ಬಾರಾಮುಲ್ಲಾ (ಜಮ್ಮು ಮತ್ತು ಕಾಶ್ಮೀರ): ಕೇಂದ್ರ ಗೃಹ ಸಚಿವ ಅಮಿತ್ ಶಾ ಎರಡು ದಿನಗಳಿಂದ ಕಣಿವೆ ನಾಡು ಜಮ್ಮು ಮತ್ತು ಕಾಶ್ಮೀರ ಪ್ರವಾಸದಲ್ಲಿದ್ದಾರೆ. ಬುಧವಾರ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ್ದಾಗ ಆಜಾನ್ ಕೇಳಿ ಅಮಿತ್ ಶಾ ತಮ್ಮ ಭಾಷಣವನ್ನು ನಿಲ್ಲಿಸಿ ಗೌರವ ಸಲ್ಲಿಸಿದ್ದಾರೆ.
ಉತ್ತರ ಕಾಶ್ಮೀರದ ಬಾರಾಮುಲ್ಲಾದಲ್ಲಿ ಸಾರ್ವಜನಿಕ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿದ್ದರು. ಈ ವೇಳೆ, ಸಮೀಪದ ಮಸೀದಿಯಿಂದ ಆಜಾನ್ ಮೊಳಗಿತು. ಆಗ ತಕ್ಷಣವೇ ಅಮಿತ್ ಶಾ ತಮ್ಮ ಭಾಷಣವನ್ನು ನಿಲ್ಲಿಸಿದರು. ಈ ವೇಳೆ, ಸಭೆಯಲ್ಲಿ ನೆರೆದಿದ್ದ ಜನರು ಚಪ್ಪಾಳೆ ತಟ್ಟಿದರು.
ಇದಾದ ಸ್ವಲ್ಪ ಹೊತ್ತದಲ್ಲಿ ಆಜಾನ್ ಮುಗಿದ ನಂತರ ಅಮಿತ್ ಶಾ ತಮ್ಮ ಭಾಷಣವನ್ನು ಪುನರಾರಂಭಿಸಿದರು. ಅಮಿತ್ ಶಾ ಅವರ ಈ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲು ಕಾಶ್ಮೀರದ ವಿವಿಧ ಭಾಗಗಳಿಂದ ಸಾವಿರಾರು ಜನರು ಆಗಮಿಸಿದ್ದರು.
ಇದನ್ನೂ ಓದಿ: ಅಂಬಾನಿ ಕುಟುಂಬಕ್ಕೆ ವ್ಯಕ್ತಿಯಿಂದ ಬೆದರಿಕೆ: ರಿಲಯನ್ಸ್ ಆಸ್ಪತ್ರೆ ಸ್ಫೋಟಿಸುವುದಾಗಿ ಕರೆ