ಮುಂಬೈ: ಭೂಗತ ಜಗತ್ತಿನೊಂದಿಗೆ ನಂಟು ಹೊಂದಿರುವ ವ್ಯಕ್ತಿಗಳಿಂದ ಜಮೀನು ಖರೀದಿಸಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮಾಡಿರುವ ಆರೋಪವನ್ನು ಮಹಾರಾಷ್ಟ್ರ ಸಚಿವ, ಎನ್‌ಸಿಪಿ ನಾಯಕ ನವಾಬ್ ಮಲಿಕ್ ತಳ್ಳಿಹಾಕಿದ್ದು, ನಮ್ಮ ಎಲ್ಲಾ ವ್ಯವಹಾರಗಳು ಪಾರದರ್ಶಕವಾಗಿಯೇ ನಡೆದಿವೆ ಎಂದಿದ್ದಾರೆ.
ತಮ್ಮ ವಿರುದ್ಧ ಆರೋಪ ಮಾಡಿದ ಕೆಲವೇ ಗಂಟೆಗಳಲ್ಲಿ ಫಡ್ನವೀಸ್ ಹೇಳಿಕೆಗೆ ತಿರುಗೇಟು ನೀಡಿರುವ ಮಲಿಕ್, ಭೂಗತ ಜಗತ್ತಿನೊಂದಿಗೆ ನಂಟು ಹೊಂದಿರುವ ಅಥವಾ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅಪರಾಧಿಯಾಗಿರುವ ಯಾರಿಂದಲೂ ಯಾವುದೇ ಆಸ್ತಿ ಖರೀದಿಸಿಲ್ಲ. ಭೂಗತ ಲೋಕ ಮತ್ತು ಬಾಂಬ್ ಸ್ಫೋಟದ ಅಪರಾಧಿಗಳೊಂದಿಗೆ ನನ್ನ ಹೆಸರನ್ನು ತಳಕು ಹಾಕಲು ಪ್ರಯತ್ನಿಸುವ ಮೂಲಕ ಫಡ್ನವಿಸ್ ತನ್ನ ಇಮೇಜ್‌ಗೆ ಧಕ್ಕೆ ತರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
1993ರ ಮುಂಬೈ ಸರಣಿ ಸ್ಫೋಟ ಪ್ರಕರಣದ ಇಬ್ಬರು ಅಪರಾಧಿಗಳಿಂದ ನವಾಬ್ ಮಲಿಕ್ ಮತ್ತು ಅವರ ಕುಟುಂಬ ಸದಸ್ಯರ ಕಂಪನಿಯು ಉಪನಗರ ಕುರ್ಲಾದಲ್ಲಿ ಅತ್ಯಂತ ಅಗ್ಗದ ದರದಲ್ಲಿ ಭೂಮಿಯನ್ನು ಖರೀದಿಸಿದೆ. ಮಲಿಕ್ ಮತ್ತು ಅವರ ಕುಟುಂಬ ಸದಸ್ಯರು ಭೂಗತ ಜಗತ್ತಿನೊಂದಿಗೆ ಸಂಬಂಧ ಹೊಂದಿರುವ ಜನರೊಂದಿಗೆ ಭೂ ವ್ಯವಹಾರಗಳನ್ನು ಮಾಡಿಕೊಂಡಿದ್ದಾರೆ ಎಂದು ಫಡ್ನವೀಸ್ ಹೊಸ ಬಾಂಬ್ ಸಿಡಿಸಿದ್ದರು.
'ನಾಳೆ ಹೈಡ್ರೋಜನ್ ಬಾಂಬ್ ಸಿಡಿಸುತ್ತೇನೆ':
ಫಡ್ನವಿಸ್ ಅವರು ಸುದ್ದಿಗೋಷ್ಠಿಯನ್ನು ಮುಗಿಸಿದ ನಂತರ, ಮಲಿಕ್ ಅವರು ನಾನು ಬರುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದರು. ದೇವೇಂದ್ರ ಫಡ್ನವಿಸ್ ಮಾಡಿರುವ ಆರೋಪಗಳು ಆಧಾರರಹಿತವಾಗಿವೆ. ಭೂಗತ ಜಗತ್ತಿನೊಂದಿಗೆ ಸಂಪರ್ಕ ಹೊಂದಿರುವ ಯಾರೊಬ್ಬರಿಂದ ಅಥವಾ ಸ್ಫೋಟದ ಅಪರಾಧಿಯಿಂದ ನಾನು ಯಾವುದೇ ಆಸ್ತಿಯನ್ನು ಖರೀದಿಸಿಲ್ಲ ಎಂದು ಮಲಿಕ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
-
आ रहा हूँ मैं
— Nawab Malik نواب ملک नवाब मलिक (@nawabmalikncp) November 9, 2021 " class="align-text-top noRightClick twitterSection" data="
">आ रहा हूँ मैं
— Nawab Malik نواب ملک नवाब मलिक (@nawabmalikncp) November 9, 2021आ रहा हूँ मैं
— Nawab Malik نواب ملک नवाब मलिक (@nawabmalikncp) November 9, 2021
ಖರೀದಿಸಿದ ಆಸ್ತಿಗಳಿಗೆ ಮುದ್ರಾಂಕ ಶುಲ್ಕ ಪಾವತಿಸಿ ಕಾನೂನುಬದ್ಧವಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಎಲ್ಲಾ ವ್ಯವಹಾರಗಳನ್ನು ಅತ್ಯಂತ ಪಾರದರ್ಶಕ ರೀತಿಯಲ್ಲಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿರುವ ಅವರು, ದೀಪಾವಳಿಯ ಬಳಿಕ ಹೊಸ ಬಾಂಬ್ ಸಿಡಿಸುವುದಾಗಿ ಹೇಳಿದ್ದ ಫಡ್ನವೀಸ್ ಅವರದ್ದು ಠುಸ್ ಪಟಾಕಿಯಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ ಫಡ್ನವೀಸ್ ಅವರಿಗೆ ಭೂಗತ ಸಂಪರ್ಕದ ಬಗ್ಗೆ ಬುಧವಾರ ಹೈಡ್ರೋಜನ್ ಬಾಂಬ್ ಅನ್ನೇ ಸಿಡಿಸುತ್ತೇನೆ ಎಂದು ಹೇಳಿದ್ದಾರೆ.