ನವದೆಹಲಿ : ದೇಶದಲ್ಲಿ ಹಿಜಾಬ್ ವಿವಾದ ಭಾರೀ ಚರ್ಚೆಯಲ್ಲಿರುವ ಈ ವೇಳೆಯಲ್ಲಿ ಕಾಂಗ್ರೆಸ್ ನಾಯಕ ಮತ್ತು ವಾಯವ್ಯ ದೆಹಲಿಯ ಸಂಸದ ಉದಿತ್ ರಾಜ್ ಅವರು ಮಹಿಳೆಯರಿಗೆ "ಸೀರೆ ಮತ್ತು ಸಲ್ವಾರ್ ಬದಲಿಗೆ ಜೀನ್ಸ್ ಧರಿಸಿ" ಎಂದು ಕರೆ ನೀಡಿದ್ದಾರೆ.
"ನನ್ನ ಲಕ್ಷಗಟ್ಟಲೆ ಬೆಂಬಲಿಗರಿಗೆ ಸೀರೆ ಮತ್ತು ಸಲ್ವಾರ್ ಬದಲಿಗೆ ಜೀನ್ಸ್ ಧರಿಸಲು ನಾನು ಕೇಳುತ್ತೇನೆ" ಎಂದು ಉದಿತ್ ರಾಜ್ ಟ್ವೀಟ್ ಮಾಡಿದ್ದಾರೆ. ಕರ್ನಾಟಕದಲ್ಲಿ ಮುಸ್ಲಿಂ ಹೆಣ್ಣು ಮಕ್ಕಳಿಗೆ ಹಿಜಾಬ್ ಧರಿಸಲು ನಿರಾಕರಿಸಿದ ಬಗ್ಗೆ ತೀವ್ರ ಗದ್ದಲದ ನಡುವೆಯೇ ಬಿಜೆಪಿಯಿಂದ ಕಾಂಗ್ರೆಸ್ ಸೇರ್ಪಡೆಯಾಗಿರುವ ಉದಿತ್ ರಾಜ್ ಈ ರೀತಿ ಹೇಳಿದ್ದಾರೆ.
-
मैं अपने लाखों - करोडों समर्थकों से कहूंगा कि साड़ी और सलवार के जगह पर जींस पहनें।
— Dr. Udit Raj (@Dr_Uditraj) February 12, 2022 " class="align-text-top noRightClick twitterSection" data="
">मैं अपने लाखों - करोडों समर्थकों से कहूंगा कि साड़ी और सलवार के जगह पर जींस पहनें।
— Dr. Udit Raj (@Dr_Uditraj) February 12, 2022मैं अपने लाखों - करोडों समर्थकों से कहूंगा कि साड़ी और सलवार के जगह पर जींस पहनें।
— Dr. Udit Raj (@Dr_Uditraj) February 12, 2022
ಇದನ್ನೂ ಓದಿ: ಹಿಜಾಬ್-ಕೇಸರಿ ಸಂಘರ್ಷದ ಮಧ್ಯೆಯೇ ರಾಜ್ಯದಲ್ಲಿ ಉರ್ದು ಯೂನಿವರ್ಸಿಟಿಗೆ ಬೇಡಿಕೆ ಇಟ್ಟ ಎಸ್‌ಡಿಪಿಐ
ಇತ್ತ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮೊನ್ನೆ ಬುಧವಾರ ಹಿಜಾಬ್ ವಿವಾದಕ್ಕೆ ಪ್ರತಿಕ್ರಯಿಸಿದ್ದು, ತಾನು ಏನು ಧರಿಸಬೇಕೆಂದು ನಿರ್ಧರಿಸುವುದು ಮಹಿಳೆಯ ಹಕ್ಕು ಎಂದು ಹೇಳಿದ್ದಾರೆ. ಇನ್ನು ಕರ್ನಾಟಕದಲ್ಲಿ ಹಿಜಾಬ್ ವಿವಾದ ಹೈಕೋರ್ಟ್ನಲ್ಲಿದ್ದು, ಸೋಮವಾರ ತೀರ್ಪು ಪ್ರಕಟವಾಗಲಿದೆ.