ನವದೆಹಲಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆರ್ಟಿಕಲ್ 370 ಪುನಃ ಸ್ಥಾಪಿಸಲಾಗುವುದು ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಸೋಷಿಯಲ್ ಮೀಡಿಯಾ ಕ್ಲಬ್‌ಹೌಸ್ ಚಾಟ್ನಲ್ಲಿ ನೀಡಿದ್ದಾರೆ ಎಂಬ ಹೇಳಿಕೆ ಸೋರಿಕೆ ಬಹುದೊಡ್ಡ ರಾಜಕೀಯ ಬಿರುಗಾಳಿ ಎಬ್ಬಿಸಿದೆ.
'ಕ್ಲಬ್‌ಹೌಸ್' ಚಾಟ್ನಲ್ಲಿ ಪಾಕಿಸ್ತಾನದ ಲೇಖಕರ ನಡುವೆ ನಡೆಸಿದ್ದಾರೆ ಎನ್ನಲಾದ ಚಾಟ್ ಭಾರೀ ರಾಜಕೀಯ ಬಿರುಗಾಳಿಗೆ ಕಾರಣವಾಗಿದೆ. ಇದು ಸೋಷಿಯಲ್ ಮೀಡಿಯಾದಲ್ಲಿ ಅಬ್ಬರ ಸೃಷ್ಟಿಸಿದೆ. ಜಮ್ಮು ಮತ್ತು ಕಾಶ್ಮೀರದ ಒಕ್ಕೂಟದೊಂದಿಗೆ ಏಕೀಕರಣದ ಬಗ್ಗೆ ಕಾಂಗ್ರೆಸ್ ಕಾರ್ಯಸೂಚಿ ಏನು ಎಂದು ಬಿಜೆಪಿ ನಾಯಕರು ಪ್ರಶ್ನಿಸಿದ್ದಾರೆ.
'ಕ್ಲಬ್‌ಹೌಸ್' ಚಾಟ್ನಲ್ಲಿ ಅವರು ಆರ್ಟಿಕಲ್ 370ರ ವಿಚಾರವಾಗಿ ಪಾಕಿಸ್ತಾನಿ ಪತ್ರಕರ್ತ ಕೇಳಿಗೆ ಪ್ರಶ್ನೆಗೆ ಉತ್ತರಿಸಿದ್ದು, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್ 37 ಮತ್ತೆ ಜಾರಿಗೊಳಿಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
ಆಡಿಯೋ ವೈರಲ್ ಕ್ಲಬ್ ಹೌಸ್‌ನಲ್ಲಿ ನಡೆಸುತ್ತಿದ್ದ ಸಂಭಾಷಣೆಯಲ್ಲಿ ದಿಗ್ವಿಜಯ್ ಸಿಂಗ್ ಇಂತಹದ್ದೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಸಂವಾದ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ಪತ್ರಕರ್ತನೂ ಭಾಗಿಯಾಗಿದ್ದ ಎನ್ನಲಾಗಿದೆ. ವೈರಲ್ ಆಗುತ್ತಿರುವ ಆಡಿಯೋದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಆರ್ಟಿಕಲ್ 370 ರದ್ದುಗೊಳಿಸಿದ್ದು ನಿಜಕ್ಕೂ ದುಃಖಕರ ವಿಚಾರ. ದಿಗ್ವಿಜಯ್ ಸಿಂಗ್ರ ಈ ಹೇಳಿಕೆಗೆ ಬಿಜೆಪಿ ನಾಯಕರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
ಓದಿ: ಶಾಸಕ ಸ್ಥಾನಕ್ಕೂ ಈಟಲ ರಾಜೇಂದರ್ ರಾಜೀನಾಮೆ
ಅವರು 370ನೇ ವಿಧಿಯನ್ನು ಹಿಂತೆಗೆದುಕೊಂಡಾಗ ಕಾಶ್ಮೀರಿ ಜಾತ್ಯತೀತತೆಯ ಮೂಲಭೂತವಾದ ಮಾನವೀಯತೆಯು ಕಾಣೆಯಾಗಿದೆ. ಮುಸ್ಲಿಂ ಬಹುಸಂಖ್ಯಾತ ರಾಜ್ಯದಲ್ಲಿ ಹಿಂದೂ ರಾಜನಿದ್ದನು. ಇಬ್ಬರೂ ಒಟ್ಟಾಗಿ ಕೆಲಸ ಮಾಡಿದರು. ವಾಸ್ತವವಾಗಿ, ಸರ್ಕಾರಿ ಸೇವೆಗಳಿಗೆ ಕಾಶ್ಮೀರದಲ್ಲಿ ಮೀಸಲಾತಿಯನ್ನು ಕಾಶ್ಮೀರಿ ಪಂಡಿತರಿಗೆ ನೀಡಲಾಯಿತು.
ಆದ್ದರಿಂದ 370ನೇ ವಿಧಿಯನ್ನು ಹಿಂತೆಗೆದುಕೊಳ್ಳುವ ಮತ್ತು ಜಮ್ಮು ಮತ್ತು ಕಾಶ್ಮೀರದ ರಾಜ್ಯತ್ವವನ್ನು ಕಡಿಮೆ ಮಾಡುವ ನಿರ್ಧಾರವು ಅತ್ಯಂತ ದುಃಖಕರ ನಿರ್ಧಾರವಾಗಿದೆ. ಕಾಂಗ್ರೆಸ್ ಪಕ್ಷವು ಖಂಡಿತವಾಗಿಯೂ ಈ ವಿಷಯದ ಬಗ್ಗೆ ಒಂದು ದೃಷ್ಟಿಕೋನವನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಪಾಕಿಸ್ತಾನದ ಪತ್ರಕರ್ತರಿಗೆ ನೀಡಿದ ಉತ್ತರದಲ್ಲಿ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ ಎನ್ನಲಾಗುತ್ತಿದೆ.