ನವದೆಹಲಿ: ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳು ಸತತ 3ನೇ ವರ್ಷ ಹಿಂದಿನ ದಾಖಲೆ ಮುರಿದಿದ್ದಾರೆ ಎಂದು ಭಾರತದಲ್ಲಿರುವ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ಹೇಳಿದ್ದಾರೆ. ಶೈಕ್ಷಣಿಕ ವರ್ಷ 2022-23ರಲ್ಲಿ ಅಮೆರಿಕದಲ್ಲಿ ಶಿಕ್ಷಣ ಪಡೆಯುತ್ತಿರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ 2,68,000 ದಾಟಿದೆ ಎಂದು ಅವರು ತಿಳಿಸಿದ್ದಾರೆ. 2,68,000ಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳು ಸದ್ಯ ಅಧ್ಯಯನ ಮಾಡುತ್ತಿದ್ದಾರೆ ಎಂದು ವರದಿ ಬಹಿರಂಗಪಡಿಸಿದೆ ಎಂದು ಗಾರ್ಸೆಟ್ಟಿ ಗುರುವಾರ ಹಂಫ್ರಿ ಫೆಲೋಶಿಪ್ ಕಾರ್ಯಕ್ರಮದ 45ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಮಾಹಿತಿ ನೀಡಿದರು.
-
Indian students set record for 3rd consecutive year in US, now constitute quarter of international students: Envoy Garcetti
— ANI Digital (@ani_digital) November 17, 2023 " class="align-text-top noRightClick twitterSection" data="
Read @ANI Story | https://t.co/QZTr7kVdfG#US #India #EricGarcetti pic.twitter.com/QxN0tSdiWh
">Indian students set record for 3rd consecutive year in US, now constitute quarter of international students: Envoy Garcetti
— ANI Digital (@ani_digital) November 17, 2023
Read @ANI Story | https://t.co/QZTr7kVdfG#US #India #EricGarcetti pic.twitter.com/QxN0tSdiWhIndian students set record for 3rd consecutive year in US, now constitute quarter of international students: Envoy Garcetti
— ANI Digital (@ani_digital) November 17, 2023
Read @ANI Story | https://t.co/QZTr7kVdfG#US #India #EricGarcetti pic.twitter.com/QxN0tSdiWh
ಅಮೆರಿಕದ ಶಿಕ್ಷಣದ ಮೇಲೆ ಭಾರತೀಯ ವಿದ್ಯಾರ್ಥಿಗಳು ಎಷ್ಟರ ಮಟ್ಟಿಗೆ ಪ್ರಭಾವ ಹೊಂದಿದ್ದಾರೆ ಎಂಬುದನ್ನು ರಾಯಭಾರಿ ವಿವರಿಸಿದ್ದು, ಎಲ್ಲ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಲ್ಲಿ ಭಾರತೀಯ ವಿದ್ಯಾರ್ಥಿಗಳು ಕಾಲು ಭಾಗವಾಗಿದ್ದಾರೆ ಎಂದರು. ಚೀನಾವನ್ನು ಹಿಂದಿಕ್ಕಿ ಭಾರತವು ಅಮೆರಿಕದಲ್ಲಿ ಪದವಿ ವಿದ್ಯಾರ್ಥಿಗಳ ಅತಿದೊಡ್ಡ ಮೂಲವಾಗಿದೆ ಎಂದರು.
ಮುಂದುವರೆದು ಮಾತನಾಡಿದ ರಾಯಭಾರಿ, ಭಾರತ-ಅಮೆರಿಕ ದೇಶಗಳ ಸಂಬಂಧದ ಕುರಿತು ಮಾತನಾಡಿದರು. ಪ್ರಪಂಚದಲ್ಲಿ ಕೆಲವು ದೇಶ-ದೇಶಗಳ ನಡುವೆ ಯುದ್ಧ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ಭಾರತ-ಅಮೆರಿಕದ ನಡುವಿನ ಸಂಬಂಧದ ಮಹತ್ವವನ್ನು ಒತ್ತಿ ಹೇಳಿದರು. ಹಾಗೆಯೇ, ಯುದ್ಧ, ಹವಾಮಾನ ಬಿಕ್ಕಟ್ಟು, ಬಡತನದ ಜಾಗತಿಕ ಸಮಸ್ಯೆಗಳ ಬಗ್ಗೆ ವಿವರಿಸುತ್ತಾ 2 ರಾಷ್ಟ್ರಗಳ ನಡುವಿನ ಪಾಲುದಾರಿಕೆ ಉತ್ತಮವಾಗಿದೆ ಎಂದು ಹೇಳಿದರು.
ದೀಪಾವಳಿ ಆಚರಣೆಯಲ್ಲಿ ರಾಯಭಾರಿ ಭಾಗಿ: ಅಮೆರಿಕದಲ್ಲಿ ಕ್ರಿಸ್ಮಸ್ ಮತ್ತು ಇತರ ಹಬ್ಬದ ರಜಾದಿನಗಳನ್ನು ಅನುಭವಿಸಿರುವ ರಾಯಭಾರಿ ಎರಿಕ್, ಭಾರತದ ದೀಪಾವಳಿ ಹಬ್ಬದ ಭವ್ಯತೆ ಮತ್ತು ಬೆಳಕಿನ ಚೈತನ್ಯದ ಬಗ್ಗೆ ಪ್ರಶಂಸಿದರು. ನಾನು ಮೊದಲ ಬಾರಿ ಭಾರತದಲ್ಲಿ ದೀಪಾವಳಿ ಆಚರಿಸಿದೆ ಎಂದು ಸಂತಸ ವ್ಯಕ್ತಪಡಿಸಿ, ಇದು ಎಲ್ಲಾ ಹಬ್ಬ-ಆಚರಣೆಗಳನ್ನೂ ಮೀರಿಸುತ್ತದೆ ಎಂದು ಕೊಂಡಾಡಿದರು.
ಇದನ್ನೂ ಓದಿ: ಚೀನಾ ಒಂದಿಂಚು ವಿದೇಶಿ ಭೂಮಿಯನ್ನೂ ಆಕ್ರಮಿಸಿಕೊಂಡಿಲ್ಲ: ಕ್ಸಿ ಜಿನ್‌ಪಿಂಗ್