ETV Bharat / bharat

ತಾಜ್​ಮಹಲ್​ನ 22 ಕೋಣೆಗಳ ರಹಸ್ಯ: ಅರ್ಜಿ ವಿಚಾರಣೆ ನಡೆಸಲಿರುವ ಯುಪಿ ಹೈಕೋರ್ಟ್​

ತಾಜ್ ಮಹಲ್​ನಲ್ಲಿರುವ 22 ಕೊಠಡಿಗಳಲ್ಲೇನಿದೆ ಎಂಬುದನ್ನು ತನಿಖೆ ಮಾಡಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶನ ನೀಡಬೇಕೆಂದು ಉತ್ತರ ಪ್ರದೇಶ ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಲಾಗಿದ್ದು, ಇಂದು ವಿಚಾರಣೆ ನಡೆಯಲಿದೆ.

Allahabad High Court to hear petition today seeking to open 22 closed doors in Taj Mahal
ತಾಜ್​ಮಹಲ್​ನ 22 ಕೋಣೆಗಳ ರಹಸ್ಯ: ಅರ್ಜಿಯ ವಿಚಾರಣೆ ನಡೆಸಲಿರುವ ಉತ್ತರಪ್ರದೇಶ ಹೈಕೋರ್ಟ್​
author img

By

Published : May 12, 2022, 11:13 AM IST

ಪ್ರಯಾಗರಾಜ್(ಉತ್ತರ ಪ್ರದೇಶ): ವಿಶ್ವವಿಖ್ಯಾತ ತಾಜ್​ಮಹಲ್‌ನಲ್ಲಿ ಮುಚ್ಚಿದ 22 ಕೊಠಡಿಗಳನ್ನು ತೆರೆಯುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಇಂದು ವಿಚಾರಣೆ ನಡೆಸಲಿದೆ. ಬಿಜೆಪಿ ಯುವ ಮಾಧ್ಯಮ ಉಸ್ತುವಾರಿ ರಜನೀಶ್ ಸಿಂಗ್ ಅವರು ಲಖನೌ ಪೀಠದ ಮುಂದೆ ಮನವಿ ಸಲ್ಲಿಸಿದ್ದು, ತಾಜ್ ಮಹಲ್​ನಲ್ಲಿರುವ 22 ಕೊಠಡಿಗಳಲ್ಲಿ ಏನಿದೆ ಎಂಬುದನ್ನು ತನಿಖೆ ಮಾಡಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಕೋರಿದ್ದಾರೆ.

ತಾಜ್​ಮಹಲ್ ಹಳೆಯ ಶಿವ ದೇವಾಲಯವಾಗಿದೆ ಎಂದು ಕೆಲವು ಇತಿಹಾಸಕಾರರು ಹೇಳಿದ್ದು, ಇದನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಕೆಲವು ಹಿಂದೂ ಗುಂಪುಗಳು ಮತ್ತು ಪ್ರತಿಷ್ಠಿತ ಸಂತರು ಈ ಸ್ಮಾರಕವನ್ನು ಹಳೆಯ ಶಿವ ದೇವಾಲಯವೆಂದು ಹೇಳುತ್ತಿದ್ದಾರೆ. ಮೊಘಲ್ ಚಕ್ರವರ್ತಿ ಷಹಜಹಾನ್ ನಿರ್ಮಿಸಿದ ಎಂದು ಅನೇಕ ಇತಿಹಾಸಕಾರರು ನಂಬುತ್ತಾರೆ. ಮತ್ತೆ ಕೆಲವರು ತೇಜೋ ಮಹಾಲಯ ಅಥವಾ ತಾಜ್ ಮಹಲ್ ಎಂದು ನಂಬುತ್ತಾರೆ ಎಂದು ಅರ್ಜಿಯಲ್ಲಿ ವಿವರಿಸಿದ್ದಾರೆ.

ಆಗ್ರಾದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆಯು ತಾಜ್​ಮಹಲ್ ನಿರ್ವಹಣೆ ಮಾಡುತ್ತಿದ್ದು, ಭವ್ಯ ಕಟ್ಟಡದೊಳಗಿನ ಕೆಲವು ಕೊಠಡಿಗಳಲ್ಲಿ ಏನಿದೆ ಎಂಬ ವಿವರಗಳನ್ನು ಬಹಿರಂಗಪಡಿಸಲು ಕೇಂದ್ರ ಸರ್ಕಾರ ನಿರಾಕರಿಸಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದು, ಹೈಕೋರ್ಟ್ ಶೀಘ್ರವೇ ಸಕಾರಾತ್ಮಕ ತೀರ್ಪು ನೀಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪ.ಬಂಗಾಳ ಸೇರಿ ಈಶಾನ್ಯದ 7 ರಾಜ್ಯಗಳಿಗೆ 35,000 ಸ್ವಚ್ಛಸೇವಕರ ನೇಮಕಕ್ಕೆ ಮುಂದಾದ ಆರ್‌ಎಸ್‌ಎಸ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.