ಕರ್ನಲ್(ಹರಿಯಾಣ) : ಕೇಂದ್ರ ಸರ್ಕಾರದ ನಾಯಕರು ಹಾಗೂ ಸ್ಥಳೀಯ ಜಿಲ್ಲಾಡಳಿತದ ಜೊತೆಗೆ ಮಾತುಕತೆ ಮುರಿದುಬಿದ್ದ ಹಿನ್ನೆಲೆಯಲ್ಲಿ ಕೆರಳಿದ ರೈತರು ಸಾವಿರಾರು ಸಂಖ್ಯೆಯಲ್ಲಿ ಹರಿಯಾಣದ ಕರ್ನಲ್‌ನ ಜಿಲ್ಲಾಧಿಕಾರದ ಮುಖ್ಯ ಕಚೇರಿಗೆ ರ್ಯಾಲಿ ಮೂಲಕ ತೆರಳುತ್ತಿದ್ದಾರೆ.
ಆಗಸ್ಟ್ 28ರಂದು ಪ್ರತಿಭಟನಾನಿರತ ರೈತರ ಮೇಲೆ ಲಾಠಿ ಪ್ರಹಾರ ಮಾಡಿದ ಅಧಿಕಾರಿಗಳ ವಿರುದ್ಧ ರೈತ ನಾಯಕರು ಕಠಿಣಕ್ರಮಕ್ಕೆ ಒತ್ತಾಯಿಸುತ್ತಿದ್ದಾರೆ. ಒಂದು ವೇಳೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸದೇ ಇದ್ದಲ್ಲಿ ಸರ್ಕಾರದ ಮಿನಿ ಕಾರ್ಯಾಲಯಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದ್ದಾರೆ.
ಇವತ್ತು ಬೆಳಗ್ಗೆ ಮಹಾ ಪಂಚಾಯತ್ ನಡೆಯುತ್ತಿರುವ ಇಲ್ಲಿನ ಹೊಸ ಅನಜ್ ಮಂಡಿಗೆ ಟ್ರ್ಯಾಕ್ಟರ್ ಮತ್ತು ಮೋಟಾರು ಸೈಕಲ್‌ಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ರೈತರು ಆಗಮಿಸಿದ್ದಾರೆ. ಈ ವೇಳೆ ಸ್ಥಳೀಯಾಡಳಿತ 11 ಮಂದಿಯ ನಿಯೋಗವು ಅವರನ್ನು ಭೇಟಿ ಮಾಡಿ, ರ್ಯಾಲಿಯಿಂದ ಹಿಂದೆ ಸರಿಯುವ ಬಗ್ಗೆ ಮನವೊಲಿಸುವ ಕಾರ್ಯ ಮಾಡಿದೆ.
-
#WATCH Protesting farmers gherao Mini Secretariat in Karnal, after concluding Kisan Mahapanchayat at Anaj Mandi . #Haryana pic.twitter.com/qxMxm3v6LB
— ANI (@ANI) September 7, 2021 " class="align-text-top noRightClick twitterSection" data="
">#WATCH Protesting farmers gherao Mini Secretariat in Karnal, after concluding Kisan Mahapanchayat at Anaj Mandi . #Haryana pic.twitter.com/qxMxm3v6LB
— ANI (@ANI) September 7, 2021#WATCH Protesting farmers gherao Mini Secretariat in Karnal, after concluding Kisan Mahapanchayat at Anaj Mandi . #Haryana pic.twitter.com/qxMxm3v6LB
— ANI (@ANI) September 7, 2021
ಈ ಬಗ್ಗೆ ಮಾತನಾಡಿರುವ ರೈತ ನಾಯಕರೊಬ್ಬರು, ಸ್ಥಳೀಯ ಆಡಳಿತದ ಜೊತೆ ನಮ್ಮ ಮಾತುಕತೆ ಫಲಪ್ರದವಾಗಿಲ್ಲ. ಅವರು ನಮ್ಮ ಬೇಡಿಕೆಗಳಿಗೆ ಒಪ್ಪಿಗೆ ಸೂಚಿಸಿಲ್ಲ ಎಂದರು. ಇದಕ್ಕೂ ಮೊದಲು ಬಿಕೆಯು ಸಂಘಟನೆಯ ನಾಯಕ ರಾಕೇಶ್ ಟಿಕಾಯತ್ ಮಾತನಾಡಿ, ಪ್ರತಿಭಟನಾನಿರತರ ತಲೆಗಳನ್ನು ಒಡೆಯುವಂತೆ ಜಿಲ್ಲಾಧಿಕಾರಿ ಪೊಲೀಸರಿಗೆ ಸೂಚಿಸಿರುವುದಕ್ಕೆ ಸಾಕ್ಷಿ ಇದೆ. ಹೀಗಾಗಿ, ಅವರನ್ನು ತಕ್ಷಣ ಅಮಾನತು ಮಾಡುವಂತೆ ನಾವು ಬೇಡಿಕೆ ಇಟ್ಟಿದ್ದೇವೆ ಎಂದರು.
-
#WATCH Protesting farmers gherao Mini Secretariat in Karnal, after concluding Kisan Mahapanchayat at Anaj Mandi . #Haryana pic.twitter.com/qxMxm3v6LB
— ANI (@ANI) September 7, 2021 " class="align-text-top noRightClick twitterSection" data="
">#WATCH Protesting farmers gherao Mini Secretariat in Karnal, after concluding Kisan Mahapanchayat at Anaj Mandi . #Haryana pic.twitter.com/qxMxm3v6LB
— ANI (@ANI) September 7, 2021#WATCH Protesting farmers gherao Mini Secretariat in Karnal, after concluding Kisan Mahapanchayat at Anaj Mandi . #Haryana pic.twitter.com/qxMxm3v6LB
— ANI (@ANI) September 7, 2021
ಈ ರ್ಯಾಲಿಯಲ್ಲಿ ಪ್ರಮುಖ ರೈತ ನಾಯಕರಾದ ರಾಕೇಶ್ ಟಿಕಾಯತ್ ಸೇರಿದಂತೆ ಬಲಬೀರ್ ಸಿಂಗ್ ರಾಜೇವಾಲ್, ಜೋಗಿಂದರ್ ಸಿಂಗ್ ಉಗ್ರಹಾನ್, ಯೋಗೇಂದ್ರ ಯಾದವ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
ಪಂಜಾಬ್, ಹರಿಯಾಣ, ಉತ್ತರಪ್ರದೇಶ ಸೇರಿದಂತೆ ಉತ್ತರದ ನಾನಾ ಕಡೆಗಳಲ್ಲಿ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಕಳೆದ ಮೂರು ತಿಂಗಳಿನಿಂದ ಪ್ರತಿಭಟನೆ ನಡೆಯುತ್ತಿದೆ. ಈ ಕಾಯ್ದೆಗಳಿಂದ ರೈತರು ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆ(MSP)ಗೆ ತೀವ್ರ ಸ್ವರೂಪದ ತೊಂದರೆಯಾಗುತ್ತದೆ.
ಆದ್ರೆ, ಈ ಬಗ್ಗೆ ಈಗಾಗಲೇ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ ಕನಿಷ್ಟ ಬೆಂಬಲ ಬೆಲೆ ಮುಂದುವರಿಸುವುದಾಗಿ ತಿಳಿಸಿದೆ. ಆದ್ರೆ, ಉತ್ತರ ಭಾರತದ ಹಲವು ರಾಜ್ಯಗಳ ರೈತರು ಅದರಲ್ಲೂ ಪ್ರಮುಖವಾಗಿ ಹರಿಯಾಣ, ಪಂಜಾಬ್ ಭಾಗದ ರೈತರು ಸಂಪೂರ್ಣ ಈ ಮೂರು ಕಾಯ್ದೆಗಳನ್ನೇ ಕೇಂದ್ರ ಸರ್ಕಾರ ವಾಪಸ್ ಪಡೆಯಬೇಕೆಂದು ಒತ್ತಾಯಿಸುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರ ತನ್ನ ಹಠಮಾರಿ ಧೋರಣೆಯಿಂದ ಹಿಂದೆ ಸರಿಯುತ್ತಿಲ್ಲ.