ಶ್ರೀನಗರ(ಜಮ್ಮು): ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಳೆಯಿಂದ ಎರಡು ದಿನಗಳ ಕಾಲ ಜಮ್ಮು ಪ್ರವಾಸ ಕೈಗೊಳ್ಳಲಿದ್ದು, ಭದ್ರತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಕೇಂದ್ರ ಸಶಸ್ತ್ರ ಪಡೆ, ಕಾಶ್ಮೀರ ಪೊಲೀಸ್, ಗುಪ್ತಚರ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಅಲ್ಲಿನ ಭದ್ರತಾ ಪರಿಸ್ಥಿತಿ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಲಿರುವ ಅಮಿತ್ ಶಾ, ಮಾರ್ಚ್ 19ರಂದು ಜಮ್ಮುವಿನಲ್ಲಿ ಆಯೋಜನೆಗೊಂಡಿರುವ ಸಿಆರ್ಪಿಎಫ್ನ ರೈಸಿಂಗ್ ಡೇ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: ಮಾರ್ಚ್ 24ರಂದು ಯೋಗಿ ಪದಗ್ರಹಣ? ಮೋದಿ ಹಸಿರು ನಿಶಾನೆಗಾಗಿ ಕಾದು ಕುಳಿತ ಬಿಜೆಪಿ
ಗೃಹ ಸಚಿವರು ಜಮ್ಮುವಿಗೆ ತೆರಳುತ್ತಿರುವ ಕಾರಣ ಈಗಾಗಲೇ ಅರೆಸೇನಾ ಮತ್ತು ಗುಪ್ತಚರ ಸಂಸ್ಥೆಯ ಕೆಲ ಅಧಿಕಾರಿಗಳು ಈಗಾಗಲೇ ಜಮ್ಮು ತಲುಪಿದ್ದಾರೆ. ಕಳೆದ ಐದು ತಿಂಗಳ ಹಿಂದೆ ಅಮಿತ್ ಶಾ ಜಮ್ಮು-ಕಾಶ್ಮೀರ ಪ್ರವಾಸ ಕೈಗೊಂಡಿದ್ದರು. ಇದೀಗ ಮತ್ತೊಮ್ಮೆ ಅಮಿತ್ ಶಾ ಕಣಿವೆ ನಾಡಿಗೆ ಪ್ರವಾಸ ಕೈಗೊಳ್ಳಲಿದ್ದಾರೆ. ಇದರ ಬೆನ್ನಲ್ಲೇ ಉಗ್ರರಲ್ಲಿ ನಡುಕ ಸಹ ಶುರುವಾಗಿದೆ.