ETV Bharat / bharat

ಕೇರಳದಲ್ಲಿ ಲವ್‌ ಜಿಹಾದ್ ಬಳಿಕ 'ನಾರ್ಕೋಟಿಕ್‌ ಜಿಹಾದ್' ವಿವಾದ: ಬಿಷಪ್‌ ಹೇಳಿದ್ದೇನು? ಸಂಪೂರ್ಣ ವಿವರ - ಕೊಟ್ಟಾಯಂ

'ಕೇರಳದಲ್ಲಿ ಕ್ರಿಶ್ಚಿಯನ್ ಯುವತಿಯರಿಗೆ ಮಾದಕ ವಸ್ತುಗಳನ್ನು ನೀಡಿ ಮನವೊಲಿಸಿ ಆಮಿಷವೊಡ್ಡಲಾಗುತ್ತಿದೆ. ಹಾಗೆಯೇ ಅವರ ಧರ್ಮ ಪರಿವರ್ತನೆ ಮಾಡಲಾಗುತ್ತಿದೆ'- ಪಾಲ್ ಬಿಷಪ್ ಮಾರ್ ಜೋಸೆಫ್ ಕಲ್ಲರಂಗತ್ ಗಂಭೀರ ಆರೋಪ

ಇಸ್ಲಾಂ ವಿರುದ್ಧ ಪಾದ್ರಿಯಿಂದ ಲವ್​ ಜಿಹಾದ್​ ಆರೋಪ

author img

By

Published : Sep 13, 2021, 8:11 PM IST

ಕೊಟ್ಟಾಯಂ(ಕೇರಳ): ಹಲವು ವರ್ಷಗಳಿಂದ ರಾಜ್ಯದಲ್ಲಿ 'ಲವ್ ಜಿಹಾದ್' ಆರೋಪದ ವರದಿಗಳು ಕೇಳಿ ಬರುತ್ತಿದ್ದವು. ಆದರೆ ಈಗ ಚರ್ಚ್ ಲವ್​ ಜಿಹಾದ್​ ಪದಬಳಕೆಗೆ ಸರಿಸಮನಾಗಿ 'ನಾರ್ಕೋಟಿಕ್ಸ್ ಜಿಹಾದ್' ಎಂಬ ಹೊಸ ಪದ ಬಳಸಿ ಗಂಭೀರ ಆರೋಪ ಮಾಡಿದೆ.

ಬಿಷಪ್‌ ಹೇಳಿದ್ದೇನು?

ವಿಶ್ವ ಕ್ಯಾಥೊಲಿಕ್ ನಾಯಕ ಪೋಪ್ ಫ್ರಾನ್ಸಿಸ್ ಅವರ ಶಿಷ್ಯರಲ್ಲೊಬ್ಬರಾದ ಪಾಲ್ ಬಿಷಪ್ ಮಾರ್ ಜೋಸೆಫ್ ಕಲ್ಲರಂಗತ್ ಅವರು ಒಂದು ನಿರ್ದಿಷ್ಟ ಧರ್ಮದ ಕಡೆಗೆ ಬೆರಳು ತೋರಿಸಿ ಗಂಭೀರ ಆರೋಪ ಮಾಡಿದ್ದಾರೆ. ಕ್ರಿಶ್ಚಿಯನ್ ಯುವತಿಯರಿಗೆ ಮಾದಕ ವಸ್ತುಗಳನ್ನು ನೀಡಿ ಮನವೊಲಿಸಿ ಆಮಿಷವೊಡ್ಡಲಾಗುತ್ತಿದೆ. ಹಾಗೆಯೇ ಅವರ ಧರ್ಮ ಪರಿವರ್ತನೆ ಮಾಡಲಾಗುತ್ತಿದೆ ಎಂದಿದ್ದಾರೆ. ಎರಡು ದಿನಗಳ ಹಿಂದೆ ಸಮುದಾಯದವರನ್ನು ಉದ್ದೇಶಿಸಿ ಮಾತನಾಡುತ್ತಿರುವಾಗ ಈ ರೀತಿ ಹೇಳಿಕೆ ನೀಡಿದ್ದು, ಕೇರಳದಲ್ಲಿ ದೊಡ್ಡ ವಿವಾದವನ್ನೇ ಹುಟ್ಟುಹಾಕಿದೆ.

'ಮಾದಕದ್ರವ್ಯಕ್ಕೆ ಯಾವುದೇ ಧರ್ಮವಿಲ್ಲ'- ಸಿಎಂ ಪಿಣರಾಯಿ

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಈ ಬಗ್ಗೆ ಕೇಳಿದಾಗ, ಮೊದಲ ಬಾರಿಗೆ ಈ ಪದವನ್ನು ಕೇಳುತ್ತಿದ್ದೇನೆ ಎಂದಿದ್ದಾರೆ. ಹಾಗೆಯೇ ಮಾದಕದ್ರವ್ಯಕ್ಕೆ ಯಾವುದೇ ಧರ್ಮವಿಲ್ಲ. ಇದು ಸಮಾಜವಿರೋಧಿ ಚಟುವಟಿಕೆ ಎಂದು ಬಿಷಪ್ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ. ಯಾವುದೇ ಧರ್ಮವು ಮಾದಕ ದ್ರವ್ಯಗಳ ಬಳಕೆಯನ್ನು ಪ್ರೋತ್ಸಾಹಿಸುವುದಿಲ್ಲ ಎಂದು ಪಿಣರಾಯಿ ಹೇಳಿದ್ದಾರೆ.

ಈಗ ಅನೇಕ ಧಾರ್ಮಿಕ ಮತ್ತು ರಾಜಕೀಯ ಸಂಸ್ಥೆಗಳು ಈ ಚರ್ಚೆ ಕೈಗೆತ್ತಿಕೊಂಡಿವೆ. ಅನೇಕರು ಬಿಷಪ್ ಅವರ ಅಭಿಪ್ರಾಯಗಳನ್ನು ರಾಜ್ಯದ ಧಾರ್ಮಿಕ ಸಾಮರಸ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಹೇಳಿಕೆ ಎಂದು ಟೀಕಿಸಿದ್ದಾರೆ.

'ನಿರ್ದಿಷ್ಟ ಧರ್ಮದಿಂದ ಪ್ರಯತ್ನ'

ಕ್ರಿಶ್ಚಿಯನ್ ಯುವಕರಲ್ಲಿ ಮಾದಕ ದ್ರವ್ಯಗಳ ಬಳಕೆಯನ್ನು ಜನಪ್ರಿಯಗೊಳಿಸಲು ನಿರ್ದಿಷ್ಟ ಧರ್ಮದಿಂದ ಪ್ರಯತ್ನಗಳು ನಡೆದಿವೆ ಮತ್ತು ಲವ್ ಜಿಹಾದ್ ಮಾಡಲಾಗುತ್ತಿದೆ ಎಂದು ಬಿಷಪ್ ಹೇಳಿದ್ದರು. ಲವ್ ಜಿಹಾದ್ ಆರೋಪಗಳನ್ನು ತಿರಸ್ಕರಿಸುವವರಿಗೆ ಪಟ್ಟಭದ್ರ ಹಿತಾಸಕ್ತಿಗಳಿವೆ ಎಂದೂ ಕೂಡ ಆರೋಪ ಮಾಡಿದ್ದರು.

ರಾಜಕೀಯ ಆರೋಪ-ಪ್ರತ್ಯಾರೋಪ

ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಅವರು ಬಿಷಪ್ ಹೇಳಿಕೆ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ ಮತ್ತು ಸಂಘ ಪರಿವಾರದ ಕಾರ್ಯಕರ್ತರು ಬೆಂಕಿ ಹಚ್ಚಿದ್ದಾರೆ ಎಂದು ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಕೂಡ ಪ್ರತಿಕ್ರಿಯೆ ನೀಡಿದ್ದು, ಬಿಷಪ್ ಅವರನ್ನು ಬೆಂಬಲಿಸಿದ್ದಾರೆ ಮತ್ತು ಅವರು ತಮ್ಮ ವೈಯಕ್ತಿಕ ಅನುಭವದ ಆಧಾರದ ಮೇಲೆ ಆ ಟೀಕೆಗಳನ್ನು ಮಾಡಿದ್ದಾರೆ. ಈ ಆರೋಪಗಳನ್ನು ಕೂಲಂಕಷವಾಗಿ ತನಿಖೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇನ್ನು ಕೇರಳ ಬಿಜೆಪಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಈ ಬಗ್ಗೆ ಪತ್ರ ಬರೆದು ತನಿಖೆಗೆ ಆದೇಶಿಸುವಂತೆ ವಿನಂತಿಸಿದೆ.

ಮತ್ತೊಂದೆಡೆ, ಹಲವಾರು ಕ್ರಿಶ್ಚಿಯನ್ ಧಾರ್ಮಿಕ ಮುಖ್ಯಸ್ಥರು ಸಹ ಬಿಷಪ್ ಬೆಂಬಲಕ್ಕೆ ನಿಂತಿದ್ದು, ಧಾರ್ಮಿಕ ಉಗ್ರವಾದ ಮತ್ತು ಸಮಾಜ ವಿರೋಧಿ ಚಟುವಟಿಕೆಗಳನ್ನು ಪ್ರಚಾರ ಮಾಡಲು ಧರ್ಮದ ಹೆಸರನ್ನು ಬಳಸುವ ಅಲ್ಪಸಂಖ್ಯಾತ ಗುಂಪಿನ ಚಟುವಟಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದ್ದಾರೆ.

ಇಸ್ಲಾಮಿಕ್ ಮುಖಂಡರ ಪ್ರತಿಕ್ರಿಯೆ:

ಮುಸ್ಲಿಂ ಸಂಘಟನೆಗಳು ಈ ವಿವಾದಾತ್ಮಕ ಹೇಳಿಕೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಇದು ಇಸ್ಲಾಂ ವಿರೋಧಿ ಭಾವನೆಗಳನ್ನು ಹರಡುತ್ತಿದೆ ಎಂದು ಆರೋಪಿಸಿದೆ.

ಇನ್ನು ಕ್ರಿಶ್ಚಿಯನ್ ಪರ ದಿನಪತ್ರಿಕೆ, ಬಿಷಪ್ ಹಕ್ಕುಗಳನ್ನು ಬೆಂಬಲಿಸುವ ಸಂಪಾದಕೀಯವನ್ನೂ ವರದಿ ಮಾಡಿದ್ದು, ಅಹಿತಕರ ಸತ್ಯಗಳ ಬಗ್ಗೆ ಮಾತನಾಡಬಾರದೇ? ಎಂದು ದೀಪಿಕಾ ಪತ್ರಿಕೆಯಲ್ಲಿ ತಲೆಬರಹ ನೀಡಲಾಗಿದೆ. ಅವರು ಏನು ಹೇಳಿದರೂ ಅದಕ್ಕೆ ಸಾಕ್ಷ್ಯವಿದೆ ಮತ್ತು ಪ್ರಕರಣದ ತನಿಖೆ ನಡೆಸುವುದು ಪೊಲೀಸರ ಕರ್ತವ್ಯ ಎಂದು ಸಂಪಾದಕೀಯ ತನ್ನ ನಿಲುವು ತಿಳಿಸಿದೆ.

ಎಲ್‌ಡಿಎಫ್ ಮತ್ತು ಯುಡಿಎಫ್ ಸಂಕಷ್ಟದಲ್ಲಿ:

ಕೇರಳದಲ್ಲಿ ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರು ಎರಡು ದೊಡ್ಡ ಮತಬ್ಯಾಂಕುಗಳು. ಯುಡಿಎಫ್ ಮತ್ತು ಎಲ್‌ಡಿಎಫ್ ಎರಡಕ್ಕೂ ಸಾಕಷ್ಟು ಬೆಂಬಲವಿದೆ. ಇವು ರಾಜಕೀಯ ಚದುರಂಗದಾಟದಲ್ಲಿ ತಮ್ಮದೇ ಆದ ಪ್ರಭಾವ ಬೀರುತ್ತವೆ. ಆದಾಗ್ಯೂ, ಎರಡೂ ರಂಗಗಳು ಈ ಹೇಳಿಕೆಯಲ್ಲಿ ಜಾಗರೂಕತೆಯಿಂದ ಇರಲು ಬಯಸಿವೆ.

ಇನ್ನು ಕಾಂಗ್ರೆಸ್‌ನಿಂದ ವಿ.ಡಿ.ಸತೀಶನ್ ಮತ್ತು ಪಿ.ಟಿ.ಥಾಮಸ್ ಅವರು ಬಿಷಪ್ ಅವರ ಟೀಕೆಗಳ ವಿರುದ್ಧ ಮೊದಲು ಧ್ವನಿ ಎತ್ತಿದ್ದರು ಎಂಬುದನ್ನಿಲ್ಲಿ ಗಮನಿಸಬೇಕು. ಆದಾಗ್ಯೂ, ವಿವಾದವು ಎರಡು ದಿನಗಳಾದಾಗ ಹೆಚ್ಚಿನ ಸ್ವರೂಪ ಪಡೆದುಕೊಂಡಿದ್ದು, ಅವರಿಬ್ಬರೂ ಯಾವುದೇ ಸಾರ್ವಜನಿಕ ಹೇಳಿಕೆಗಳನ್ನು ನೀಡಿಲ್ಲ. ಬದಲಾಗಿ ವಿ.ಡಿ.ಸತೀಶನ್ ಈ ವಿವಾದವನ್ನು ಈಗಿನ ಸರ್ಕಾರದ ವಿರುದ್ಧವಾಗಿ ಪರಿವರ್ತಿಸುವ ಮೂಲಕ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸಿದ್ದಾರೆ. ಇನ್ನು ಯುಡಿಎಫ್‌ನ ಎರಡು ಪ್ರಮುಖ ಘಟಕಗಳಾದ ಕೇರಳ ಕಾಂಗ್ರೆಸ್ (ಜಾಕೋಬ್) ಮತ್ತು ಕೇರಳ ಕಾಂಗ್ರೆಸ್ (ಜೋಸೆಫ್) ಬಣಗಳು ಬಿಷಪ್ ಅವರನ್ನು ಬಹಿರಂಗವಾಗಿ ಬೆಂಬಲಿಸಿವೆ.

ಈ ವಿವಾದದ ಬಗ್ಗೆ ಮುಸ್ಲಿಂ ಲೀಗ್ ಇನ್ನೂ ಯಾವುದೇ ರೀತಿ ಪ್ರತಿಕ್ರಿಯೆ ನೀಡಿಲ್ಲ. ಇನ್ನು ಈ ಹೇಳಿಕೆ ಬಗ್ಗೆ ಎಲ್‌ಡಿಎಫ್ ಎಚ್ಚರಿಕೆಯ ನಿಲುವನ್ನು ತೆಗೆದುಕೊಳ್ಳುತ್ತಿದ್ದು, ಬಿಷಪ್ ಅವರ ಹೇಳಿಕೆಗಳು ರಾಜ್ಯದ ಧಾರ್ಮಿಕ ಸಾಮರಸ್ಯ ಹಾಳುಮಾಡುತ್ತವೆ ಎಂದಷ್ಟೇ ಹೇಳಿದ್ದು, ಸಾರ್ವಜನಿಕರಿಂದ ಈ ವಿಷಯದಲ್ಲಿ ದೂರ ಉಳಿದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.