ನವದೆಹಲಿ : ಪಂಜಾಬ್ ಸರ್ಕಾರದಲ್ಲಿ ಹೊಸ ಬೆಳವಣಿಗೆಗಳು ನಡೆಯುತ್ತಿರುವ ಮಧ್ಯೆಯೇ, ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಅವರು ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ಸೋಮವಾರ ಭೇಟಿಯಾದರು.
ಸಭೆಯಲ್ಲಿ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಹರೀಶ್ ರಾವತ್ ಮತ್ತು ಕೆ ಸಿ ವೇಣುಗೋಪಾಲ್ ಉಪಸ್ಥಿತರಿದ್ದರು.
ಓದಿ:ಹಿಮನದಿ ಪ್ರವಾಹದ ಚಿತ್ರ ಹಂಚಿಕೊಂಡ ಅಮೆರಿಕದ ಉಪಗ್ರಹ; ಆಘಾತಕಾರಿ ಸಂಗತಿ ಬಹಿರಂಗ
ಸಿಧು ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿದ್ರು. ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್ ಅವರು ಮಾತನಾಡಿ, ನಡೆಯುತ್ತಿರುವ ರೈತರ ಆಂದೋಲನದ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿದೆ.
ಕಾಂಗ್ರೆಸ್ ನಾಯಕತ್ವವು ರೈತರ ಪ್ರತಿಭಟನೆಯ ಮೌಲ್ಯಮಾಪನವನ್ನು ಕೇಳಿದೆ. ನಾವು ಅನೇಕ ಪಂಜಾಬ್ ನಾಯಕರನ್ನು ಸಭೆಗೆ ಕರೆದಿದ್ದೇವೆ. ನವಜೋತ್ ಸಿಂಗ್ ಸಿಧು ಇದೇ ಪ್ರಕ್ರಿಯೆಗಾಗಿ ಇಂದು ಇಲ್ಲಿಗೆ ಬಂದರು ಎಂದು ಅವರು ಹೇಳಿದರು.
ಕ್ಯಾಬಿನೆಟ್ ಅಥವಾ ಕಾಂಗ್ರೆಸ್ ಪಂಜಾಬ್ ಘಟಕದಲ್ಲಿನ ಬದಲಾವಣೆಯ ಊಹಾಪೋಹಗಳ ಬಗ್ಗೆ ಕೇಳಿದಾಗ, ಇದೀಗ ರೈತರ ಆಂದೋಲನವು ಇತರ ವಿಷಯಗಳಿಗಿಂತ ಮುಖ್ಯವಾಗಿದೆ ಎಂದು ಹೇಳಿದರು.