ETV Bharat / bharat

22ರ ಹರೆಯದ ಯುವಕನಲ್ಲಿ ಗರ್ಭಕೋಶ ಸೇರಿ ಸ್ತ್ರೀ ಅಂಗಗಳು ಉತ್ಪತ್ತಿ: ಕೋಟಿಗೊಬ್ಬರಲ್ಲಿ ಕಾಣುವ ಲಕ್ಷಣ - Etv bharat kannada

ಜಾರ್ಖಂಡ್​ನ ಗೊಡ್ಡಾ ಜಿಲ್ಲೆಯಲ್ಲಿ ವೈದ್ಯ ಲೋಕದಲ್ಲಿ ಅಚ್ಚರಿ ಪ್ರಕರಣ - ಯುವಕನಲ್ಲಿ ಮಹಿಳೆಯ ಗರ್ಭಕೋಶ, ಅಂಡಾಶಯ ಮತ್ತು ಫಾಲೋಪಿಯನ್ ಪತ್ತೆ - ಕೋಟಿ ಜನರಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುವ ಲಕ್ಷಣ

all-the-developed-organs-of-a-woman-were-found-inside-a-22-year-old-man-in-jharkhand
22ರ ಹರೆ ಯುವಕನಲ್ಲಿ ಗರ್ಭಕೋಶ ಸೇರಿ ಸ್ತ್ರೀ ಅಂಗಗಳು ಉತ್ಪತ್ತಿ
author img

By

Published : Dec 24, 2022, 9:02 PM IST

Updated : Dec 24, 2022, 9:10 PM IST

ಗೊಡ್ಡಾ (ಜಾರ್ಖಂಡ್​): ಪುರುಷನ ದೇಹದೊಳಗೆ ಹೆಣ್ಣು ಸಂತಾನೋತ್ಪತ್ತಿ ಅಂಗಗಳು ಪತ್ತೆಯಾಗಿವೆ. ಇದು ಅಚ್ಚರಿ ಎನಿಸಿದರೂ ಸತ್ಯ. ಜಾರ್ಖಂಡ್​ನ ಗೊಡ್ಡಾ ಜಿಲ್ಲೆಯ 22ರ ಯುವಕನ ದೇಹದಲ್ಲಿ ಸ್ತ್ರೀ ಅಂಗಗಳಾದ ಗರ್ಭಕೋಶ (Uterus), ಅಂಡಾಶಯ (Ovary) ಮತ್ತು ಫಾಲೋಪಿಯನ್​ (Fallopian) ಇರುವುದು ಕಂಡು ಬಂದಿದೆ. ಶಸ್ತ್ರಚಿಕಿತ್ಸೆ ಮೂಲಕ ಸ್ತ್ರೀ ಅಂಗಗಳನ್ನು ವೈದ್ಯರು ತೆಗೆದಿದ್ದಾರೆ.

22ರ ಹರೆಯದ ಈ ಯುವಕನ ದಿನಚರಿ ಸಾಮಾನ್ಯವಾಗಿದೆ. ಯಾವತ್ತೂ ಯಾವುದೇ ಸಮಸ್ಯೆಯನ್ನೂ ಯುವಕ ಎದುರಿಸಿಲ್ಲ. ಆದರೆ, ಕೆಲ ದಿನಗಳ ಹಿಂದೆ ಮೈಯಲ್ಲಿ ನೋವು ಕಾಣಿಸಿಕೊಂಡಾಗ ವೈದ್ಯರ ಬಳಿ ಚಿಕಿತ್ಸೆಗೆಂದು ತೆರಳಿದ್ದು, ಆಗ ಸ್ತ್ರೀ ಅಂಗಗಳು ಬೆಳಕಿಗೆ ಬಂದಿದೆ. ಈ ವಿಷಯ ತಿಳಿದ ಸುತ್ತಮುತ್ತಲಿನ ಜನರು ಯುವಕನನ್ನು ಅರ್ಧನಾರೀಶ್ವರನ ರೂಪವೆಂದೇ ನಂಬುತ್ತಿದ್ದಾರೆ.

ಬೆಳಕಿಗೆ ಬಂದಿದ್ದು ಹೇಗೆ?: ವಾಸ್ತವದಲ್ಲಿ ಹೇಳಬೇಕಾದೆ ಆ ಯುವಕನಿಗೆ ಈ ಮೊದಲೇ ತಿಳಿಸಿದಂತೆ ಕಳೆದ ಕೆಲವು ದಿನಗಳಿಂದ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಇದಾದ ಬಳಿಕ ಚಿಕಿತ್ಸೆ ಪಡೆಯಲು ವೈದ್ಯರ ಬಳಿ ತೆರಳಿದ್ದ. ಬಾಲ್ಯದಿಂದಲೂ ಯುವಕನಿಗೆ ಬಲಭಾಗದಲ್ಲಿ ಇಂಜಿನಲ್ ಅಂಡವಾಯು ಇತ್ತು. ಅದಕ್ಕೆ ಚಿಕಿತ್ಸೆ ನೀಡಿಲ್ಲ ಮತ್ತು ಬಲಭಾಗದಲ್ಲಿ ವೃಷಣವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಬಲಭಾಗದಲ್ಲಿರುವ ವೃಷಣವು ಕೆಲವೊಮ್ಮೆ ಹೊಟ್ಟೆ ಮತ್ತು ಇಂಜಿನಲ್ ಕಾಲುವೆ (inguinal canal)ಯಲ್ಲಿ ಉಳಿಯುತ್ತದೆ. ಇದೇ ನಿಟ್ಟಿನಲ್ಲಿ ತಪಾಸಣೆ ಮಾಡುವಾಗ ಎರಡ್ಮೂರು ಬಾರಿ ಅಲ್ಟ್ರಾಸೌಂಡ್ ಸಹ ವೈದ್ಯರು ನಡೆಸಿದ್ದರು. ಆಗ ಯುವಕನಿಗೆ ಹರ್ನಿಯಾ ಇದ್ದು, ಶಸ್ತ್ರಚಿಕಿತ್ಸೆ ಮಾಡಬೇಕೆಂದು ತಿಳಿಸಿದ್ದಾರೆ. ಅಂತೆಯೇ, ಶಸ್ತ್ರಚಿಕಿತ್ಸೆ ನೆರವೇರಿಸುವಾಗ ಯುವಕನ ದೇಹವು ಸ್ತ್ರೀ ಸಂತಾನೋತ್ಪತ್ತಿ ಅಂಗಗಳನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಕೋಟ್ಯಾಂತರ ಜನರಲ್ಲಿ ಒಬ್ಬರಿಗೆ ಹೀಗೆ: ಈ ಬಗ್ಗೆ ವೈದ್ಯೆ ತಾರಾ ಶಂಕರ್ ಝಾ ಮಾತನಾಡಿದ್ದು, ಯುವಕನಲ್ಲಿ ಗರ್ಭಾಶಯ (Uterus), ಅಂಡಾಶಯ (Ovary) ಮತ್ತು ಫಾಲೋಪಿಯನ್ (Fallopian) ಟ್ಯೂಬ್​ಗಳು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿವೆ. ಕೋಟ್ಯಾಂತರ ಜನರಲ್ಲಿ ಒಬ್ಬರಿಗೆ ಹೀಗೆ ಸಂಭವಿಸುತ್ತದೆ. ಇದನ್ನು ಟ್ರೂ ಹರ್ಮಾಫ್ರೋಡೈಟ್ (True Hermaphrodite) ಎಂದು ಕರೆಯಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಅಲ್ಲದೇ, ಇದನ್ನು ವೈದ್ಯಕೀಯ ಭಾಷೆಯಲ್ಲಿ ಪರ್ಸಿಸ್ಟೆಂಟ್ ಮುಲ್ಲೆರಿಯನ್ ಡಕ್ಟ್ ಸಿಂಡ್ರೋಮ್ (Persistent Mullerian Duct Syndrome - PMDS) ಎಂದು ಕರೆಯಲಾಗುತ್ತದೆ. ಇದರಲ್ಲಿ ಎರಡೂ ಲಿಂಗಗಳ ಆಂತರಿಕ ಅಂಗವು ಒಂದೇ ವ್ಯಕ್ತಿಯಲ್ಲಿ ಇರುತ್ತದೆ. ಯುವಕನಲ್ಲಿ ಗರ್ಭಾಶಯ, ಅಂಡಾಶಯಗಳು ಮತ್ತು ಫಾಲೋಪಿಯನ್ ಟ್ಯೂಬ್​ಗಳು ಪತ್ತೆಯಾದ ಬಳಿಕ ಶಸ್ತ್ರಚಿಕಿತ್ಸೆ ಮೂಲಕ ಸ್ತ್ರೀ ಸಂತಾನೋತ್ಪತ್ತಿ ವ್ಯವಸ್ಥೆ ತೆಗೆದುಹಾಕಲಾಯಿತು ಎಂದು ವಿವರಿಸಿದರು.

ಸದ್ಯ ಯುವಕ ಸುರಕ್ಷಿತವಾಗಿದ್ದು, ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ಮುಂದುವರೆಸಲಾಗಿದೆ. ಇದನ್ನು ಪುರುಷನಾದರೆ ಫಿನೋಟೈಪ್, ಮಹಿಳೆಯಾದರೆ ಜೀನೋಟೈಪ್ ಎನ್ನಲಾಗುತ್ತಿದೆ. ಒಟ್ಟಾರೆ ಈ ರೀತಿಯ ರೋಗವನ್ನು ಹರ್ಮಾಫ್ರೋಡೈಟ್ ಎಂದು ಕರೆಯಲಾಗುತ್ತದೆ. ಒಂದು ವೇಳೆ ವಿವಾಹ ನಂತರವೂ ಈ ರೀತಿ ಕಂಡು ಬಂದರೂ, ತಮ್ಮ ವೈವಾಹಿಕ ಜೀವನವನ್ನು ಸಾಮಾನ್ಯ ರೀತಿಯಲ್ಲಿ ಬದುಕಬಹುದು. ಇದು ಅರ್ಧನಾರೀಶ್ವರ ಪದವನ್ನು ಜೈವಿಕವಾಗಿ ಸಾಬೀತುಪಡಿಸುತ್ತದೆ ಎಂದು ಹೇಳಿದರು.

ಇದನ್ನೂ ಓದಿ: 15 ದಿನ ಗಂಟಲಲ್ಲೇ ಉಳಿದ ಜಿಗಣೆ ಜೀವಂತ: ಅಚ್ಚರಿಗೊಳಗಾದ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ

Last Updated : Dec 24, 2022, 9:10 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.