂಟೆ ಕಾದುಕುಳಿತು, ಕೋಪಗೊಂಡ ಪ್ರಸಂಗ ಕೂಡಾ ಜರುಗಿದೆ.
ಜಗದೀಪ್ ಧನಕರ್ ಅವರು ದೇವಸ್ಥಾನದ ಭೇಟಿ ಸಮಯವು ಮಧ್ಯಾಹ್ನ 2.50ಕ್ಕೆ ನಿಗದಿಯಾಗಿತ್ತು. ಆದರೆ, ಮಂದಿರದ ಬಾಗಿಲು ತೆರೆಯುವ ಸಮಯ ಮಧ್ಯಾಹ್ನ 3 ಗಂಟೆ ಇತ್ತು. ಆದಾಗ್ಯೂ ಅವರು 2.20ಕ್ಕೆ ದೇವಸ್ಥಾನಕ್ಕೆ ತಲುಪಿದ್ದರು ಎಂದು ಆಮ್ ಆದ್ಮಿ ಪಕ್ಷದ ವಕ್ತಾರ ಮಲ್ವೀಂದರ್ ಕಾಂಗ್ ತಿಳಿಸಿದ್ದಾರೆ.
ಅಲ್ಲದೇ, ದೇಗುಲದ ಬಾಗಿಲು ತೆರೆಯುವರೆಗೂ ಭಕ್ತರು ಕಾಯಬೇಕು. ಎಲ್ಲರಿಗೂ ಒಂದೇ ರೀತಿಯಾದ ನಿಯಮಗಳು ಇರುತ್ತವೆ. ಗಣ್ಯ ವ್ಯಕ್ತಿಗಳು, ದೊಡ್ಡ ನಾಯಕರು, ರಾಜ್ಯಪಾಲರು ಬಂದರೂ ಬಾಗಿಲು ತೆರೆಯುವುದಿಲ್ಲ. ಯಾರೊಬ್ಬರಿಗಾಗಿಯೂ ಗುರುದ್ವಾರವಾಗಲಿ ಅಥವಾ ದೇವಸ್ಥಾನದ ನಿಮಯಗಳನ್ನು ಬದಲಿಸಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಕೇದಾರನಾಥನ ಗರ್ಭಗುಡಿಗೆ ಚಿನ್ನದ ಲೇಪನ; ವಿಶೇಷ ಅಲಂಕಾರ ಕಾರ್ಯ ಪೂರ್ಣ