ETV Bharat / bharat

ಅಮೃತ್​ಪಾಲ್​ ಸಿಂಗ್​ ಸಹಚರ ಪಾಪಲ್​ಪ್ರೀತ್​ ಸಿಂಗ್​ ಬಂಧನ: ಹೋಶಿಯಾರ್​ಪುರದಲ್ಲಿ ಬಲೆಗೆ ಕೆಡವಿದ ಪಂಜಾಬ್​ ಪೊಲೀಸರು - ಪಾಕಿಸ್ತಾನದ ಐಎಸ್​ಐ ಜೊತೆ ಸಂಪರ್ಕ

ಪಾಕಿಸ್ತಾನದ ಐಎಸ್​ಐ ಜೊತೆ ಸಂಪರ್ಕದಲ್ಲಿದ್ದಾನೆ ಎಂದು ಶಂಕಿಸಲಾಗಿರುವ, ಅಮೃತ್​ಪಾಲ್​ ಸಿಂಗ್​ ಸಹಚರ ಪಾಪಲ್​ಪ್ರೀತ್​ ಸಿಂಗ್​ನನ್ನು ಇಂದು ಪಂಜಾಬ್​ ಪೊಲೀಸ್​ ಹಾಗೂ ದೆಹಲಿ ಪೊಲೀಸ್​ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ.

Papalpreet Singh arrested from Hoshiarpur
ಅಮೃತ್​ಪಾಲ್​ ಸಿಂಗ್​ ಸಹಚರ ಪಾಪಲ್​ಪ್ರೀತ್​ ಸಿಂಗ್​ ಬಂಧನ
author img

By

Published : Apr 10, 2023, 5:05 PM IST

Updated : Apr 10, 2023, 5:14 PM IST

ಹೋಶಿಯಾರ್‌ಪುರ (ಪಂಜಾಬ್): ಕಣ್ತಪ್ಪಿಸಿಕೊಂಡು ಓಡಾಡುತ್ತಿರುವ ಖಲಿಸ್ತಾನ್​ ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್‌ ಹುಡುಕಾಟದ ಕಾರ್ಯಾಚರಣೆ ಇನ್ನಷ್ಟು ಬಿಗಿಗೊಳಿಸಿರುವ ಪಂಜಾಬ್​ ಪೊಲೀಸರು ಸೋಮವಾರ ಆತನ ಆಪ್ತ ಸಹಾಯಕ ಪಾಪಲ್​ಪ್ರೀತ್​ ಸಿಂಗ್​ನನ್ನು ಬಂಧಿಸಿದ್ದಾರೆ. ಹೋಶಿಯಾರ್‌ಪುರದಲ್ಲಿ ಪಂಜಾಬ್ ಪೊಲೀಸ್‌ ಕೌಂಟರ್ ಇಂಟೆಲಿಜೆನ್ಸ್ ಘಟಕ ಪಾಪಲ್​ಪ್ರೀತ್‌ನನ್ನು ಬಂಧಿಸಿದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ಬಹಿರಂಗಪಡಿಸಿವೆ.

  • #WATCH | Amritsar, Punjab | Papalpreet Singh, a close aide of 'Waris Punjab De' chief Amritpal Singh, in the custody of Punjab Police

    He was detained from Amrtisar's Kathu Nangal area.

    (Source: PRO, Punjab Police) pic.twitter.com/4ful5IYCf2

    — ANI (@ANI) April 10, 2023 " class="align-text-top noRightClick twitterSection" data=" ">

ಪಂಜಾಬ್ ಪೊಲೀಸ್​ ಹಾಗೂ ದೆಹಲಿ ಪೊಲೀಸರ ವಿಶೇಷ ಘಟಕದ ಜಂಟಿ ಕಾರ್ಯಾಚರಣೆ ನಡೆಸಿ, ಅಮೃತಪಾಲ್ ಸಿಂಗ್ ಅವರ ಆಮೂಲಾಗ್ರ ಚಟುವಟಿಕೆಗಳ ಹಿಂದಿನ ಮೈಂಡ್​ ಎಂದು ನಂಬಲಾದ ಪಾಪಲ್​ಪ್ರೀತ್ ಸಿಂಗ್ ನನ್ನು ಬಂಧಿಸಿದೆ. ಸದ್ಯ ಪಾಪಲ್​ಪ್ರೀತ್​ ಸಿಂಗ್​ ಅಮೃತಸರ ಗ್ರಾಮಾಂತರ ಪೊಲೀಸರ ವಶದಲ್ಲಿದ್ದಾನೆ. ಪೊಲೀಸರ ಪ್ರಕಾರ, ಅಮೃತಪಾಲ್ ಮತ್ತು ಪಾಪಲ್​ಪ್ರೀತ್ ಇಬ್ಬರೂ ಜಲಂಧರ್‌ನಲ್ಲಿ ಇನ್ನೇನು ಪೊಲೀಸರ ಕೈಗೆ ಸಿಕ್ಕಿಹಾಕಿಕೊಳ್ಳುತ್ತಾರೆ ಎನ್ನುವಷ್ಟರಲ್ಲಿ ಇಬ್ಬರೂ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಹೋಶಿಯಾರ್​ಪುರಕ್ಕೆ ತಲುಪುತ್ತಲೇ ಇಬ್ಬರೂ ಬೇರೆ ಬೇರೆ ದಾರಿಯನ್ನು ಹಿಡಿದು ತಪ್ಪಿಸಿಕೊಂಡಿದ್ದರು.

ಪಾಕಿಸ್ತಾನದ ಐಎಸ್​ಐ ಜೊತೆ ಸಂಪರ್ಕ ಹೊಂದಿರುವ ಆರೋಪವಿರುವ ಪಾಪಲ್​ಪ್ರೀತ್​ ಸಿಂಗ್​ ಫೆಬ್ರವರಿ 23 ರಂದು ನಡೆದ ಅಜ್ನಾಲಾ ಹಿಂಸಾಚಾರ ಪ್ರಕರಣದಲ್ಲೂ ಪೊಲೀಸರಿಗೆ ಬೇಕಾಗಿರುವ ಆರೋಪಿಯಾಗಿದ್ದಾನೆ. ರೈತರ ಕುಟುಂಬದಲ್ಲಿ ಹುಟ್ಟಿರುವ ಪಾಪಲ್​ಪ್ರೀತ್​ ಸಿಂಗ್​ ಕಾನ್ವೆಂಟ್​ ಶಾಲೆಯಲ್ಲಿ ಶಿಕ್ಷಣ ಮುಗಿಸಿ, ಪಿಜಿ ಡಿಪ್ಲೋಮಾ ಪೂರ್ಣಗೊಳಿಸಿದ್ದಾನೆ. 20ನೇ ವಯಸ್ಸಿಗೆ ಸಿಖ್​ ಯೂತ್​ ಫ್ರಂಟ್​ನ ಕಾರ್ಯಕರ್ತನಾಗಿ ಸೇರಿಕೊಂಡನು. ಇಲ್ಲಿ ಈತ ಸಂಘಟನೆಯ ಹಿಂದಿನ ಪ್ರೇರಕ ಶಕ್ತಿಯಾಗಿ ಬೆಳೆದನು. ಪಾಪಲ್​ಪ್ರೀತ್​ ಸಿಂಗ್​ 1990ರ ದಶಕದ ಆರಂಭದಿಂದಲೂ ಜೈಲಿನಲ್ಲಿದ್ದ ಸಿಖ್ ಕೈದಿಗಳ ಬಿಡುಗಡೆಗಾಗಿ ಆಂದೋಲನ ನಡೆಸಿದ ಸಿಖ್ ಯೂತ್ ಫೆಡರೇಶನ್ ಭಿಂದ್ರವಾಲಾದೊಂದಿಗೆ ಸಹ ಕೈ ಜೋಡಿಸಿದ್ದನು.

2015ರಲ್ಲಿ, ಆಯೋಜಿಸಿದ್ದ ಸರ್ಬತ್ ಖಾಲ್ಸಾದಲ್ಲಿ ಆಗಿನ ಪ್ರಕಾಶ್ ಸಿಂಗ್ ಬಾದಲ್ ಸರ್ಕಾರದ ವಿರುದ್ಧ ಜೈಲಿನಲ್ಲಿರುವ ಉಗ್ರಗಾಮಿ ನರೇನ್ ಸಿಂಗ್ ಚೌರಾ ಅವರ 'ಚಾರ್ಜ್ ಶೀಟ್' ಅನ್ನು ಓದಿ ಪಾಪಲ್​ಪ್ರೀತ್​ ಪ್ರಾಮುಖ್ಯತೆ ಪಡೆದನು. ಸರ್ಬತ್ ಖಾಲ್ಸಾವನ್ನು ಆ ವರ್ಷದ ಆರಂಭದಲ್ಲಾದ ಹತ್ಯೆ ಪ್ರಕರಣಗಳು ಮತ್ತು ಹತ್ಯೆ ಘಟನೆಗಳ ವಿರುದ್ಧದ ಪ್ರತಿಭಟನೆಯಲ್ಲಿ ಪೊಲೀಸರು ಇಬ್ಬರು ಸಿಖ್ ಯುವಕರನ್ನು ಕೊಂದ ಬಗ್ಗೆ ಆಕ್ರೋಶ ವ್ಯಕ್ತಪಡಿಸಲು ಆಯೋಜಿಸಲಾಗಿತ್ತು. ತನ್ನ ಭಾಷಣದ ಕೊನೆಯಲ್ಲಿ ಪಾಪಲ್​ಪ್ರೀತ್ ಸಿಂಗ್ ಕೂಡ "ಖಲಿಸ್ತಾನವೊಂದೇ ಪರಿಹಾರ" ಎಂದು ಹೇಳಿದ್ದನು. ನ್ಯಾಯಮೂರ್ತಿ ಮೆಹ್ತಾಬ್ ಸಿಂಗ್ ಗಿಲ್ ಆಯೋಗದ ಶಿಫಾರಸುಗಳ ನಂತರ 2018 ರಲ್ಲಿ ಈ ಪ್ರಕರಣ ಕೈಬಿಡಲಾಗಿತ್ತು.

2016ರಲ್ಲಿ, ಪಾಪಲ್​ಪ್ರೀತ್ ಸಿಂಗ್, ಸಿಮ್ರಂಜಿತ್ ಸಿಂಗ್ ಮಾನ್ ಅವರ ಪಕ್ಷ ಶಿರೋಮಣಿ ಅಕಾಲಿದಳ (ಅಮೃತಸರ)ಗೆ ಸೇರ್ಪಡೆಗೊಂಡು ಮತ್ತು 2017ರ ಅಸೆಂಬ್ಲಿ ಚುನಾವಣೆಯ ಸಮಯದಲ್ಲಿ ಬರ್ನಾಲಾದಲ್ಲಿ ಮಾನ್ ಪರವಾಗಿ ವ್ಯಾಪಕವಾಗಿ ಪ್ರಚಾರ ಮಾಡಿದ್ದ. ಆದಾಗ್ಯೂ, ಮನ್ ಚುನಾವಣೆಯಲ್ಲಿ ಕಳಪೆ ಸಾಧನೆ ಮಾಡಿ, ನಾಲ್ಕು ಪ್ರತಿಶತಕ್ಕಿಂತ ಕಡಿಮೆ ಮತಗಳನ್ನು ಪಡೆದಿದ್ದರು. ಅದೇ ವರ್ಷದ ಕೊನೆಯಲ್ಲಿ ಪಾಪಲ್​ಪ್ರೀತ್​ ಸಿಂಗ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದ. ಖಲಿಸ್ತಾನಕ್ಕೆ ಬೆಂಬಲವನ್ನು ಸೂಚಿಸಿರುವ ಪಾಪಲ್​ಪ್ರೀತ್​ ಸಿಂಗ್​ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಈಗ ಭಾರತದಲ್ಲಿ ನಿಷೇಧಿಸಲಾಗಿದೆ.

ಆತನ ಯೂಟ್ಯೂಬ್ ಚಾನೆಲ್‌ನಲ್ಲಿ ಕೂಡ ಕೇವಲ ಒಂದು ಭಾಗದ ವೀಡಿಯೊಗಳಲ್ಲಿ ಮಾತ್ರ ಆತ ಮಾತನಾಡುತ್ತಿದ್ದನು. ಮತ್ತು ಹೆಚ್ಚಿನ ವಿಡಿಯೋಗಳು ಕೊಲ್ಲಲ್ಪಟ್ಟ ಉಗ್ರಗಾಮಿಗಳ ಕುಟುಂಬಗಳು, ಖಲಿಸ್ತಾನ್ ಪರ ಬುದ್ಧಿಜೀವಿಗಳು ಮತ್ತು ಕಾರ್ಯಕರ್ತರೊಂದಿಗೆ ಸಂದರ್ಶನಗಳಿಗೆ ಮೀಸಲಾಗಿವೆ. 2016ರಲ್ಲಿ ರೇಡಿಯೋ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಪಾಪಲ್​ಪ್ರೀತ್​ ಸಿಂಗ್​, ದಂಗೆಯ ಸಮಯದಲ್ಲಿ ತರ್ನ್ ತರನ್‌ನಲ್ಲಿ ಪ್ರಬಲವಾಗಿದ್ದ ಉಗ್ರಗಾಮಿ ಗುಂಪು ಖಲಿಸ್ತಾನದ ಭಿಂದ್ರನ್‌ವಾಲೆ ಟೈಗರ್ ಫೋರ್ಸ್ ಸ್ಥಾಪಕ ಗುರ್ಬಚನ್ ಸಿಂಗ್ ಮನೋಚಹಲ್ ಅವರು ತನ್ನ ಸ್ಫೂರ್ತಿ ಎಂದು ಹೇಳಿದ್ದನು. ಖಲಿಸ್ತಾನ್ ಪರ ವಾದಿಸುವುದರ ಜೊತೆಗೆ, ಪಾಪಲ್‌ಪ್ರೀತ್ ಸಿಂಗ್ ದಶಕಗಳಿಂದ ಸೆರೆವಾಸದಲ್ಲಿರುವ ಸಿಖ್ ಖೈದಿಗಳ ಬಿಡುಗಡೆಗಾಗಿ ಹೋರಾಡುತ್ತಿದ್ದನು.

ಪಂಜಾಬ್‌ನಲ್ಲಿ ಬಲವಾದ ಬೆಂಬಲಿಗರ ಜಾಲ ಹೊಂದಿದ್ದಾನೆ ಎಂದು ಹೇಳಲಾಗುತ್ತಿರುವ ಅಮೃತ್​ಪಾಲ್ ಸಿಂಗ್ ಕೆಲವು ಸಮಯದಿಂದ ಪೊಲೀಸರು ಕಣ್ತಪ್ಪಿಸಿಕೊಂಡು ಓಡಾಡುತ್ತಿದ್ದಾನೆ. 2018ರ ನವೆಂಬರ್​ನಲ್ಲಿ ಅಮೃತಸರದ ನಿರಂಕಾರಿ ಭವನದಲ್ಲಿ ಧಾರ್ಮಿಕ ಸಭೆಯೊಂದರ ಮೇಲೆ ನಡೆದ ಗ್ರೆನೇಡ್ ದಾಳಿಯಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಅಮೃತ್​ಪಾಲ್​ ಭಾರತೀಯ ಭದ್ರತಾ ಪಡೆಗಳ ರೇಡಾರ್‌ನಲ್ಲಿದ್ದನು. ಆ ದಾಳಿಯಲ್ಲಿ ಮೂವರು ಸಾವನ್ನಪ್ಪಿ, ಹನ್ನೆರಡು ಜನ ಗಾಯಗೊಂಡಿದ್ದರು. ಅಮೃತ್​ಪಾಲ್​ ಸಿಂಗ್​, ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್ ಸೇರಿದಂತೆ ಇತರ ಉಗ್ರಗಾಮಿ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ಶಂಕಿಸಲಾಗಿದೆ.

ಇದನ್ನೂ ಓದಿ: ದೆಹಲಿಯಲ್ಲಿ ಕಾಣಿಸಿಕೊಂಡ ಅಮೃತ್​ಪಾಲ್​: ಮತ್ತೊಂದು ಸಿಸಿಟಿವಿ ವಿಡಿಯೋ ವೈರಲ್​

Last Updated : Apr 10, 2023, 5:14 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.