ಮಹಾರಾಷ್ಟ್ರ : ಆರೋಪಿ ಸಚಿನ್ ವಾಜೆ ಮುಂಬೈನ ಮಿಥಿ ನದಿಗೆ ಎಸೆದಿದ್ದ ಸಾಕ್ಷ್ಯಗಳನ್ನು ಎನ್ಐಎ ಅಧಿಕಾರಿಗಳು ಭಾನುವಾರ ಹುಡುಕಿಸಿದ್ದು, ಅವುಗಳನ್ನು ವಶಕ್ಕೆ ಪಡೆದಿದ್ದಾರೆ.
ಅಂಬಾನಿ ಮನೆ ಸಮೀಪ ಸ್ಫೋಟಕವಿದ್ದ ಕಾರು ಪತ್ತೆಯಾದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಅಮಾನಾತಾದ ಪೊಲೀಸ್ ಅಧಿಕಾರಿ ಸಚಿನ್ ವಾಜೆ, ತನಿಖೆ ವೇಳೆ ಸಾಕ್ಷ್ಯಗಳನ್ನು ಮಿಥಿ ನದಿಗೆ ಎಸೆದಿದ್ದಾಗಿ ಒಪ್ಪಿಕೊಂಡಿದ್ದ.
ಓದಿ:ನಿವೃತ್ತ ಹೈಕೋರ್ಟ್ ನ್ಯಾಯಾಧೀಶರಿಂದ ಅನಿಲ್ ದೇಶ್ಮುಖ್ ವಿರುದ್ಧದ ಆರೋಪಗಳ ತನಿಖೆ : ಸಿಎಂ ಠಾಕ್ರೆ ನಿರ್ಧಾರ
ಆತನ ಹೇಳಿಕೆ ಆಧಾರದ ಮೇಲೆ ಡೈವರ್‌ಗಳ ಸಹಾಯದಿಂದ ಇಂದು ಶೋಧ ನಡೆಸಿ, ಕಂಪ್ಯೂಟರ್ ಸಿಪಿಯುಗಳು, ಒಂದೇ ನೋಂದಣಿ ಸಂಖ್ಯೆ ಹೊಂದಿರುವ ಎರಡು ನಂಬರ್ ಪ್ಲೇಟ್‌ಗಳು, ಲ್ಯಾಪ್‌ಟಾಪ್ ಮತ್ತು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನ ಮಿಥಿ ನದಿಯಿಂದ ಇತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಶೋಧದ ವೇಳೆ ಆರೋಪಿ ಸಚಿನ್ ವಾಜೆ ಕೂಡ ಸ್ಥಳದಲ್ಲಿ ಹಾಜರಿದ್ದ.