ಕೋಲ್ಕತ್ತಾ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಿನ್ನೆಯಿಂದ ಎರಡು ದಿನಗಳ ಕಾಲ ಬಂಗಾಳ ಪ್ರವಾಸ ಕೈಗೊಂಡಿದ್ದು, ಇಂದು ಶಾಂತಿನಿಕೇತನದಲ್ಲಿರುವ ವಿಶ್ವ ಭಾರತಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಬಳಿಕ ಬೋಲ್‌ಪುರದಲ್ಲಿ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ.
ಶಾ ಅವರು ಬೆಳಗ್ಗೆ 11 ಗಂಟೆಗೆ ಶಾಂತಿನಿಕೇತನದಲ್ಲಿರುವ ವಿಶ್ವ ಭಾರತಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಲಿದ್ದು, ಅಲ್ಲಿರುವ ರವೀಂದ್ರ ಭವನದಲ್ಲಿ ಗುರುದೇವ್ ರವೀಂದ್ರನಾಥ ಟ್ಯಾಗೋರ್ ಅವರಿಗೆ ಗೌರವ ಸಲ್ಲಿಸಲಿದ್ದಾರೆ. ನಂತರ ಮಧ್ಯಾಹ್ನ ವಿಶ್ವವಿದ್ಯಾಲಯದ ಬಾಂಗ್ಲಾದೇಶ ಕಟ್ಟಡ ಸಭಾಂಗಣದಲ್ಲಿ ಭಾಷಣ ಮಾಡಲಿದ್ದಾರೆ.
ಓದಿ: ನಿರೀಕ್ಷೆಯಂತೆ ಶಾ ರ‍್ಯಾಲಿಯಲ್ಲಿ ಮಮತಾಗೆ ಟಾಂಗ್ ಕೊಟ್ಟ ’ಅಧಿಕಾರಿ’: 11 ಎಂಎಲ್ಎಗಳು ಬಿಜೆಪಿ ಸೇರ್ಪಡೆ
ನಂತರ ಶಾ ಅವರು ಮಧ್ಯಾಹ್ನ 12.50 ಕ್ಕೆ ಪಾರುಲ್ದಂಗ (ಬಿರ್ಭುಮ್) ನ ಶ್ಯಾಂಬತಿಯಲ್ಲಿ ಬೌಲ್ ಜಾನಪದ ಗಾಯಕನ ಕುಟುಂಬದೊಂದಿಗೆ ಭೋಜನ ಮಾಡಲಿದ್ದಾರೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಸ್ಟೇಡಿಯಂ ರಸ್ತೆಯ ಹನುಮಾನ್ ದೇವಸ್ಥಾನದಿಂದ ಬೋಲ್‌ಪುರದ ವೃತ್ತದವರೆಗೆ ಶಾ ರೋಡ್ ಶೋ ನಡೆಸಲಿದ್ದಾರೆ.
ನಂತರ ಸಂಜೆ 4.45 ಕ್ಕೆ ಬಿರ್ಭಮ್ ಮೊಹೋರ್ ಕಾಟೇಜ್ ರೆಸಾರ್ಟ್‌ನಲ್ಲಿ ಅಮಿತ್ ಶಾ ಮಾಧ್ಯಮಗೋಷ್ಟಿ ನಡೆಸಲಿದ್ದಾರೆ.