ETV Bharat / bharat

ವಿವಾಹಕ್ಕೆ ಎತ್ತಿನಗಾಡಿಯಲ್ಲಿ ಬಂದ ಗುಜರಾತ್​ನ ಉದ್ಯಮಿ - ಮದುವೆಗೆ ಎತ್ತಿನಗಾಡಿಯಲ್ಲಿ ಬಂದ ಗುಜರಾತ್ ಉದ್ಯಮಿ

ಹಳೆಯ ಕಾಲದ ಸಂಪ್ರದಾಯ ಪಾಲಿಸಿದ ಗುಜರಾತ್ ಉದ್ಯಮಿಯೊಬ್ಬರು ಅತ್ಯಂತ ವಿಭಿನ್ನವಾಗಿ ವಿವಾಹವಾಗಿದ್ದಾರೆ. ಎತ್ತಿನಗಾಡಿಯಲ್ಲಿ ವಿವಾಹದ ಸ್ಥಳಕ್ಕೆ ಆಗಮಿಸಿ, ಗಮನ ಸೆಳೆದಿದ್ದಾರೆ.

ವಿವಾಹಕ್ಕೆ ಎತ್ತಿನಗಾಡಿಯಲ್ಲಿ ಬಂದ ಗುಜರಾತ್​ನ ಉದ್ಯಮಿ

author img

By

Published : Dec 11, 2021, 7:20 AM IST

ಅ​ಮ್ರೇಲಿ(ಗುಜರಾತ್)​​: ಪ್ರಸ್ತುತ ಕಾಲಘಟ್ಟದಲ್ಲಿ ಎಲ್ಲರೂ ಅದ್ಧೂರಿ ವಿವಾಹಗಳನ್ನು ಮಾಡಲು ಇಷ್ಟಪಡುತ್ತಾರೆ. ಕೋವಿಡ್ ಕಾಲಘಟ್ಟದಲ್ಲಿ ಅದ್ಧೂರಿ ವಿವಾಹಗಳಿಗೆ ಸ್ವಲ್ಪಮಟ್ಟಿಗೆ ಕಡಿವಾಣ ಬಿತ್ತಾದರೂ, ಈಗ ಎಲ್ಲರೂ ಅದ್ಧೂರಿ, ಆಡಂಬರದ ವಿವಾಹ ಮಾಡಿಕೊಳ್ಳುವವರಿಗೇನೂ ಕಡಿಮೆಯಿಲ್ಲ.

ಆದರೆ, ಇಲ್ಲೊಬ್ಬ ವ್ಯಕ್ತಿ ಎತ್ತಿನ ಗಾಡಿಯಲ್ಲಿ ತನ್ನ ವಿವಾಹ ಸಮಾರಂಭಕ್ಕೆ ಆಗಮಿಸಿದ್ದಾರೆ. ಅಂದಹಾಗೆ ಆತ ಎತ್ತಿನಗಾಡಿಯಲ್ಲಿ ಬರುವಷ್ಟು ಬಡವನೇನಲ್ಲ. ಗುಜರಾತ್​ನ ಉದ್ಯಮಿ ಲಲಿತ್ ದೋಬ್ರಿಯಾ ಅವರ ಪುತ್ರನಾಗಿರುವ ಆತನ ಹೆಸರು ಹನೀಲ್. ತಮ್ಮ ಹಳೆಯ ಸಂಪ್ರದಾಯಗಳನ್ನು ಪಾಲಿಸುವುದಕ್ಕಾಗಿ ಎತ್ತಿನಗಾಡಿನಲ್ಲಿ ಬಂದಿರುವುದು ವೈರಲ್ ಆಗಿದೆ.

Amreli's Groom brings age-old marriage tradition in his wedding
ಎತ್ತಿನಗಾಡಿಯಲ್ಲಿ ಬರುತ್ತಿರುವ ಉದ್ಯಮಿ

ಚಿಕ್ಕಂದಿನಿಂದಲೂ ತಮ್ಮ ಅಜ್ಜನಿಂದ ಮದುವೆಯ ಕಥೆಗಳನ್ನು ಕೇಳುತ್ತಾ ಬಂದಿದ್ದ ಹನೀಲ್, ಹಳೇ ಸಂಪ್ರದಾಯದಂತೆ ಮದುವೆಯಾಗಲು ನಿರ್ಧರಿಸಿದ್ದಾರೆ. ಇದರಿಂದಾಗಿ ಈಗ ತಾನು ವಿವಾಹವಾಗುವ ಸ್ಥಳಕ್ಕೆ ಎತ್ತಿನ ಗಾಡಿಯಲ್ಲಿ ಬಂದಿದ್ದಾರೆ.

ಮೊದಲು ಸಾರಿಗೆ ಸಂಪರ್ಕಗಳು ಅಷ್ಟೇನೂ ಅಭಿವೃದ್ಧಿಯಾಗಿರಲಿಲ್ಲ. ಆದ್ದರಿಂದ ಎತ್ತಿನಗಾಡಿಗಳನ್ನು ಬಳಸಿಕೊಳ್ಳುತ್ತಿದ್ದರು. ಆದರೆ ಈಗ ತಂತ್ರಜ್ಞಾನ ಮುಂದುವರೆದಿದೆ. ಎಲ್ಲಾ ಪ್ರದೇಶಗಳಿಗೂ ರಸ್ತೆಯಿದೆ. ಹೀಗಿರುವಾಗ ಹಳೆಯ ಸಂಪ್ರದಾಯಗಳಂತೆ ವಿವಾಹವಾಗುವುದು ಒಮ್ಮೆ ಇರಿಸುಮುರಿಸಾದರೂ, ಇಂಥಹ ಸರಳ ವಿವಾಹಗಳಿಂದ ಕಳೆದುಕೊಳ್ಳುವುದು ಏನೂ ಇಲ್ಲ ಎಂಬುದು ಮಾತ್ರ ಸತ್ಯ.

ಇದನ್ನೂ ಓದಿ: ಭಾರತ ಮೂಲದ ಗೌತಮ್ ರಾಘವನ್ ಶ್ವೇತಭವನದ ಉನ್ನತ ಹುದ್ದೆಗೆ ಆಯ್ಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.