ಪ್ರಯಾಗ್ರಾಜ್ (ಉತ್ತರ ಪ್ರದೇಶ): ಮದುವೆಯಾಗಿದ್ದರೂ ಲೀವ್ ಇನ್ ರಿಲೇಷನ್ಶಿಪ್ನಲ್ಲಿದ್ದ ಕಾರಣಕ್ಕೆ ಸರ್ಕಾರಿ ನೌಕರನನ್ನು ಕೆಲಸದಿಂದ ವಜಾ ಮಾಡಿರುವ ಕ್ರಮವನ್ನು ಅಲಹಾಬಾದ್ ಹೈಕೋರ್ಟ್ ಖಂಡಿಸಿದೆ. ಮತ್ತೆ ಆ ನೌಕರನನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳುವಂತೆ ಕೋರ್ಟ್ ಸೂಚಿಸಿದ್ದು, ಕಡಿತಗೊಂಡಿರುವ ವೇತನ ನೀಡಲಾಗುವುದಿಲ್ಲ ಎಂದು ಅರ್ಜಿದಾರನಿಗೆ ಹೇಳಿದೆ.
ಗೋರೆಲಾಲ್ ವರ್ಮಾ ಎಂಬಾತ ಸಲ್ಲಿಸಿದ್ದ ಅರ್ಜಿಯಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಂಕಜ್ ಭಾಟಿಯಾ ಈ ಆದೇಶ ನೀಡಿದ್ದಾರೆ. ಕೆಲಸದಿಂದ ವಜಾಗೊಳಿಸುವ ಶಿಕ್ಷೆ ತುಂಬಾ ಕಠಿಣವಾದದ್ದು ಎಂದಿರುವ ನ್ಯಾಯಾಲಯ, ಉತ್ತರ ಪ್ರದೇಶ ಸರ್ಕಾರಿ ನೌಕರರ ನಡವಳಿಕೆ ನಿಯಮಗಳು 1956 ರಕ್ಕೆ ಇದು ವಿರುದ್ಧವಾಗಿದೆ ಎಂದು ಹೇಳಿದೆ. ಇದೇ ವೇಳೆ ಅರ್ಜಿದಾರನ ಖಡಿತಗೊಂಡಿರುವ ವೇತನ ನೀಡಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಓದಿ : ಇಂದಿನಿಂದ ಸಂಸತ್ನ ಮುಂಗಾರು ಅಧಿವೇಶನ ಆರಂಭ: ಪ್ರತಿಪಕ್ಷಗಳನ್ನು ಎದುರಿಸಲು ಸರ್ಕಾರ ಸಜ್ಜು!
ಸರ್ಕಾರಿ ನೌಕರ ಗೋರೆಲಾಲ್ ಹೆಮ್ಲತಾ ವರ್ಮಾ ಎಂಬ ಮಹಿಳೆಯೊಂದಿಗೆ ಲೀವ್ ಇನ್ ರಿಲೇಷನ್ಶಿಪ್ ಸಂಬಂಧದಲ್ಲಿ ಇದ್ದ ಎಂದು ಆರೋಪಿಸಲಾಗಿದೆ. ಈತನಿಗೆ ಲಕ್ಷ್ಮಿ ದೇವಿ ಎಂಬವರ ಜೊತೆ ವಿವಾಹವಾಗಿದ್ದು, ಮೂವರು ಮಕ್ಕಳಿದ್ದಾರೆ.
ಲೀವ್ ಇನ್ ರಿಲೇಷನ್ಶಿಪ್ ಕಾರಣ ನೀಡಿ ತನ್ನನ್ನು ಸರ್ಕಾರಿ ನೌಕರಿಯಿಂದ ವಜಾಗೊಳಿಸಿರುವುದನ್ನು ಪ್ರಶ್ನಿಸಿ ಗೋರೆಲಾಲ್ ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೀರಿದ್ದ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲ ಸುಪ್ರೀಂಕೋರ್ಟ್ನ ಆದೇಶ ಉಲ್ಲೇಖಿಸಿ ತೀರ್ಪು ನೀಡಿದ್ದು, ಲೀವ್ -ಇನ್- ರಿಲೇಷನ್ಶಿಪ್ ಕಾರಣಕ್ಕೆ ನೌಕರಿಯಿಂದ ವಜಾಗೊಳಿಸುವುದು ಕಠಿಣ ಕ್ರಮವಾಗಿದೆ. ಆತನಿಗೆ ಸ್ವಲ್ಪ ಮೊತ್ತ ದಂಡ ವಿಧಿಸಬಹುದು ಎಂದಿದೆ.