ಶ್ರೀನಗರ: ಕಳೆದ 36 ಗಂಟೆಗಳಲ್ಲಿ ಅಮರನಾಥ ಯಾತ್ರೆ ವೇಳೆ ಎಂಟು ಯಾತ್ರಾರ್ಥಿಗಳು ನೈಸರ್ಗಿಕ ವಿಕೋಪದಿಂದ ಸಾವನ್ನಪ್ಪಿದ್ದಾರೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 41 ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜಸ್ಥಾನದ ಮೊಂಗಿಲಾಲ್ (52), ಗುಜರಾತ್‌ನ ವ್ರಿಯಾಗ್ ಲಾಲ್ ಹೀರಾ ಚಂದ್ ವ್ಯಾಸ್ (57), ಕರ್ನಾಟಕದ ಬಸವರಾಜ (68), ಸಿಂಗಾಪುರದ ಪೂನಿಯಾಮೂರ್ತಿ (63), ಮಹಾರಾಷ್ಟ್ರದ ಕಿರಣ್ ಚತುರ್ವೇದಿ, ಆಂಧ್ರಪ್ರದೇಶದ ಕಲವಲ ಸುಬ್ರಮಣ್ಯಂ (63), ಉತ್ತರ ಪ್ರದೇಶದ ಗೋವಿಂದ್ ಶರಣ್ (34) ಮತ್ತು ಹರಿಯಾಣದ ಸತ್ವೀರ್ ಸಿಂಗ್ (70) ಮೃತ ಯಾತ್ರಿಕರು.
ಕಳೆದ ವಾರ ದಕ್ಷಿಣ ಕಾಶ್ಮೀರ ಹಿಮಾಲಯದ ಗುಹೆ ದೇಗುಲದ ಬಳಿ ಮೇಘಸ್ಫೋಟದಿಂದ ಉಂಟಾದ ಹಠಾತ್ ಪ್ರವಾಹದಲ್ಲಿ ಒಟ್ಟು 15 ಮಂದಿ ಯಾತ್ರಿಕರು ಸಾವನ್ನಪ್ಪಿದ್ದರು. ವಾರ್ಷಿಕ ಅಮರನಾಥ ಯಾತ್ರೆಯು ಜೂನ್ 30 ರಿಂದ ಪ್ರಾರಂಭವಾಗಿದೆ. ಆದರೆ, ಜುಲೈ 8 ರಂದು ಭಾರಿ ಮಳೆಯಿಂದಾಗಿ ಹಠಾತ್ ಪ್ರವಾಹ ಉಂಟಾದ ಕಾರಣ ಸ್ಥಗಿತಗೊಳಿಸಲಾಗಿತ್ತು. ನಂತರ ಜುಲೈ 11 ರಿಂದ ಪುನಾರಂಭವಾಗಿದೆ.
ಇದನ್ನೂ ಓದಿ: 4 ದಿನದ ಬಳಿಕ ಬಾಲ್ಟಾಲ್ ಕ್ಯಾಂಪ್ನಿಂದ ಅಮರನಾಥ ಯಾತ್ರೆ ಪುನಾರಂಭ