ETV Bharat / bharat

ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ವಿಲೀನಗೊಳ್ಳಲಿದೆ ಅಮರ್ ಜವಾನ್ ಜ್ಯೋತಿ - ರಾಷ್ಟ್ರೀಯ ಯುದ್ಧ ಸ್ಮಾರಕ

ಅಮರ್ ಜವಾನ್ ಜ್ಯೋತಿಯನ್ನು 1971ರ ಇಂಡೋ-ಪಾಕ್ ಯುದ್ಧದಲ್ಲಿ ಹುತಾತ್ಮರಾದ ಸೈನಿಕರ ಸ್ಮರಣಾರ್ಥ ಇಂಡಿಯಾ ಗೇಟ್ ಕಮಾನಿನಲ್ಲಿ 1972 ರಲ್ಲಿ ನಿರ್ಮಿಸಲಾಗಿತ್ತು. ಇದು ಈಗ ಯುದ್ಧ ಸ್ಮಾರಕದ ಶಾಶ್ವತ ಜ್ವಾಲೆಯೊಂದಿಗೆ ವಿಲೀನಗೊಳ್ಳಲಿದೆ.

Amar Jawan Jyoti
ಅಮರ್ ಜವಾನ್ ಜ್ಯೋತಿ ಸ್ಮಾರಕ
author img

By

Published : Jan 21, 2022, 10:02 AM IST

Updated : Jan 21, 2022, 12:22 PM IST

ನವದೆಹಲಿ: 50 ವರ್ಷಗಳ ಬಳಿಕ ಇಂಡಿಯಾ ಗೇಟ್‌ನಲ್ಲಿರುವ ಅಮರ್ ಜವಾನ್ ಜ್ಯೋತಿ ಜ್ವಾಲೆಯನ್ನು ಇಂದು ನಂದಿಸಲಾಗುತ್ತದೆ. ಗಣರಾಜ್ಯೋತ್ಸವದ ಮುನ್ನಾದಿನದಂದು ಪಕ್ಕದ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಜ್ವಾಲೆಯೊಂದಿಗೆ ಇದು ವಿಲೀನಗೊಳ್ಳಲಿದೆ.

ಸಮಾರಂಭದಲ್ಲಿ ಸಂಯೋಜಿತ ರಕ್ಷಣಾ (Integrated Defence Staff) ಮುಖ್ಯಸ್ಥ ಏರ್ ಮಾರ್ಷಲ್ ಬಲಭದ್ರ ರಾಧಾ ಕೃಷ್ಣ ಅವರು ಎರಡು ಜ್ವಾಲೆಗಳನ್ನು ವಿಲೀನಗೊಳಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹುತಾತ್ಮರಾದ ಸೈನಿಕರ ಸ್ಮರಣಾರ್ಥ ನಿರ್ಮಾಣ: ಇಂಡಿಯಾ ಗೇಟ್ ಸ್ಮಾರಕವನ್ನು ಬ್ರಿಟಿಷ್ ಸರ್ಕಾರ 1914-1921ರ ನಡುವೆ ಹುತಾತ್ಮರಾದ ಬ್ರಿಟಿಷ್ ಭಾರತೀಯ ಸೈನಿಕರ ನೆನಪಿಗಾಗಿ ನಿರ್ಮಿಸಿತ್ತು. ಅಮರ್ ಜವಾನ್ ಜ್ಯೋತಿ ಎಂದು ಕರೆಯಲ್ಪಡುವ ಶಾಶ್ವತ ಜ್ವಾಲೆಯನ್ನು 1971ರ ಇಂಡೋ - ಪಾಕ್ ಯುದ್ಧದಲ್ಲಿ ಹುತಾತ್ಮರಾದ ಸೈನಿಕರ ಸ್ಮರಣಾರ್ಥ ಇಂಡಿಯಾ ಗೇಟ್ ಕಮಾನಿನ ಕೆಳಗೆ 1972 ರಲ್ಲಿ ನಿರ್ಮಿಸಲಾಗಿತ್ತು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

2 ವರ್ಷಗಳ ಹಿಂದೆ ರಾಷ್ಟ್ರೀಯ ಯುದ್ಧ ಸ್ಮಾರಕ ಅಸ್ತಿತ್ವಕ್ಕೆ ಬಂದ ನಂತರ ಅಮರ್ ಜವಾನ್ ಜ್ಯೋತಿಯ ಅಸ್ತಿತ್ವವನ್ನು ಪ್ರಶ್ನಿಸಲಾಯಿತು. ಈ ಹಿಂದೆ, ಅಮರ್ ಜವಾನ್ ಜ್ಯೋತಿ ದೇಶದ ಇತಿಹಾಸದ ಅವಿಭಾಜ್ಯ ಭಾಗವಾಗಿರುವುದರಿಂದ ಅಮರ್ ಜವಾನ್ ಜ್ಯೋತಿ ಮುಂದುವರಿಯುತ್ತದೆ ಎಂದು ಭಾರತೀಯ ಸೇನೆ ಹೇಳಿಕೆ ನೀಡಿತ್ತು.

ಆದರೆ, ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಹೊಸ ಶಾಶ್ವತ ಜ್ವಾಲೆ ಮತ್ತು ಸ್ಮಾರಕದಲ್ಲಿ ಎಲ್ಲ ಗೊತ್ತುಪಡಿಸಿದ ದಿನಗಳಲ್ಲಿ ಪುಷ್ಪಾರ್ಚನೆ ಸಮಾರಂಭವನ್ನು ನಡೆಸುವುದರೊಂದಿಗೆ, ಸೇನಾ ಪಡೆ ಈಗ ಅಮರ್ ಜವಾನ್ ಜ್ಯೋತಿಯನ್ನು ಇದರೊಂದಿಗೆ ವಿಲೀನಗೊಳಿಸುತ್ತಿದೆ. ಸ್ವಾತಂತ್ರ್ಯಾ ನಂತರ ದೇಶವನ್ನು ರಕ್ಷಿಸಲು ತಮ್ಮ ಪ್ರಾಣವನ್ನು ಅರ್ಪಿಸಿದ ಎಲ್ಲ ವೀರರ ನೆನಪಿಗಾಗಿ ಈ ಸ್ಮಾರಕವನ್ನು ನಿರ್ಮಿಸಲಾಗಿದೆ.

ಹುತಾತ್ಮರಾದ ಸೈನಿಕರಿಗೆ ಸಮರ್ಪಣೆ: ಇಂಡಿಯಾ ಗೇಟ್ ಸಂಕೀರ್ಣದಲ್ಲಿ 40 ಎಕರೆ ಪ್ರದೇಶದಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು 1962 ರಲ್ಲಿ ಇಂಡೋ - ಚೀನಾ ಯುದ್ಧ, 1947, 1965 ಮತ್ತು 1971 ರಲ್ಲಿ ಇಂಡೋ-ಪಾಕ್ ಯುದ್ಧಗಳು, ಶ್ರೀಲಂಕಾ ಮತ್ತು ಭಾರತೀಯ ಶಾಂತಿ ಪಾಲನಾ ಪಡೆ ಕಾರ್ಯಾಚರಣೆ ಹಾಗೂ 1999ರ ಕಾರ್ಗಿಲ್ ಕದನದಲ್ಲಿ ಹುತಾತ್ಮರಾದ ಸೈನಿಕರಿಗೆ ಸಮರ್ಪಿಸಲಾಗಿದೆ.

ಇದನ್ನೂ ಓದಿ: ನೂತನ ಪಾರ್ಲಿಮೆಂಟ್ ಕಟ್ಟಡ ಕಾಮಗಾರಿ ವೆಚ್ಚ ₹200 ಕೋಟಿ ಹೆಚ್ಚಳ

Last Updated : Jan 21, 2022, 12:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.