ETV Bharat / bharat

ಅಂಬಾನಿ ಉತ್ತರಾಧಿಕಾರ ಹಸ್ತಾಂತರ: ಮಗಳು ಇಶಾಗೆ ರಿಟೇಲ್, ಮಗ ಅನಂತ್​ಗೆ ಇಂಧನ ಘಟಕದ ಹೊಣೆ - ಮಗಳು ಇಶಾಗೆ ರಿಟೇಲ್ ಮಗ ಅನಂತ್​ಗೆ ಇಂಧನ ಘಟಕ

65 ವರ್ಷದ ಮುಖೇಶ್​ ಅಂಬಾನಿಗೆ ಮೂವರು ಮಕ್ಕಳಿದ್ದು ಈ ಪೈಕಿ ಆಕಾಶ್ ಮತ್ತು ಇಶಾ ಅವಳಿಗಳಾಗಿದ್ದು, ಅನಂತ್ ಕಿರಿಯ ಮಗ. ಇದೀಗ ಆಕಾಶ್ ಮತ್ತು ಇಶಾ ಕ್ರಮವಾಗಿ ಜಿಯೋ ಮತ್ತು ರಿಟೇಲ್‌ ಉದ್ಯಮದ ನಾಯಕತ್ವ ವಹಿಸಿಕೊಂಡಿದ್ದಾರೆ.

Akash and Isha
ಆಕಾಶ್ ಮತ್ತು ಇಶಾ
author img

By

Published : Aug 29, 2022, 6:27 PM IST

Updated : Aug 29, 2022, 6:53 PM IST

ನವದೆಹಲಿ: ಬಿಲಿಯನೇರ್ ಉದ್ಯಮಿ ಮುಖೇಶ್ ಅಂಬಾನಿ ಇಂದು ರಿಲಯನ್ಸ್‌ ಸಂಸ್ಥೆಯ ತಮ್ಮ ಉತ್ತರಾಧಿಕಾರ ಯೋಜನೆಯನ್ನು ಪ್ರಕಟಿಸಿದ್ದು ಅವಳಿ ಮಕ್ಕಳಾದ ಆಕಾಶ್ ಮತ್ತು ಇಶಾ ಅವರಿಗೆ ದೂರಸಂಪರ್ಕ ಮತ್ತು ರಿಟೇಲ್​ ನಾಯಕತ್ವ ಮತ್ತು ಕಿರಿಯ ಪುತ್ರ ಅನಂತ್‌ಗೆ ನೂತನ ಇಂಧನ ಘಟಕದ ನಾಯಕತ್ವವನ್ನು ನೀಡಿರುವುದಾಗಿ ಘೋಷಿಸಿದರು. ಅಧಿಕಾರ ಹಸ್ತಾಂತರಿಸಿದರೂ ತಾವಿನ್ನೂ ನಿವೃತ್ತಿಯಾಗುತ್ತಿಲ್ಲ ಮತ್ತು ಹಿಂದಿನಂತೆ ನಾಯಕತ್ವ ಪಾಲುದಾರಿಕೆ ಮುಂದುವರಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ 45ನೇ ವಾರ್ಷಿಕ ಷೇರುದಾರರ ಸಭೆಯಲ್ಲಿ ಅಂಬಾನಿ ತಮ್ಮ ಮಗಳು ಇಶಾ ಅವರನ್ನು ರಿಟೇಲ್​ ವ್ಯಾಪಾರದ ನಾಯಕಿ ಎಂದು ಪರಿಚಯಿಸಿದರು. ಇ-ಕಾಮರ್ಸ್ ಘಟಕವನ್ನು ವಾಟ್ಸ್ಯಾಪ್​ನೊಂದಿಗೆ ಏಕೀಕರಿಸುವ ಕುರಿತು ಪ್ರಸ್ತುತಿಯನ್ನು ನೀಡಲು ಮಗಳನ್ನು ಅವರು ವೇದಿಕೆಗೆ ಆಹ್ವಾನಿಸಿದರು. ನಂತರ, 26 ವರ್ಷದ ಅನಂತ್ ಸೋಲಾರ್, ಬ್ಯಾಟರಿ ಮತ್ತು ಹೈಡ್ರೋಜನ್ ಹೂಡಿಕೆಗಳನ್ನು ವ್ಯಾಪಿಸಿರುವ ನೂತನ ಇಂಧನ ವ್ಯವಹಾರವನ್ನು ನೋಡಿಕೊಳ್ಳಲಿದ್ದಾರೆ ಎಂದು ಹೇಳಿದರು. ಇಶಾ ಪಿರಮಲ್ ಗ್ರೂಪ್‌ನ ಅಜಯ್ ಮತ್ತು ಸ್ವಾತಿ ಪಿರಮಾಲ್ ಅವರ ಮಗ ಆನಂದ್ ಪಿರಮಲ್ ಅವರನ್ನು ವಿವಾಹವಾಗಿದ್ದಾರೆ.

ಇಶಾ ಪ್ರಾರಂಭದಿಂದಲೂ ನಮ್ಮ ಗ್ರಾಹಕ ವ್ಯವಹಾರಗಳಲ್ಲಿ ಉತ್ಸಾಹದಿಂದ ತೊಡಗಿಸಿಕೊಂಡಿದ್ದಾರೆ. ಅನಂತ್ ಕೂಡ ನಮ್ಮ ಹೊಸ ಎನರ್ಜಿ ವ್ಯಾಪಾರಕ್ಕೆ ಬಹಳ ಉತ್ಸಾಹದಿಂದ ಸೇರಿಕೊಂಡಿದ್ದಾರೆ. ವಾಸ್ತವವಾಗಿ, ಅವರು ಜಾಮ್‌ನಗರದಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ ಎಂದು ಅಂಬಾನಿ ಹೇಳಿದರು.

ಇದುವರೆಗೆ ಆಕಾಶ್ ಅವರನ್ನು ಮಾತ್ರ ಕಂಪನಿಯ ಕಾರ್ಯಕಾರಿ ಮುಖ್ಯಸ್ಥರನ್ನಾಗಿ ಮಾಡಲಾಗಿದ್ದು, ಉಳಿದ ಇಬ್ಬರು ಮಂಡಳಿಯಲ್ಲಿದ್ದರು. ಮೂವರೂ ನಮ್ಮ ಸಂಸ್ಥಾಪಕರಾದ ಧೀರೂಭಾಯಿ ಮನಸ್ಥಿತಿಯನ್ನು ಸಂಪೂರ್ಣವಾಗಿ ಆನುವಂಶಿಕವಾಗಿ ಪಡೆದಿದ್ದಾರೆ. ಅವರು ಈಗಾಗಲೇ ರಿಲಯನ್ಸ್‌ನಲ್ಲಿ ಅದ್ಭುತವಾಗಿ ಕೆಲಸಗಳನ್ನು ಮಾಡುತ್ತಿರುವ ಯುವ ನಾಯಕರು ಮತ್ತು ವೃತ್ತಿಪರರ ತಂಡದಲ್ಲಿ ಸಮಾನರಲ್ಲಿ ಮೊದಲಿಗರಾಗಿದ್ದಾರೆ. ಅವರೆಲ್ಲರಿಗೂ ದೈನಂದಿನ ಆಧಾರದ ಮೇಲೆ ನಾನು ಮತ್ತು ನಮ್ಮ ಆಡಳಿತ ಮಂಡಳಿ ಸೇರಿದಂತೆ ಹಿರಿಯ ನಾಯಕರು ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಮುಖೇಶ್ ತಿಳಿಸಿದರು.

ಜೂನ್‌ನಲ್ಲಿ, 30 ವರ್ಷದ ಆಕಾಶ್ ಅವರನ್ನು ಜಿಯೋ ಪ್ಲಾಟ್‌ಫಾರ್ಮ್‌ಗಳ ಅಂಗಸಂಸ್ಥೆಯಾದ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್‌ನ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಜಿಯೋ ಇನ್ಫೋಕಾಮ್ ಟೆಲಿಕಾಂ ಪರವಾನಗಿಗಳನ್ನು ಹೊಂದಿರುವ ಸಂಸ್ಥೆಯಾಗಿದ್ದು, ಮುಖೇಶ್ ಅಂಬಾನಿ ಜಿಯೋ ಪ್ಲಾಟ್‌ಫಾರ್ಮ್‌ಗಳ ಅಧ್ಯಕ್ಷರಾಗಿ ಈಗಲೂ ಮುಂದುವರೆದಿದ್ದಾರೆ. ಜಾಗತಿಕ ತಂತ್ರಜ್ಞಾನ ದೈತ್ಯರಾದ ಗೂಗಲ್ ಮತ್ತು ಫೇಸ್‌ಬುಕ್ ಮಾಲೀಕ ಮೆಟಾ ಇದಕ್ಕೆ ಹೂಡಿಕೆ ಮಾಡಿದ್ದಾರೆ.

ಗ್ರಾಹಕ ಎಲೆಕ್ಟ್ರಾನಿಕ್ಸ್, ಆಹಾರ ಮತ್ತು ದಿನಸಿ, ಫ್ಯಾಷನ್, ಆಭರಣಗಳು, ಪಾದರಕ್ಷೆಗಳು ಮತ್ತು ಬಟ್ಟೆಗಳನ್ನು ಒದಗಿಸುವ ಸೂಪರ್ಮಾರ್ಕೆಟ್​ಗಳನ್ನು ನಿರ್ವಹಿಸುವ ಕಂಪನಿಯಾದ RRVL ನ ಮಂಡಳಿಗಳಲ್ಲಿ ಜೊತೆಗೆ ಆನ್‌ಲೈನ್ ರಿಟೇಲ್ ಉದ್ಯಮ JioMart ಮತ್ತು ಅಕ್ಟೋಬರ್ 2014 ರಿಂದ ಡಿಜಿಟಲ್ ಆರ್ಮ್ Jio ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ (JPL)ನಲ್ಲಿ ಆಕಾಶ್ ಮತ್ತು ಇಶಾ ಸಕ್ರಿಯರಾಗಿದ್ದಾರೆ.

ಅನಂತ್ ಇತ್ತೀಚೆಗೆ RRVL ನಲ್ಲಿ ನಿರ್ದೇಶಕರಾಗಿ ಸೇರ್ಪಡೆಗೊಂಡಿದ್ದಾರೆ. ಅವರು ಮೇ 2020 ರಿಂದ JPL ನಲ್ಲಿ ನಿರ್ದೇಶಕರಾಗಿದ್ದಾರೆ. ಆಕಾಶ್ ಮತ್ತು ಇಶಾ ಇಬ್ಬರೂ ಗ್ರೂಪ್‌ನ ಹೊಸ ಯುಗದ ರಿಟೇಲ್​ ಮತ್ತು ಟೆಲಿಕಾಂ ವ್ಯವಹಾರಗಳಲ್ಲಿ ಸಕ್ರಿಯರಾಗಿದ್ದರೆ, ಅನಂತ್ ನಿರ್ದೇಶಕರಾಗಿ ರಿಲಯನ್ಸ್‌ನ ನವೀಕರಿಸಬಹುದಾದ ಶಕ್ತಿಯ ಘಟಕವನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಅಂಬಾನಿ ಮಾಹಿತಿ ನೀಡಿದರು.

ಇದನ್ನೂ ಓದಿ : ಗ್ರಾಹಕರಿಗೆ ಭರ್ಜರಿ ಗಿಫ್ಟ್​ ನೀಡಿದ ಅಂಬಾನಿ: ದೀಪಾವಳಿಗೆ ಸಿಗಲಿದೆ ಕೈಗೆಟಕುವ ದರದಲ್ಲಿ 5G ಸೇವೆ

Last Updated : Aug 29, 2022, 6:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.