ETV Bharat / bharat

ಭಾರತದ ಸೂಜಿ ಮೊನೆಯಷ್ಟು ಜಾಗವನ್ನೂ ಅತಿಕ್ರಮಿಸಲು ಬಿಡೆವು: ಚೀನಾಗೆ ಅಮಿತ್​ ಶಾ ಎಚ್ಚರಿಕೆ - ಚೀನಾದ ವಕ್ತಾರ ವಾಂಗ್​​ ವೆನ್​ಬಿನ್

ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರಿಂದು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದು, ಚೀನಾ ದೇಶಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

amit-shah-visits-arunachal-pradesh
ಅರುಣಾಚಲ ಪ್ರದೇಶಕ್ಕೆ ಅಮಿತ್ ಶಾ ಭೇಟಿ
author img

By

Published : Apr 10, 2023, 7:59 PM IST

ಕಿಬಿಥೂ (ಅರುಣಾಚಲ ಪ್ರದೇಶ): ಗೃಹ ಸಚಿವ ಅಮಿತ್​ ಶಾ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿರುವುದನ್ನು ಚೀನಾ ಖಂಡಿಸಿದೆ. ಇದರ ಬೆನ್ನಲ್ಲೇ ಚೀನಾದ ನಡೆಗೆ ಕಟುವಾಗಿ ಪ್ರತಿಕ್ರಿಯಿಸಿರುವ ಶಾ, ಒಂದು ಸೂಜಿ ಮೊನೆಯೂರುವ ಜಾಗವನ್ನೂ ನಾವು ಅತಿಕ್ರಮಿಸಲು ಬಿಡೆವು. ನಮ್ಮ ಮೇಲೆ ಕೆಟ್ಟ ದೃಷ್ಟಿ ಬೀರಲು ಯಾರಿಗೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಗಡಿಯಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಮತ್ತು ಭಾರತೀಯ ಸೇನೆ ಕಾವಲು ಕಾಯುತ್ತಿರುವುದರಿಂದ ಇಂದು ಯಾರೂ ಕೂಡ ಭಾರತ ಮೇಲೆ ಕೆಂಗಣ್ಣು ಬೀರಲು ಸಾಧ್ಯವಿಲ್ಲ. ನಮ್ಮ ಐಟಿಬಿಪಿ ಜವಾನರು ಮತ್ತು ಭಾರತೀಯ ಸೇನೆ ರಾತ್ರಿ-ಹಗಲೆನ್ನದೇ ಕೆಲಸ ಮಾಡುತ್ತಿದ್ದು ದೇಶದ ಜನರು ನೆಮ್ಮದಿಯಿಂದ ನಿದ್ರಿಸಬಹುದು ಎಂದು ಶಾ ತಿಳಿಸಿದರು. ಭಾರತ ತನ್ನ ಭದ್ರತೆಯನ್ನು ಹೆಚ್ಚಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ದೇಶದ ಭೂಮಿಯನ್ನು ಯಾರು ಬೇಕಾದರೂ ಅತಿಕ್ರಮಿಸಬಹುದಾದ ದಿನಗಳು ಕಳೆದುಹೋಗಿವೆ ಎಂದರು.

  • #WATCH | Before 2014, the entire Northeast region was known as a disturbed region but in the last 9 years, because of PM Modi's 'Look East' policy, Northeast is now considered an area which contributes to the development of the country: Union HM Amit Shah in Arunachal Pradesh pic.twitter.com/hMCqOL7xZe

    — ANI (@ANI) April 10, 2023 " class="align-text-top noRightClick twitterSection" data=" ">

ಇದೇ ವೇಳೆ, ಅಮಿತ್​ ಶಾ ಅವರು ಅರುಣಾಚಲ ಪ್ರದೇಶದ ಗಡಿಗ್ರಾಮ ಕಿಬಿಥೂಗೆ ಭೇಟಿ ನೀಡಿದರು. ಏಪ್ರಿಲ್​ 10 ಮತ್ತು 11 ರಂದು ಎರಡು ದಿನಗಳ ಪ್ರವಾಸ ಕೈಗೊಂಡಿರುವ ಶಾ, ಕಿಬಿಥೂಗೆ ಭೇಟಿ ನೀಡಿದ ವೇಳೆ ವಾಲೋಂಗ್ ಯುದ್ಧ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದ್ದಾರೆ. ಈ ಹಿಂದೆ ಚೀನಾವು ಅರುಣಾಚಲ ಪ್ರದೇಶದ 11 ಸ್ಥಳಗಳನ್ನು ತನ್ನದೆಂದು ಘೋಷಣೆ ಮಾಡಿತ್ತು. ಅಷ್ಟೇ ಅಲ್ಲದೇ, ಇವುಗಳನ್ನು ಝಂಗ್ನಾನ್ ಎಂದು ಪ್ರತ್ಯೇಕವಾಗಿ ಕರೆದಿತ್ತು. ಚೀನಾದ ನಡೆಯನ್ನು ಭಾರತ ತೀವ್ರವಾಗಿ ಖಂಡಿಸಿತ್ತು. ಇದಾದ ಕೆಲವೇ ದಿನಗಳಲ್ಲಿ ಅಮಿತ್​ ಶಾ ಇಲ್ಲಿಗೆ ಭೇಟಿ ನೀಡಿರುವುದು ರಾಜಕೀಯವಾಗಿ ಹೆಚ್ಚು ಮಹತ್ವ ಪಡೆದಿದೆ.

ಚೀನಾ ಅಪಸ್ವರ: ಚೀನಾದ ವಕ್ತಾರ ವಾಂಗ್​​ ವೆನ್​ಬಿನ್ ಪ್ರತಿಕ್ರಿಯಿಸಿ​​ ,ಝಂಗ್ನಾನ್ ಚೀನಾದ ಪ್ರದೇಶವಾಗಿದೆ. ಭಾರತದ ಅಧಿಕಾರಿಗಳು ಝಂಗ್ನಾನ್​ಗೆ ಭೇಟಿ ನೀಡುವುದು ಚೀನಾದ ಪ್ರಾದೇಶಿಕ ಸಾರ್ವಭೌಮತ್ವವನ್ನು ಉಲ್ಲಂಘಿಸುತ್ತದೆ. ಇದು ಗಡಿಯಲ್ಲಿನ ಶಾಂತಿ ಮತ್ತು ನೆಮ್ಮದಿಗೆ ಅನಕೂಲಕರ ಬೆಳವಣಿಗೆ ಅಲ್ಲ ಎಂದು ಹೇಳಿದ್ದಾರೆ.

ಅಮಿತ್​ ಶಾ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ವೈಬ್ರೆಂಟ್​ ವಿಲೇಜಸ್​ ಕಾರ್ಯಕ್ರಮದ ಅಂಗವಾಗಿ ಕಿಬಿಥೂಗೆ ಭೇಟಿ ನೀಡಿದ್ದರು. ಈ ಯೋಜನೆ ಮೂಲಕ ಅರುಣಾಚಲ ಪ್ರದೇಶ, ಸಿಕ್ಕಿಂ, ಉತ್ತರಾಖಂಡ್​, ಹಿಮಾಚಲ ಪ್ರದೇಶ ಮತ್ತು ಕೇಂದ್ರಾಡಳಿತ ಪ್ರದೇಶ ಲಡಾಖ್​​ನಲ್ಲಿ ಮೂಲಭೂತ ಸೌಕರ್ಯಗಳ ಮತ್ತು ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಹಕಾರಿಯಾಗಿದೆ. ಯೋಜನೆಯ ಮೂಲಕ ಈ ಭಾಗದ 19 ಜಿಲ್ಲೆಯ 46 ಬ್ಲಾಕ್​ಗಳ 2967 ಗ್ರಾಮಗಳನ್ನು ಅಭಿವೃದ್ಧಿಗೊಳಿಸುವ ಕಾರ್ಯ ಮಾಡಲಾಗುತ್ತಿದೆ. ಗಡಿ ಗ್ರಾಮದ ಜನರನ್ನು ಸಬಲೀಕರಣಗೊಳಿಸುವ ಉದ್ದೇಶವನ್ನು ಇದು ಹೊಂದಿದೆ.

  • #WATCH | Kibithoo is India’s first village & not the last village. Earlier when people visited here, they used to say "I had gone to the last village of the country, but today, I'll say that I visited the first village of India,": Union HM Amit Shah in Kibithoo, Arunachal Pradesh pic.twitter.com/yvdrx1rK0n

ಉಭಯ ರಾಷ್ಟ್ರಗಳ ನಡುವಿನ ಗಡಿ ವಿವಾದವು ಹಲವು ದಶಕಗಳಿಂದ ನಡೆದುಕೊಂಡು ಬಂದಿದೆ. ಚೀನಾವು ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್​ ಎಂದು ಕರೆದಿದ್ದು, ಈ ಪ್ರದೇಶವೂ ಸೇರಿದಂತೆ ಹಿಮಾಲಯದ ಅತಿ ದೊಡ್ಡ ಭೂ ಭಾಗವನ್ನು ತನ್ನದೆಂದು ಪ್ರತಿಪಾದಿಸುತ್ತಿದೆ. ಇದಕ್ಕೆ ತಕ್ಕ ತಿರುಗೇಟು ನೀಡುತ್ತಿರುವ ಭಾರತ, ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ. ಚೀನಾದ ಪ್ರತಿಪಾದನೆಗಳು ಆಧಾರರಹಿತ ಎಂದು ಕಟುವಾಗಿ ಟೀಕಿಸಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ಶೈಕ್ಷಣಿಕ ಅರ್ಹತೆ ರಾಷ್ಟ್ರೀಯ ವಿಷಯವಲ್ಲ: ಶರದ್ ಪವಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.