ಸುವರ್ಣಪುರ (ಒಡಿಶಾ): ಜಿಲ್ಲೆಯ ಸುವರ್ಣಪುರದ ಬಿನಿಕಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಹಿತಕರ ಘಟನೆಯೊಂದು ಬೆಳಕಿಗೆ ಬಂದಿದೆ. ಈ ಕೇಂದ್ರದಲ್ಲಿ ನಿನ್ನೆ ಸಂಜೆ ವೃದ್ಧೆಯೊಬ್ಬರು ಸಾವನ್ನಪ್ಪಿದ್ದರು. ನಂತರ ಆರೋಗ್ಯ ಕೇಂದ್ರದ ಅಧಿಕಾರಿಗಳು ಮೃತದೇಹವನ್ನು ಗೌರವಯುತವಾಗಿ ಮನೆಗೆ ತರಲು ಅಗತ್ಯ ಕ್ರಮಗಳನ್ನು ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.
ಆಂಬ್ಯುಲೆನ್ಸ್ ವಾಹನ ಲಭ್ಯವಿಲ್ಲ ಕಾರಣಕ್ಕೆ ಮೃತ ವೃದ್ಧೆಯ ಶವವನ್ನು ಸ್ವಯಂ ಸೇವಕರು ಸೈಕಲ್‌ನಲ್ಲಿ ಹೊತ್ತುಕೊಂಡು ಹೋಗುತ್ತಿರುವ ಮನಕಲಕುವ ದೃಶ್ಯ ಕಂಡು ಬಂದಿದೆ. ಕಾರ್ಯನಿರತ ವೈದ್ಯರಿಗೆ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡುವಂತೆ ಕುಟುಂಬಸ್ಥರು ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ವೈದ್ಯರು ಆಂಬ್ಯುಲೆನ್ಸ್ ಬರುವವರೆಗೆ ಕಾಯಿರಿ ಎಂದು ಹೇಳಿದರು. ಆದ್ರೆ ಬಹಳ ಹೊತ್ತಾದರೂ ಯಾವುದೇ ವಾಹನದ ವ್ಯವಸ್ಥೆ ಆಗಲಿಲ್ಲ ಎಂದು ಮೃತರ ದೂರದ ಸಂಬಂಧಿಕರು, ಸ್ವಯಂ ಸೇವಕರು ಆರೋಪಿಸಿದರು.
ಮೃತ ಮಹಿಳೆಯ ದೂರದ ಸಂಬಂಧಿಕರು, ಸ್ವಯಂ ಸೇವಕರು, ಶವವನ್ನು ಸೈಕಲ್‌ನಲ್ಲಿ ಹೊತ್ತುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಸೈಕಲ್ ತೆಗೆದುಕೊಂಡು ಆಸ್ಪತ್ರೆಯ ವಾರ್ಡಿನೊಳಗೆ ಬಂದು, ಶವವನ್ನು ಬಿಳಿ ಬಟ್ಟೆಯನ್ನು ಸುತ್ತಿದ ಮೂವರು ವ್ಯಕ್ತಿಗಳು ಸೈಕಲ್ನ ಹಿಂದಿನ ಕ್ಯಾರಿಯರ್ನಲ್ಲಿ ಶವವನ್ನು ಎತ್ತಿ ಇಟ್ಟುಕೊಂಡು ನಿಧಾನವಾಗಿ ಹೋಗುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ನಂತರ ಶವವನ್ನು ಆಸ್ಪತ್ರೆಯ ಮುಖ್ಯ ಗೇಟ್ ಮೂಲಕ ಸೈಕಲ್‌ನಲ್ಲಿ ಹೊರಗೆ ತೆಗೆದುಕೊಂಡು ಬರಲಾಯಿತು. ಇದನ್ನು ಕಂಡ ಜನರು ಆಶ್ಚರ್ಯಚಕಿತರಾಗಿ ವೀಕ್ಷಿಸಿದರು. ಈ ಘಟನೆ ಆರೋಗ್ಯ ಸಚಿವರ ಜಿಲ್ಲೆಯ ಆಸ್ಪತ್ರೆಯಲ್ಲಿ ಮೃತ ವ್ಯಕ್ತಿಗೆ ಸೂಕ್ತ ಗೌರವ ನೀಡಿಲ್ಲ ಹಾಗೂ ಮೃತ ವ್ಯಕ್ತಿಗೆ ಆಂಬ್ಯುಲೆನ್ಸ್ ವಾಹನ ಲಭಿಸಲಿಲ್ಲ ಎಂದು ಆರೋಪಿಸಲಾಗಿದೆ.
ತೀವ್ರ ನಿರ್ಜಲೀಕರಣಕ್ಕೆ ತುತ್ತಾಗಿ ವೃದ್ಧೆ ಸಾವು: ಮೇಗಳ ಗ್ರಾಮದ ವೃದ್ಧೆ ರುಕ್ಮಿಣಿ ಸಾಹು ಅವರು ನಿನ್ನೆ ಮಧ್ಯಾಹ್ನ ಅಸ್ವಸ್ಥಗೊಂಡಿದ್ದು, ಬಿಸಿಲಿನ ಝಳದಿಂದ ತಿರುಗಾಡುತ್ತಿದ್ದ ರುಕ್ಮಿಣಿಗೆ ಏಕಾಏಕಿ ಅಸ್ವಸ್ಥಗೊಂಡಿದ್ದು, ಗ್ರಾಮದ ದೂರದ ಸಂಬಂಧಿಯೊಬ್ಬರು ತಕ್ಷಣವೇ ರುಕ್ಮಿಣಿಯನ್ನು ಬಿನಿಕಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ರುಕ್ಮಿಣಿಗೆ ಅಗತ್ಯ ಚಿಕಿತ್ಸೆಯನ್ನು ವೈದ್ಯರು ನೀಡಿದ್ದಾರೆ. ಬೇಸಿಗೆಯಲ್ಲಿ ರುಕ್ಮಿಣಿಯ ಕೆಲಸದಿಂದ ತೀವ್ರ ನಿರ್ಜಲೀಕರಣಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾರೆ. ನಂತರ ವೃದ್ಧೆಯ ಶವ ಆಸ್ಪತ್ರೆಯಲ್ಲಿ ಬಹಳ ಹೊತ್ತು ಇಡಲಾಗಿತ್ತು. ಡೆತ್ ರಿಪೋರ್ಟ್ ನೀಡಿದ ಬಳಿಕ ಶವ ತೆಗೆದುಕೊಂಡು ಹೋಗುವಂತೆ ವೈದ್ಯರು ಹೇಳಿದ್ದರು. ಮೃತ ವೃದ್ಧೆಗೆ ಸಂಬಂಧಿಕರು ಯಾರೂ ಇಲ್ಲದ ಕಾರಣ ಶವ ಬಹಳ ಅಲ್ಲಿಯೇ ಇತ್ತು. ವೃದ್ಧೆಯನ್ನು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದವರೂ ವಾಪಸ್ ಬರಲಿಲ್ಲ.
ಮಹಿಳೆಯ ಶವವನ್ನು ಸೈಕಲ್ ಮೇಲೆ ಸಾಗಣೆ: ಈ ಸುದ್ದಿ ತಿಳಿದು ಸ್ಥಳೀಯ ಸ್ವಯಂ ಸೇವಕರ ನೆರವಿನಿಂದ ಮೃತ ಮಹಿಳೆಯ ಶವವನ್ನು ಸೈಕಲ್ ಮೇಲೆ ಸಾಗಿಸಲಾಯಿತು. ಈ ಅಮಾನವೀಯ ಘಟನೆ ಬಗ್ಗೆ, ಜಿಲ್ಲಾ ಆರೋಗ್ಯ ಇಲಾಖೆಯ ಯಾವೊಬ್ಬ ಅಧಿಕಾರಿಯೂ ಸ್ಪಂದಿಸಿಲ್ಲ. ಮತ್ತೊಂದೆಡೆ ಕಾರ್ಯನಿರ್ವಹಣಾ ವೈದ್ಯರು ಇತರ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾಗ ಅವರ ಅನುಪಸ್ಥಿತಿಯಲ್ಲಿ ಕೆಲವರು ಮೃತದೇಹವನ್ನು ಸೈಕಲ್‌ನಲ್ಲಿ ಹೊತ್ತುಕೊಂಡು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಆರೋಗ್ಯ ಸಚಿವರ ಜಿಲ್ಲೆಯಲ್ಲಿ ಇಂತಹ ದುರ್ಘಟನೆ ನಡೆದಿರುವುದು ಚರ್ಚೆಗೆ ಗ್ರಾಸವಾಗಿದೆ.
ಆಟೋರಿಕ್ಷಾದಲ್ಲಿ ಶವ ಸಾಗಣೆ: ಆಂಬ್ಯುಲೆನ್ಸ್ ಸಿಗದ ಕಾರಣ ಸಂಬಂಧಿಕರು ಆಟೊರಿಕ್ಷಾದಲ್ಲಿ ವೃದ್ಧೆಯ ಶವವನ್ನು ಶವಾಗಾರಕ್ಕೆ ಕೊಂಡೊಯ್ದರು. ಪುಣೆಯ ನವ ಮೋದಿಕಾನಾ ಕ್ಯಾಂಪ್ ಪ್ರದೇಶದಿಂದ ಹತ್ತಿರದ ಶವಾಗಾರಕ್ಕೆ ಕೊಂಡೊಯ್ಯಲು ವಾಹನ ಸಿಗದ ಹಿನ್ನೆಲೆಯಲ್ಲಿ ಕುಟುಂಬವು 95 ವರ್ಷದ ವೃದ್ಧೆಯ ಶವವನ್ನು ಆಟೋ ರಿಕ್ಷಾದಲ್ಲಿ ಕೊಂಡೊಯ್ಯಲಾಯಿತು. ಕಳೆದ ಸೋಮವಾರ (12.06.2023) ರಾತ್ರಿ ಈ ಘಟನೆ ನಡೆದಿತ್ತು. ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿದ ವೃದ್ಧೆಯ ಶವವನ್ನು ಸಮೀಪದ ಸರ್ದಾರ್ ವಲ್ಲಭಭಾಯಿ ಪಟೇಲ್ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲು ಸಂಬಂಧಿಕರು ನಿರ್ಧರಿಸಿದ್ದರು.
ಇದರಿಂದ ಮೃತದೇಹವನ್ನು ಸಾವಿನ ಮನೆಯಿಂದ 500 ಮೀಟರ್ ದೂರದಲ್ಲಿರುವ ಆಸ್ಪತ್ರೆಗೆ ಕೊಂಡೊಯ್ಯಲು ಆಂಬುಲೆನ್ಸ್ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ವಾಹನವಿದೆ ಆದರೆ, ಡ್ರೈವರೇ ಇಲ್ಲ ಎಂಬ ಉತ್ತರಗಳೇ ಹೆಚ್ಚು ಬಂದವು. ಇದರಿಂದ ಸಂಬಂಧಿಕರು ಆಟೋರಿಕ್ಷಾದಲ್ಲಿ ಶವವನ್ನು ಆಸ್ಪತ್ರೆಗೆ ಸಾಗಿಸಿದ್ದರು. ಆದರೆ, ಶವಾಗಾರವನ್ನು ಮುಚ್ಚಲಾಗಿತ್ತು. ನಂತರ ಮೃತ ದೇಹವನ್ನು ಸ್ವಲ್ಪ ದೂರದಲ್ಲಿರುವ ಸಸೂನ್ ಆಸ್ಪತ್ರೆಗೆ ಕೊಂಡೊಯ್ದರು. ಆದರೆ, ಸರ್ದಾರ್ ವಲ್ಲಭಭಾಯಿ ಪಟೇಲ್ ಆಸ್ಪತ್ರೆಯ ಅಧಿಕಾರಿಗಳು ಆಂಬ್ಯುಲೆನ್ಸ್ ಸಿಬ್ಬಂದಿ ಕೊರತೆಯೇ ಈ ದುಃಸ್ಥಿತಿಗೆ ಕಾರಣವಾಗಿದ್ದು, ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯಿಂದ ಕಾರ್ಯಾಚರಣೆಗೆ ತೊಂದರೆಯಾಗುತ್ತಿದೆ ಎಂದು ಆಸ್ಪತ್ರೆಯವರು ಸಮಜಾಯಿಷಿ ನೀಡಿದ್ದರು.
ಇದನ್ನೂ ಓದಿ: ಮಗುವಿನ ಮೃತದೇಹ ಕೈಚೀಲದಲ್ಲಿ ಇಟ್ಟುಕೊಂಡು ಬಸ್ನಲ್ಲಿ ಪ್ರಯಾಣಿಸಿದ ತಂದೆ...!