ಹೈದರಾಬಾದ್(ತೆಲಂಗಾಣ) : ಬಾಲಿವುಡ್ ನಟ ಇಶಾನ್ ಖಟ್ಟರ್ ಅವರು ನಟಿ ಅನನ್ಯಾ ಪಾಂಡೆ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ನಡೆಯುತ್ತಿರುವ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ವಿಚಾರಣೆಗಾಗಿ ತನ್ನ ಗೆಳತಿಯನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಪದೇಪದೆ ಪ್ರಶ್ನಿಸುತ್ತಿರುವಾಗ, ಇಶಾನ್ ಅವರ ಮುಂಬೈ ನಿವಾಸಕ್ಕೆ ಭೇಟಿ ನೀಡಿದರು.
ಶನಿವಾರ, ಇಶಾನ್ ಅನನ್ಯಾ ತನ್ನ ಕುಟುಂಬದೊಂದಿಗೆ ವಾಸಿಸುವ ಖಾರ್ ವೆಸ್ಟ್‌ನ ಪಾಲಿ ಹಿಲ್ ಪ್ರದೇಶದ ಕಟ್ಟಡಕ್ಕೆ ಆಗಮಿಸಿದರು. ಇಶಾನ್ ನೀಲಿ ಬಣ್ಣದ ಸ್ಲೀವ್‌ಲೆಸ್ ಟೀ ಶರ್ಟ್ ಜೊತೆಗೆ ಗಾಢ ನೀಲಿ ಛಾಯೆಯ ಟ್ರ್ಯಾಕ್ ಪ್ಯಾಂಟ್ ಧರಿಸಿದ್ದರು.
- " class="align-text-top noRightClick twitterSection" data="
">
ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಆರೋಪಿಯಾಗಿರುವ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಎನ್‌ಸಿಬಿ ಅಧಿಕಾರಿಗಳು ಅನನ್ಯಾ ಅವರನ್ನು ಎರಡು ದಿನಗಳ ಕಾಲ ವಿಚಾರಣೆ ಮಾಡಿದ ನಂತರ ಇಶಾನ್ ಅವರನ್ನು ಭೇಟಿಯಾಗಿದ್ದಾರೆ.
ಎನ್‌ಸಿಬಿ ಮೂಲಗಳ ಪ್ರಕಾರ, ಗುರುವಾರ ವಿಚಾರಣೆಯ ಸಮಯದಲ್ಲಿ, ಪ್ರಕರಣದಲ್ಲಿ ಆರೋಪಿಯಾಗಿರುವ ಆರ್ಯನ್ ಖಾನ್‌ಗೆ ಮಾದಕ ದ್ರವ್ಯಗಳನ್ನು ಪೂರೈಸಿದ ಆರೋಪವನ್ನು ಅನನ್ಯಾ ನಿರಾಕರಿಸಿದ್ದಾರೆ. ತಾವು ಎಂದಿಗೂ ಡ್ರಗ್ಸ್ ಸೇವಿಸಿಲ್ಲ ಎಂದು ಹೇಳಿದರು.
ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಜೈಲುವಾಸ ಅನುಭವಿಸುತ್ತಿರುವ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ವಿಚಾರಣೆ ನಡೆಸುತ್ತಿರುವ ಎನ್‌ಸಿಬಿ ಅಧಿಕಾರಿಗಳು, ನಿನ್ನೆ ಶಾರುಖ್ ಖಾನ್ರ ಮನ್ನತ್ ಹಾಗೂ ಬಾಲಿವುಡ್ ಖ್ಯಾತ ಹಿರಿಯ ನಟ ಚಂಕಿ ಪಾಂಡೆ ಅವರ ಪುತ್ರಿ ಅನನ್ಯಾ ಪಾಂಡೆ ನಿವಾಸದ ಮೇಲೆ ದಾಳಿ ನಡೆಸಿದ್ದರು. ನಟಿಯ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್ ವಶಪಡಿಸಿಕೊಂಡಿದ್ದರು. ಬಳಿಕ ಅನನ್ಯಾಗೆ ನೋಟಿಸ್ ನೀಡಿದ್ದು, ಇದರ ಬೆನ್ನಲ್ಲೇ ನಟಿ ಎನ್‌ಸಿಬಿ ವಿಚಾರಣೆಗೆ ಹಾಜರಾಗಿದ್ದರು.
ಅನನ್ಯಾ ಪಾಂಡೆ ಅವರಿಗೆ ಸೋಮವಾರ ಬೆಳಗ್ಗೆ ಎನ್‌ಸಿಬಿ ಅಧಿಕಾರಿಗಳು ಮೂರನೇ ಸುತ್ತಿನ ವಿಚಾರಣೆ ನಡೆಸಲಿದ್ದಾರೆ.
ಓದಿ: Drugs Case: ಸತತ 4 ಗಂಟೆ ವಿಚಾರಣೆ ಎದುರಿಸಿದ ಅನನ್ಯಾ... ಸೋಮವಾರ ಮತ್ತೆ ಹಾಜರು