ETV Bharat / bharat

‘ಅಮೆರಿಕದಲ್ಲಿ 16 ರ ಬಾಲಕಿಗೆ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಅನುಮತಿ ಕೊಡಿ’: ಕೋರ್ಟ್ ಮೊರೆ ಹೋದ ದಂಪತಿ - ಎಸ್​.ಎಸ್.ಶಿಂಧೆ ಹಾಗೂ ಅಭಯ್ ಅಹುಜಾ

ಭಾರತದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರಿಗಾಗಿ ಮಾತ್ರ ವ್ಯಾಕ್ಸಿನೇಷನ್​ ಹಾಕಲಾಗುತ್ತಿದೆ. ಹಾಗಾಗಿ ನಮ್ಮ ಮಗಳನ್ನು ಅಮೆರಿಕಾಗೆ ಕರೆದುಕೊಂಡು ಹೋಗಲು ಅನುಮತಿ ಕೊಡಿ ಎಂದು ದಂಪತಿ ಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು.

ಕೋರ್ಟ್ ಮೊರೆ ಹೋದ ದಂಪತಿ
ಕೋರ್ಟ್ ಮೊರೆ ಹೋದ ದಂಪತಿ
author img

By

Published : Jun 1, 2021, 10:49 PM IST

Updated : Jun 1, 2021, 10:58 PM IST

ಮುಂಬೈ: ಕೊರೊನಾ ವ್ಯಾಕ್ಸಿನ್​ಗಾಗಿ 16 ವರ್ಷದ ಬಾಲಕಿಯನ್ನು ಯುಎಸ್​ಗೆ ಪ್ರಯಾಣಿಸಲು ಅನುಮತಿ ಕೊಡುವಂತೆ ಕೋರಿ ದಂಪತಿ ಬಾಂಬೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಒಂದು ವಾರದೊಳಗೆ ತೀರ್ಮಾನ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಕೋರ್ಟ್ ಸೂಚಿಸಿದೆ.

ಭಾರತದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರಿಗಾಗಿ ಮಾತ್ರ ವ್ಯಾಕ್ಸಿನೇಷನ್​ ಹಾಕಲಾಗುತ್ತಿದೆ. ಹಾಗಾಗಿ ನಮ್ಮ ಮಗಳನ್ನು ಅಮೆರಿಕಾಗೆ ಕರೆದುಕೊಂಡು ಹೋಗಲು ಅನುಮತಿ ಕೊಡಿ ಎಂದು ದಂಪತಿ ಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್​.ಎಸ್.ಶಿಂಧೆ ಹಾಗೂ ಅಭಯ್ ಅಹುಜಾ ಅವರಿದ್ದ ನ್ಯಾಯಪೀಠ ಒಂದು ವಾರದೊಳಗೆ ಉತ್ತರ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.

ದಕ್ಷಿಣ ಮುಂಬೈ ನಿವಾಸಿಗಳಾದ ಬಿಜಾಲ್ ಠಕ್ಕರ್ ದಂಪತಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಪೀಠ ವಿಚಾರಣೆ ನಡೆಸಿತು. ವಕೀಲ ಮಿಲಿಂದ್ ಸಾಥೆ ಅವರು ಸಲ್ಲಿಸಿದ್ದ ಅರ್ಜಿಯ ಪ್ರಕಾರ, ದಂಪತಿಯ ಮಗಳು ಅನಿವಾಸಿ ಭಾರತೀಯಳು (ಎನ್‌ಆರ್‌ಐ). ಅವಳು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಪೌರತ್ವ ಹೊಂದಿದ್ದು, ವ್ಯಾಕ್ಸಿನೇಷನ್ ಪಡೆಯಲು ಅರ್ಹಳಾಗಿದ್ದಾಳೆ.

ನ್ಯಾಯಮೂರ್ತಿ ಎಸ್.ಎಸ್.ಶಿಂಧೆ ಮತ್ತು ನ್ಯಾಯಮೂರ್ತಿ ಅಭಯ್ ಅಹುಜಾ ಅವರು ಒಂದು ವಾರದೊಳಗೆ ಉತ್ತರ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದ್ದಾರೆ. 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಅಮೆರಿಕದಲ್ಲಿ ಲಸಿಕೆ ನೀಡಲಾಗುತ್ತಿದೆ. ಕೊರೊನಾ ಹಿನ್ನೆಲೆ ಭಾರತೀಯರಿಗೆ ಅಮೆರಿಕ ಪ್ರಯಾಣವನ್ನು ನಿರ್ಬಂಧಿಸಲಾಗಿದೆ. ಹುಡುಗಿಯ ಚಿಕ್ಕಮ್ಮ ಪೂರ್ವಿ ಪರೇಖ್ ಕೂಡ ಅರ್ಜಿಯಲ್ಲಿ ಸಹ-ಅರ್ಜಿದಾರರಾಗಿದ್ದಾರೆ. ಅವರು ಯುಎಸ್​​ನಲ್ಲಿ ಹುಡುಗಿಯ ಕಾನೂನು ಪಾಲಕರಾಗಲಿದ್ದಾರೆ.

ಈ ವಿಷಯದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಆದ್ದರಿಂದ, ಅರ್ಜಿದಾರರು ಈ ಅರ್ಜಿಯಲ್ಲಿ ಕೇಂದ್ರ ಸರ್ಕಾರ ಮತ್ತು ಯುಎಸ್ ರಾಯಭಾರ ಕಚೇರಿಯನ್ನು ಪ್ರತಿವಾದಿಗಳನ್ನಾಗಿ ಮಾಡಬೇಕು ಎಂದು ರಾಜ್ಯದ ಪರವಾಗಿ ವಕೀಲೆ ಪೌರ್ನಿಮಾ ಕಾಂತರಿಯಾ ನ್ಯಾಯಪೀಠಕ್ಕೆ ತಿಳಿಸಿದರು.

ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿವಾದಿಯನ್ನಾಗಿ ಮಾಡಬಹುದು ಎಂದು ಅರ್ಜಿದಾರರು ವಾದಿಸಿದರು, ಆದರೆ, ನಿಯಮಗಳ ಪ್ರಕಾರ, ಯುಎಸ್ ರಾಯಭಾರ ಕಚೇರಿಯನ್ನು ಈ ಅರ್ಜಿಯಲ್ಲಿ ಪ್ರತಿವಾದಿಯನ್ನಾಗಿ ಮಾಡಲು ಸಾಧ್ಯವಿಲ್ಲ.

Last Updated : Jun 1, 2021, 10:58 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.