ETV Bharat / bharat

ದೇಶ ಸೇವೆ, ಶಿಸ್ತು ಕಲಿಸಿಕೊಡುವ ಯೋಜನೆ.. ಅಗ್ನಿಪಥಕ್ಕೆ ನಿವೃತ್ತ ಯೋಧರ ಬೆಂಬಲ

ದೇಶದ ಯುವಕರನ್ನು ಅಲ್ಪಾವಧಿಗೆ ಸೇನೆಗೆ ಸೇರಿಸಿಕೊಳ್ಳುವ ಅಗ್ನಿಪಥ ಯೋಜನೆಯನ್ನು ನಿವೃತ್ತ ಯೋಧರು ಶ್ಲಾಘಿಸಿದ್ದಾರೆ. ಇದು ಯುವಕರಲ್ಲಿ ಶಿಸ್ತು ಮತ್ತು ದೇಶ ಸೇವೆ ಮಾಡಲು ಅವಕಾಶ ಕಲ್ಪಿಸಲಿದೆ ಎಂದಿದ್ದಾರೆ.

ಅಗ್ನಿಪಥಕ್ಕೆ ನಿವೃತ್ತ ಯೋಧರ ಬೆಂಬಲ
ಅಗ್ನಿಪಥಕ್ಕೆ ನಿವೃತ್ತ ಯೋಧರ ಬೆಂಬಲ
author img

By

Published : Jun 18, 2022, 7:17 PM IST

Updated : Jun 18, 2022, 7:42 PM IST

ರಾಯ್‌ಪುರ: ಅಲ್ಪಾವಧಿಗೆ ಯುವಕರನ್ನು ಸೇನೆಗೆ ಸೇರಿಸಿಕೊಳ್ಳಲಾಗುವ 'ಅಗ್ನಿಪಥ ಯೋಜನೆ'ಯ ವಿರುದ್ಧ ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆಗಳು ಹೋರಾಗಿವೆ. ಈ ಮಧ್ಯೆಯೇ ಕೇಂದ್ರ ಸರ್ಕಾರ ರಕ್ಷಣಾ ಸಚಿವಾಲಯದಲ್ಲಿ ಶೇ.10 ರಷ್ಟು ಹುದ್ದೆಗಳನ್ನು ಮೀಸಲಿಡಲಾಗುವುದು ಎಂದು ಘೋಷಿಸಿದೆ. ಅಲ್ಲದೇ, ಸಾಹಸಮಯ ಜೀವನವನ್ನು ಯುವಕರಿಗೆ ಕಲಿಸಿಕೊಡುವ ಯೋಜನೆ ಇದಾಗಿದೆ ಎಂದು ನಿವೃತ್ತ ಯೋಧರು ಯೋಜನೆಯನ್ನು ಶ್ಲಾಘಿಸಿದ್ದಾರೆ.

ಜೂನ್ 14 ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೇನೆಗೆ ಸೈನಿಕರ ನೇಮಕಾತಿಗಾಗಿ ಘೋಷಿಸಿದ ಹೊಸ ಯೋಜನೆಯು ಯುವಕರಲ್ಲಿ ಸಾಹಸಮಯ ಜೀವನದ ಆಸಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೇ, ಇತರ ಕ್ಷೇತ್ರಗಳಲ್ಳೂ ನಿವೃತ್ತರಿಗೆ ಉದ್ಯೋಗದ ಮಾರ್ಗಗಳನ್ನು ಕಲ್ಪಿಸಲಿದೆ ಎಂದು ಛತ್ತೀಸ್‌ಗಢದ ಇಬ್ಬರು ನಿವೃತ್ತ ಸೈನಿಕರು ಹೇಳಿದ್ದಾರೆ.

ಅಗ್ನಿಪಥಕ್ಕೆ ನಿವೃತ್ತ ಯೋಧರ ಬೆಂಬಲ

ಸೇನೆ ಸೇರಿದ 4 ವರ್ಷಗಳ ನಂತರ ನಿವೃತ್ತರಾದ ಬಳಿಕ ಅವರಿಗೆ ವಿವಿಧ ಕ್ಷೇತ್ರಗಳಲ್ಲಿ ಅವಕಾಶಗಳು ಸಿಗಲಿವೆ. ನಿರುದ್ಯೋಗಿ ಯುವಕರು ಉದ್ಯೋಗಕ್ಕಾಗಿ ಅಲ್ಲಿ ಇಲ್ಲಿ ಅಲೆದಾಡುತ್ತಾರೆ. ಇದರಲ್ಲಿರುವ ಆರ್ಥಿಕ ಪ್ರಯೋಜನಗಳಿಂದಾಗಿ ಈ ಯೋಜನೆಯು ಯುವಕರಿಗೆ ಒಳ್ಳೆಯದು. ಅಲ್ಲದೇ, ಯುವಕರು ದೇಶದ ಭದ್ರತೆಗೆ ಕೊಡುಗೆ ನೀಡಲು ಸಾಧ್ಯವಾಗುತ್ತದೆ. 4 ವರ್ಷಗಳ ಸೇವೆಯ ನಂತರ, ಯುವಕರು ಸೈನ್ಯವನ್ನು ತೊರೆದಾಗ, ಅವರಿಗೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಅದರ ಆಧಾರದ ಮೇಲೆ ಇತರ ಕ್ಷೇತ್ರಗಳಲ್ಲಿ ಯುವಕರಿಗೆ ಆದ್ಯತೆ ನೀಡಲಾಗುತ್ತದೆ ಎಂದು ನಿವೃತ್ತ ಯೋಧ ವಿಜಯ್ ದಾಗಾ ಹೇಳಿದ್ದಾರೆ.

ಶಿಸ್ತೇ ಅವರ ಅಸ್ತ್ರ: ನೌಕಾಪಡೆಯ ನಿವೃತ್ತ ಯೋಧ ಭೂಪೇಂದ್ರ ಸಾಹು ಕೂಡ ಅಗ್ನಿಪಥ್ ನೇಮಕಾತಿ ಯೋಜನೆಯನ್ನು ಶ್ಲಾಘಿಸಿದರು. ಈ ಯೋಜನೆಯಿಂದ ಯುವಕರು ಸೇನೆ, ನೌಕಾಪಡೆ ಮತ್ತು ವಾಯುಪಡೆಯಲ್ಲಿ ಉದ್ಯೋಗವನ್ನು ಪಡೆಯಲು ಸಾಧ್ಯವಾಗುತ್ತದೆ. ಎಲ್ಲರಿಗೂ ಸೇನೆ ಸೇರಲು ಅಸಾಧ್ಯ. ಆದರೆ, ಈ ಯೋಜನೆ ಅದನ್ನು ಸಾಕಾರಗೊಳಿಸುತ್ತದೆ. 4 ವರ್ಷದ ಬಳಿಕ ಅವರು ಬೇರೆಡೆ ಕೆಲಸವನ್ನು ಸುಲಭವಾಗಿ ಪಡೆಯಲಿದ್ದಾರೆ. ಇದಕ್ಕೆ ಕಾರಣ ಸೇನೆಯಿಂದ ನಿವೃತ್ತರಾದ ಬಳಿಕ ಅವರಲ್ಲಿರುವ ಶಿಸ್ತು, ಸಮಯಪ್ರಜ್ಞೆ ಅವರನ್ನು ಉನ್ನತಗೊಳಿಸುತ್ತದೆ ಎಂದಿದ್ದಾರೆ.

ಓದಿ: ಅಗ್ನಿವೀರರಿಗೆ ರಕ್ಷಣಾ ಸಚಿವಾಲಯದಲ್ಲಿ ಶೇ.10ರಷ್ಟು ಹುದ್ದೆಗಳು ಮೀಸಲು : ಕೇಂದ್ರದ ಘೋಷಣೆ

Last Updated : Jun 18, 2022, 7:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.