ETV Bharat / bharat

ಮತ್ತು ಬರೋ ಔಷಧ ನೀಡಿ ಶಿಕ್ಷಕಿ ಮೇಲೆ ರೇಪ್: ಬ್ಲಾಕ್ ಮೇಲೆ ಮಾಡಿ, ಮತಾಂತರಕ್ಕೆ ಒತ್ತಡ - UP Women raped

ಡ್ರಾಪ್​ ನೀಡುವ ನೆಪದಲ್ಲಿ ಶಿಕ್ಷಕಿಯೊಬ್ಬಳನ್ನು ಕಾರಿನಲ್ಲಿ ಹತ್ತಿಸಿಕೊಂಡಿರುವ ಕಾಮುಕನೊಬ್ಬ ಆಕೆಯ ಮೇಲೆ ಅತ್ಯಾಚಾರವೆಸಗಿ, ಮತಾಂತರಕ್ಕೆ ಒತ್ತಡ ಹಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

Teacher raped in Uttar pradesh
Teacher raped in Uttar pradesh
author img

By

Published : May 13, 2022, 9:20 PM IST

ಶಹಜಹಾನ್​ಪುರ(ಉತ್ತರ ಪ್ರದೇಶ): 28 ವರ್ಷದ ಶಿಕ್ಷಕಿಯೊಬ್ಬರು ಮೇಲೆ ಮತ್ತು ಬರುವ ಔಷಧ ನೀಡಿ ಅತ್ಯಾಚಾರ ಎಸಗಿರುವ ಕಾಮುಕನೋರ್ವ ತದನಂತರ ಬ್ಲಾಕ್ ಮೇಲೆ ಮಾಡಿ, ಮತಾಂತರಕ್ಕೆ ಒತ್ತಡ ಹಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಘಟನೆಯ ವಿಡಿಯೋ ಸೆರೆ ಹಿಡಿದಿರುವ ಆರೋಪಿ, ತನ್ನೊಂದಿಗೆ ಮದುವೆ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಶಿಕ್ಷಕಿ ಪೊಲೀಸರಿಗೆ ದೂರು ನೀಡಿದ್ದಾಳೆ. ಸಂತ್ರಸ್ತೆಯ ದೂರಿನ ಆಧಾರದ ಮೇರೆಗೆ ಪೊಲೀಸರು ಐವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಮೇ. 4ರಂದು ಮಹಿಳೆ ಶಾಲೆ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.

ಅಶ್ಲೀಲ ವಿಡಿಯೋ ಮೂಲಕ ತನ್ನ ಮೇಲೆ ಬ್ಲಾಕ್ ಮೇಲೆ ಮಾಡಿರುವ ಆರೋಪಿ, ಮತಾಂತರ ಮಾಡಿಕೊಂಡು ಮದುವೆ ಮಾಡಿಕೊಳ್ಳುವಂತೆ ಒತ್ತಾಯ ಮಾಡಿದ್ದಾನೆಂದು ತಿಳಿಸಿದ್ದಾರೆ.

ಇದನ್ನೂ ಓದಿ: ಸರ್ವಿಸ್ ರಿವಾಲ್ವರ್​ನಿಂದ ಗುಂಡಿಕ್ಕಿ ಸಬ್​​ಇನ್ಸ್​​ಪೆಕ್ಟರ್​ ಆತ್ಮಹತ್ಯೆ

ಶಾಲೆಯಿಂದ ಮನೆಗೆ ವಾಪಸ್​ ಬರುವ ಸಂದರ್ಭದಲ್ಲಿ ವಾಹನಕ್ಕಾಗಿ ಶಿಕ್ಷಕಿ ಕಾಯುತ್ತಿದ್ದಳು. ಈ ವೇಳೆ ಬೊಲೆರೋ ಕಾರು ತಂದಿರುವ ಕಾಮುಕ ವ್ಯಕ್ತಿ, ಡ್ರಾಪ್ ಮಾಡುವುದಾಗಿ ತಿಳಿಸಿದ್ದಾನೆ. ಆತ, ಮೊದಲಿನಿಂದಲೂ ಪರಿಚಯವಿದ್ದ ಕಾರಣ, ಅದರೊಳಗೆ ಶಿಕ್ಷಕಿ ಕುಳಿತುಕೊಂಡಿದ್ದಾರೆ. ಮಾರ್ಗ ಮಧ್ಯೆ ಅವರಿಗೆ ಮತ್ತು ಬರುವ ಪದಾರ್ಥ ನೀಡಿ, ಬೇರೊಂದು ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ.

ಇದರ ವಿಡಿಯೋ ಸಹ ಮಾಡಿದ್ದಾನೆ. ಮಹಿಳೆಗೆ ಪ್ರಜ್ಞೆ ಬಂದಾಗ ಅವಳು ಆರೋಪಿ ಜೊತೆಗೆ ತಾಯಿ, ತಂದೆಯನ್ನ ನೋಡಿದ್ದಾರೆ. ಈ ವೇಳೆ ತನಗೆ ಮತಾಂತರಗೊಳ್ಳುವಂತೆ ಒತ್ತಡ ಹಾಕಿದ್ದಾರೆಂದು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಕುಮಾರ್, ಅತ್ಯಾಚಾರ ನಡೆದಿರುವ ಬಗ್ಗೆ ಶಿಕ್ಷಕಿ ದೂರು ನೀಡಿದ್ದಾರೆ. ಈಗಾಗಲೇ ದೂರಿನನ್ವಯ ಆರೋಪಿ ಅಮೀರ್, ಆತನ ತಾಯಿ, ಸಹೋದರಿ, ಸಹೋದರ ಹಾಗೂ ತಂದೆ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.