ಪಣಜಿ (ಗೋವಾ): ಭಾರತಾದ್ಯಂತ ಹೆಚ್ಚುತ್ತಿರುವ ಸೋಂಕುಗಳ ನಡುವೆ ಕೋವಿಡ್ ನಿಯಮಗಳನ್ನು ಸಂಪೂರ್ಣವಾಗಿ ಕಡೆಗಣಿಸಿ ಹೊಸ ವರ್ಷವನ್ನು ಆಚರಿಸಲು ಸಾವಿರಾರು ಜನರು ಗೋವಾದ ಜನಪ್ರಿಯ ಬೀಚ್‌ನಲ್ಲಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ಉತ್ತರ ಗೋವಾದ ಬಾಗಾ ಬೀಚ್ ಬಳಿಯ ರಸ್ತೆಯೊಂದರಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಜನರು ನಡೆದುಕೊಂಡು ಹೋಗುತ್ತಿರುವ ಹೊಸ ವರ್ಷ ಆಚರಣೆ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಹರ್ಮನ್ ಗೋಮ್ಸ್ ಎಂಬುವವರು ಭಾನುವಾರ (ಜನವರಿ 2) ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇದು ಕಳೆದ ರಾತ್ರಿ ಗೋವಾದ ಬಾಗಾ ಬೀಚ್‌ನಲ್ಲಿ ಹೊಸ ವರ್ಷ ಆಚರಣೆ. ದಯವಿಟ್ಟು ಕೋವಿಡ್ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ. ಇದು ಕೋವಿಡ್ ಅಲೆಗೆ ರಾಯಲ್ ಸ್ವಾಗತವಾಗಿದೆ ಎಂದು ಬರೆದುಕೊಂಡಿದ್ದಾರೆ.
-
This was Baga Beach in Goa ,last night. Please take the Covid scenario seriously. This is a Royal welcome to the Covid wave 👋 Mostly tourists. pic.twitter.com/mcAdgpqFUO
— HermanGomes_journo (@Herman_Gomes) January 2, 2022 " class="align-text-top noRightClick twitterSection" data="
">This was Baga Beach in Goa ,last night. Please take the Covid scenario seriously. This is a Royal welcome to the Covid wave 👋 Mostly tourists. pic.twitter.com/mcAdgpqFUO
— HermanGomes_journo (@Herman_Gomes) January 2, 2022This was Baga Beach in Goa ,last night. Please take the Covid scenario seriously. This is a Royal welcome to the Covid wave 👋 Mostly tourists. pic.twitter.com/mcAdgpqFUO
— HermanGomes_journo (@Herman_Gomes) January 2, 2022
ವಿಡಿಯೋಗೆ ಪ್ರತಿಕ್ರಿಯಿಸಿದ ಹಲವಾರು ನೆಟಿಜನ್‌ಗಳು ಇದು ‘ಸೂಪರ್‌ಸ್ಪ್ರೆಡರ್’ ಆಗಬಹುದು ಎಂದು ಹೇಳಿದ್ದಾರೆ. ಗೋವಾದಿಂದ ಬರುವ ಪ್ರವಾಸಿಗರಿಗೆ ಮಹಾರಾಷ್ಟ್ರದಲ್ಲಿ ಕೆಲವು ಹೊಸ ನಿಯಮಗಳನ್ನು ಜಾರಿಗೊಳಿಸಬೇಕು. ಬಹುಶಃ 7 ದಿನಗಳ ಕ್ವಾರಂಟೈನ್ ಒಳಪಡಿಸಬೇಕೆಂದು ಟ್ವಿಟರ್ ಬಳಕೆದಾರರು ಕಮೆಂಟ್ ಮಾಡಿದ್ದಾರೆ.
ಭಾನುವಾರ ಗೋವಾದಲ್ಲಿ 3,604 ಪರೀಕ್ಷೆಗಳಲ್ಲಿ 388 ಪ್ರಕರಣಗಳ ಜೊತೆ ಒಂದು ಸಾವು ದಾಖಲಾಗಿದೆ. ಆದರೆ, ಕೋವಿಡ್ ಪಾಸಿಟಿವಿಟಿ ದರವು ಶೇ.10ರಷ್ಟು ದಾಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕ್ರಿಸ್‌ಮಸ್ - ಹೊಸ ವರ್ಷದ ಹಬ್ಬದ ಸೀಸನ್‌ಗಾಗಿ ಸಾಕಷ್ಟು ಸಂಖ್ಯೆಯ ಪ್ರವಾಸಿಗರು ಗೋವಾಕ್ಕೆ ಬಂದಿರುವುದು ಕೋವಿಡ್ ಪ್ರಕರಣಗಳ ಉಲ್ಬಣಕ್ಕೆ ಕಾರಣವಾಗಿರಬಹುದು ಎಂದು ಅವರು ಹೇಳಿದರು.