ETV Bharat / bharat

ತಿಪ್ರಾ ಮೋಥಾ ಪಕ್ಷದೊಂದಿಗೆ ಮೈತ್ರಿ ಮಾತುಕತೆ: ತ್ರಿಪುರಾಗೆ ಆಗಮಿಸಿದ ಕಾಂಗ್ರೆಸ್ ನಾಯಕರು

ತ್ರಿಪುರಾ ಚುನಾವಣಾ ಫಲಿತಾಂಶಗಳು ಪ್ರಕಟವಾಗುತ್ತಿವೆ. ಪ್ರದ್ಯೋತ್ ಮಾಣಿಕ್ಯ ದೆಬ್ಬರ್ಮಾ ಅವರ ತಿಪ್ರಾ ಮೋಥಾ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಪ್ರಯತ್ನ ಪಡುತ್ತಿದ್ದು, ಇದಕ್ಕಾಗಿ ಉನ್ನತ ಮಟ್ಟದ ಕಾಂಗ್ರೆಸ್ ನಾಯಕರು ಈಗಾಗಲೇ ತ್ರಿಪುರಾ ತಲುಪಿದ್ದಾರೆ.

Can Congress strike gold in Tripura courtesy TIPRA Motha

author img

By

Published : Mar 2, 2023, 1:29 PM IST

ಪ್ರದ್ಯೋತ್ ಮಾಣಿಕ್ಯ ದೆಬ್ಬರ್ಮಾ ಅವರ ತಿಪ್ರಾಹ ಸ್ಥಳೀಯ ಪ್ರಗತಿಪರ ಪ್ರಾದೇಶಿಕ ಒಕ್ಕೂಟ (Tipraha Indigenous Progressive Regional Alliance) ಪಕ್ಷದೊಂದಿಗೆ ಮೈತ್ರಿ ಒಪ್ಪಂದ ಮಾಡಿಕೊಳ್ಳಲು ಕಾಂಗ್ರೆಸ್ ನಾಯಕರ ಈಗಾಗಲೇ ತ್ರಿಪುರಾಕ್ಕೆ ಆಗಮಿಸಿದ್ದಾರೆ. ತಿಪ್ರಾಹ ಸ್ಥಳೀಯ ಪ್ರಗತಿಪರ ಪ್ರಾದೇಶಿಕ ಒಕ್ಕೂಟ ಇದನ್ನು ತಿಪ್ರಾ ಮೋಥಾ ಪಾರ್ಟಿ ಎಂದೂ ಕರೆಯಲಾಗುತ್ತದೆ. ಸದ್ಯದ ಚುನಾವಣಾ ಮತ ಎಣಿಕೆ ಟ್ರೆಂಡ್​ಗಳನ್ನು ನೋಡಿದರೆ ತ್ರಿಪುರಾದ ಕೊನೆಯ ಮಹಾರಾಜನಾಗಿದ್ದ ಪ್ರದ್ಯೋತ್ ಅವರ ಪಕ್ಷವು ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಗಳು ಗೋಚರಿಸಿವೆ. ಪ್ರದ್ಯೋತ್ ಇವರು ಮಾಜಿ ಪತ್ರಕರ್ತರೂ ಹೌದು. ಅಲ್ಲದೇ ಇವರು ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದರು.

ತಿಪ್ರಾ ಮೋಥಾ ನಾಯಕತ್ವದೊಂದಿಗೆ ಸಮ್ಮಿಶ್ರ ಸರ್ಕಾರ ರಚನೆಗೆ ಒಪ್ಪಂದ ಮಾಡಿಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾದರೆ ತ್ರಿಪುರಾದಲ್ಲಿ ಬಿಜೆಪಿಗೆ ಸರ್ಕಾರ ರಚಿಸುವುದು ಕಷ್ಟವಾಗಲಿದೆ. ಟಿಪ್ರಾದ ನಾಯಕ ಪ್ರದ್ಯೋತ್ ಕಾಂಗ್ರೆಸ್‌ನ ಜಿತೇಂದ್ರ ಸಿಂಗ್ ಅವರೊಂದಿಗೆ ನಿಕಟ ಸ್ನೇಹ ಹೊಂದಿದ್ದಾರೆ. ಹೀಗಾಗಿ ಜಿತೇಂದ್ರ ಸಿಂಗ್ ಪ್ರದ್ಯೋತ್ ಅವರೊಂದಿಗೆ ಸಂಪರ್ಕ ಸಾಧಿಸಿದ್ದಾರೆ ಎನ್ನಲಾಗಿದೆ. ಉನ್ನತ ಮೂಲಗಳ ಪ್ರಕಾರ, ಕಾಂಗ್ರೆಸ್ ನಾಯಕರು ತ್ರಿಪುರಾದಲ್ಲಿದ್ದಾರೆ ಮತ್ತು ಅವರ ಮತ್ತು ಪ್ರದ್ಯೋತ್ ನಡುವಿನ ಸಭೆ ಶೀಘ್ರದಲ್ಲೇ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.

ತಿಪ್ರಾ ಮೋಥಾ ಜೊತೆ ಮಾತುಕತೆ ಮುಂದುವರೆಸಲು ಜಿತೇಂದ್ರ ಅವರ ಜೊತೆಗೆ ಮತ್ತೊಬ್ಬ ಹಿರಿಯ ಕಾಂಗ್ರೆಸ್ ನಾಯಕ ಮುಕುಲ್ ವಾಸ್ನಿಕ್ ಕೂಡ ಇದ್ದಾರೆ. ತ್ರಿಪುರಾದ ರೆಸಾರ್ಟ್‌ನಲ್ಲಿ ವಾಸ್ನಿಕ್ ಮತ್ತು ಜಿತೇಂದ್ರ ಸಿಂಗ್ ಪ್ರದ್ಯೋತ್ ಅವರನ್ನು ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜ್ಯೋತಿರಾದಿತ್ಯ ಸಿಂಧಿಯಾ ಅವರ ಸೋದರಸಂಬಂಧಿಯಾಗಿರುವ ಪ್ರದ್ಯೋತ್ ಅವರೊಂದಿಗೆ ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಈ ಪ್ರಯತ್ನ ಸಫಲವಾದರೆ ಬಿಜೆಪಿ ಮತ್ತು ಟಿಪ್ರಾ ನಡುವೆ ಮೈತ್ರಿ ಮಾತುಕತೆಗಳು ನಡೆಯಬಹುದು.

ಹಿಂದೆ ಕಾಂಗ್ರೆಸ್​ನಲ್ಲಿದ್ದ ಪ್ರದ್ಯೋತ್, ರಾಹುಲ್ ಗಾಂಧಿ ಅವರೊಂದಿಗೂ ಉತ್ತಮ ಸಂಬಂಧ ಹೊಂದಿದ್ದಾರೆ. ಹೀಗಾಗಿ ಅವರು ಕಾಂಗ್ರೆಸ್​ ಜೊತೆ ಮುನ್ನಡೆಯುವ ಸಾಧ್ಯತೆಗಳೇ ಜಾಸ್ತಿ ಎನ್ನಲಾಗಿದೆ. ತಿಪ್ರಾ ಮೋಥಾದ ಗ್ರೇಟರ್ ಟ್ರೈಬಲ್ ಲ್ಯಾಂಡ್​ ರಚನೆಯ ಬೇಡಿಕೆಯನ್ನು ಬಿಜೆಪಿ ಈ ಹಿಂದೆಯೇ ತಳ್ಳಿಹಾಕಿದೆ. ಹೀಗಾಗಿ ಇವರಿಬ್ಬರ ಮಧ್ಯೆ ಮೈತ್ರಿ ಮಾತುಕತೆ ಬಹುತೇಕ ಸಾಧ್ಯವಿಲ್ಲ ಎನ್ನಲಾಗಿದೆ. ಈ ಮಧ್ಯೆ ತ್ರಿಪುರಾದಲ್ಲಿ ಸರ್ಕಾರ ರಚಿಸಲು ತಿಪ್ರಾ ಮೋಥಾ ಅಗತ್ಯವಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ. ನಾವು ನಮ್ಮ ಬೇಡಿಕೆಗಳನ್ನು ಪೂರೈಸುವವರೊಂದಿಗೆ ಮಾತ್ರ ಸಹಕರಿಸುತ್ತೇವೆ ಮತ್ತು ತ್ರಿಪುರಾದ ಬುಡಕಟ್ಟು ಜನರ ಹಕ್ಕುಗಳಿಗಾಗಿ ನಾವು ಹೋರಾಡುತ್ತೇವೆ ಎಂದು ತಿಪ್ರಾ ಮೋಥಾದ ವಕ್ತಾರ ಜಿತೇನ್ ದೆಬ್ಬುರ್ಮಾ ಸುದ್ದಿ ವಾಹಿನಿಯೊಂದಿಗೆ ಮಾತನಾಡುತ್ತಾ ಹೇಳಿದರು.

ಫಲಿತಾಂಶದ ನಂತರ ತಮ್ಮ ಶಾಸಕರನ್ನು ಶಿಲ್ಲಾಂಗ್‌ಗೆ ಕರೆದೊಯ್ಯಲಾಗುತ್ತದೆ ಎಂಬ ವರದಿಗಳನ್ನು ಜಿತೇನ್ ದೆಬ್ಬುರ್ಮಾ ತಳ್ಳಿಹಾಕಿದರು. ರಾಜ್ಯದ ಸ್ಥಳೀಯ ಜನರ ಬೇಡಿಕೆಗಳು ಮತ್ತು ಹಕ್ಕುಗಳನ್ನು ಬೆಂಬಲಿಸದವರೊಂದಿಗೆ ಕೆಲಸ ಮಾಡುವುದಕ್ಕಿಂತ ನಾವು ವಿರೋಧ ಪಕ್ಷವಾಗಿ ಕೆಲಸ ಮಾಡಲು ಇಷ್ಟಪಡುತ್ತೇವೆ ಎಂದು ಅವರು ಹೇಳಿದರು. ಬಿಜೆಪಿ ಏಕ ಬಹುಮತದ ಪಕ್ಷವಾಗಿ ಹೊರಹೊಮ್ಮಿದರೆ, ತಿಪ್ರಾ ಮೋಥಾ ಅದನ್ನು ತ್ರಿಪುರಾದ ಜನರ ತೀರ್ಪು ಎಂದು ಒಪ್ಪಿಕೊಳ್ಳುತ್ತದೆ ಎಂದು ಜಿತೇನ್ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಿಪ್ರಾ ಮೋಥಾ ಜೊತೆ ಒಪ್ಪಂದ ಮಾಡಿಕೊಳ್ಳಲು ಸದ್ಯ ಕಾಂಗ್ರೆಸ್‌ಗೆ ಉತ್ತಮ ಅವಕಾಶವಿದೆ. ತ್ರಿಪುರಾದಲ್ಲಿ ಸಿಪಿಐನ ಮುಖ್ಯಮಂತ್ರಿ ಅಭ್ಯರ್ಥಿ ಜಿತೇಂದ್ರ ಚೌಧರಿ ಅವರು ಪ್ರದ್ಯೋತ್ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ರಾಜ್ಯದಲ್ಲಿ ಸಿಪಿಐ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿರುವುದು ತಿಪ್ರಾ ಮತ್ತು ಕಾಂಗ್ರೆಸ್ ನಾಯಕತ್ವದ ನಡುವಿನ ಮಾತುಕತೆಗೆ ಸಹಾಯ ಮಾಡಬಹುದು.

ಇದನ್ನೂ ಓದಿ : ಅತಂತ್ರ ಇಲ್ಲ, ಈಶಾನ್ಯದ 3 ರಾಜ್ಯಗಳಲ್ಲಿ ಎನ್​ಡಿಎ ಸರ್ಕಾರ ರಚಿಸಲಿದೆ: ಅಸ್ಸಾಂ ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.