ETV Bharat / bharat

ಭಾರತ ಬಿಟ್ಟು ಪ್ರಪಂಚದ ಬೇರೆಲ್ಲಿಯೂ ನಾವು ಶಿಫ್ಟ್​ ಆಗುವುದಿಲ್ಲ ಎಂದ ಅಂಬಾನಿ - ಲಂಡನ್​ನಲ್ಲಿ ವಾಸಿಸುವ ವಿಚಾರ ತಳ್ಳಿ ಹಾಕಿದ ಅಂಬಾನಿ

ಭಾರತ ಬಿಟ್ಟು ಪ್ರಪಂಚದ ಬೇರೆಲ್ಲಿಯೂ ನಾವು ಶಿಫ್ಟ್​ ಆಗುವುದಿಲ್ಲ ಎಂದು ಅಂಬಾನಿ ತಮ್ಮ ಕಂಪನಿ ಮೂಲಕ ಪ್ರಕಟಣೆ ಹೊರಡಿಸಿದ್ದಾರೆ.

Ambanis Deny, Ambanis Deny Move To London, Ambani news, Ambani latest news, ಭಾರತ ಬಿಟ್ಟು ಬೇರೆಲ್ಲಿಯೂ ವಾಸಿಸುವುದಿಲ್ಲ ಎಂದ ಅಂಬಾನಿ, ಭಾರತ ಬಿಟ್ಟು ಪ್ರಪಂಚದ ಬೇರೆಲ್ಲಿಯೂ ವಾಸಿಸುವುದಿಲ್ಲ ಎಂದ ಅಂಬಾನಿ, ಲಂಡನ್​ನಲ್ಲಿ ವಾಸಿಸುವ ವಿಚಾರ ತಳ್ಳಿ ಹಾಕಿದ ಅಂಬಾನಿ, ಅಂಬಾನಿ ಸುದ್ದಿ,
ಭಾರತ ಬಿಟ್ಟು ಪ್ರಪಂಚದ ಬೇರೆಲ್ಲಿಯೂ ಶಿಫ್ಟ್​ ಆಗುವುದಿಲ್ಲ ಎಂದ ಅಂಬಾನಿ
author img

By

Published : Nov 6, 2021, 5:48 AM IST

Updated : Nov 6, 2021, 6:17 AM IST

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬ ಭಾರತ ಬಿಟ್ಟು ಲಂಡನ್‌ನಲ್ಲಿ ವಾಸಿಸುವ ಸಾಧ್ಯತೆಯಿದೆ ಎಂದು ಹಬ್ಬಿದ್ದ ಸುದ್ದಿಯನ್ನು ಅವರು ತಳ್ಳಿಹಾಕಿದ್ದಾರೆ.

ಅಂಬಾನಿ ಕುಟುಂಬವು ಲಂಡನ್‌ನ ಸ್ಟೋಕ್ ಪಾರ್ಕ್‌ನಲ್ಲಿ ವಾಸಿಸುವ ಯೋಜನೆ ಹಾಕಿಕೊಂಡಿದ್ದಾರೆ ಎಂಬುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯವಾಗಿ ಚರ್ಚೆಯಾಗುತ್ತಿದ್ದು, ಇದಕ್ಕೆ ಯಾವುದೇ ಆಧಾರವಿಲ್ಲವೆಂದು ಪ್ರಕಟಣೆ ಮೂಲಕ ಅಂಬಾನಿ ಕುಟುಂಬ ಸ್ಪಷ್ಟನೆ ನೀಡಿದೆ.

ಅಂಬಾನಿ ಮತ್ತು ಅವರ ಕುಟುಂಬವು ಲಂಡನ್ ಅಥವಾ ಪ್ರಪಂಚದ ಬೇರೆಲ್ಲಿಯೂ ಸ್ಥಳಾಂತರಗೊಳ್ಳುವ ಅಥವಾ ವಾಸಿಸುವ ಯಾವುದೇ ಯೋಜನೆಗಳನ್ನು ರೂಪಿಸಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತದೆ ಎಂದು ಕಂಪನಿ ಹೇಳಿದೆ.

ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಮುಖೇಶ್ ಅಂಬಾನಿ ಅವರು ತಮ್ಮ ಕುಟುಂಬದೊಂದಿಗೆ ಮಹಾರಾಷ್ಟ್ರದ ಮುಂಬೈನ ಅಲ್ಟಾಮೌಂಟ್ ರಸ್ತೆಯ ಆ್ಯಂಟಿಲಿಯಾದಲ್ಲಿ 4,00,000 ಚದರ್​ ಅಡಿ ವಿಸ್ತೀರ್ಣವಾದ ನಿವಾಸದಲ್ಲಿ ವಾಸಿಸುತ್ತಿದ್ದಾರೆ. ಅಂಬಾನಿ ಕುಟುಂಬವು ಬಕಿಂಗ್‌ಹ್ಯಾಮ್‌ಶೈರ್‌ನಲ್ಲಿರುವ 300 ಎಕರೆ ಕಂಟ್ರಿ ಕ್ಲಬ್‌, ಸ್ಟೋಕ್ ಪಾರ್ಕ್ ಅನ್ನು ತಮ್ಮ ಪ್ರಾಥಮಿಕ ನಿವಾಸವನ್ನಾಗಿ ಮಾಡುವ ನಿರೀಕ್ಷೆಯಿದೆ ಎಂದು ಇತ್ತೀಚಿನ ವರದಿಗಳು ತಿಳಿಸಿದ್ದವು. ಇದು ಆಧಾರರಹಿತವಾಗಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಇತ್ತೀಚೆಗೆ ಸ್ಟೋಕ್ ಪಾರ್ಕ್ ಎಸ್ಟೇಟ್ ಅನ್ನು ಸ್ವಾಧೀನಪಡಿಸಿಕೊಂಡಿದ್ದು, ಇದನ್ನು ಗಾಲ್ಫಿಂಗ್ ಮತ್ತು ಕ್ರೀಡಾ ರೆಸಾರ್ಟ್ ಆಗಿ ಅಭಿವೃದ್ಧಿ ಪಡಿಸುವ ಗುರಿಯನ್ನು ಹೊಂದಲಾಗಿದೆ ಎಂದು ಕಂಪನಿ ಮಾಹಿತಿ ನೀಡಿದೆ.

Last Updated : Nov 6, 2021, 6:17 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.