ಸಾಹಿಬ್ ಗಂಜ್(ಜಾರ್ಖಂಡ್): ಗುಲಾಬ್ ಚಂಡಮಾರುತದಿಂದಾಗಿ ಅನೇಕ ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಜನರು ಸಂಕಷ್ಟಕ್ಕೊಳಗಾಗಿದ್ದಾರೆ. ಇದರ ಮಧ್ಯೆ ವ್ಯಕ್ತಿಯೋರ್ವ ಮಗುವಿಗೆ ಪೋಲಿಯೊ ಲಸಿಕೆ ಹಾಕಿಸಲು ಅಡುಗೆ ಪಾತ್ರೆಯಲ್ಲಿ ಹೊತ್ತು ತಂದಿರುವ ಘಟನೆ ನಡೆದಿದೆ.
ಜಾರ್ಖಂಡ್ನ ಸಾಹಿಬ್ಗಂಜ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸಿರ್ಸಾ ಗ್ರಾಮದ ವ್ಯಕ್ತಿ ಶಿಶುವಿಗೆ ಲಸಿಕೆ ಕೊಡಿಸುವ ಉದ್ದೇಶದಿಂದ ವಿಭಿನ್ನ ಹಾದಿ ಹಿಡಿದಿದ್ದರು. ತನ್ನ ಮಗುವನ್ನು ಆರೋಗ್ಯ ಕೇಂದ್ರಕ್ಕೆ ಸುರಕ್ಷಿತವಾಗಿ ತರುವ ಬಗ್ಗೆ ಸಾಕಷ್ಟು ಯೋಚಿಸಿ ಹೈರಾಣಾದ ವ್ಯಕ್ತಿ ಕೊನೆಗೆ ಪಾತ್ರೆಯ ಮೊರೆ ಹೋಗಿದ್ದ. ಅಂತಿಮವಾಗಿ, ಭೀಕರ ಪ್ರವಾಹದ ನಡುವೆಯೂ ಶಿಶುವನ್ನು ಪಾತ್ರೆಯಲ್ಲಿ ಕರೆತಂದು ಲಸಿಕೆ ಹಾಕಿಸಿದ್ದಾನೆ.
ಇದನ್ನೂ ಓದಿ: ಗುಲಾಬ್ ಅಬ್ಬರಕ್ಕೆ 25 ಬಲಿ: ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಸಾವುನೋವು
ಹಳ್ಳಿಯಿಂದ ಆರೋಗ್ಯ ಕೇಂದ್ರಕ್ಕೆ ಬರಬೇಕಾದರೆ ನದಿ ದಾಟುವುದು ಅನಿವಾರ್ಯವಾಗಿತ್ತು. ಹೀಗಾಗಿ ಪಾತ್ರೆಯಲ್ಲಿ ಮಗು ಇಟ್ಟುಕೊಂಡು ಸುರಕ್ಷಿತವಾಗಿ ಬಂದಿದ್ದಾನೆ. ದೆಹಲಿ ಮೂಲದ ಏಮ್ಸ್ ವೈದ್ಯ ಯೋಗಿರಾಜ್ ರೈ ಕೂಡ ತಮ್ಮ ಟ್ವಿಟರ್ ಖಾತೆಯಲ್ಲಿ ಈ ಫೋಟೋ ಹಂಚಿಕೊಂಡಿದ್ದು, ‘ಗಂಗಾ ನದಿಯ ತಟದಲ್ಲಿ ಪುಟ್ಟ ಮಗುವಿಗೆ ಪಲ್ಸ್ ಪೋಲಿಯೋ ಲಸಿಕೆ’ ನೀಡಲಾಗಿದೆ ಎಂದು ಬರೆದುಕೊಂಡಿದ್ದಾರೆ.