ETV Bharat / bharat

ಔತಣಕೂಟದಿಂದ ವಿಪಕ್ಷಗಳ ನಾಯಕರನ್ನು ಹೊರಗಿಡಲಾಗಿದೆ: ರಾಹುಲ್​ ಗಾಂಧಿ ಗರಂ.. ಆರೋಪ ನಿರಾಕರಿಸಿದ ಬಿಜೆಪಿ - ರಾಹುಲ್​ ಗಾಂಧಿ ಆರೋಪ

G 20 Summit Gala Dinner: ವಿರೋಧ ಪಕ್ಷಗಳ ಆರೋಪಗಳನ್ನು ಆಡಳಿತ ಪಕ್ಷ ತಳ್ಳಿ ಹಾಕಿದೆ.

G 20 Summit
ಜಿ20 ಶೃಂಗಸಭೆ
author img

By ETV Bharat Karnataka Team

Published : Sep 8, 2023, 10:33 PM IST

ನವದೆಹಲಿ/ಬ್ರಸೆಲ್ಸ್​​ ​: ರಾಷ್ಟ್ರಪತಿ ಭವನದ ಔತಣಕೂಟದ ಆಮಂತ್ರಣ ಪತ್ರದಲ್ಲಿ ಬದಲಾವಣೆಯಿಂದ ಎದ್ದಿದ್ದ ರಾಜಕೀಯ ಬಿರುಗಾಳಿ ತಣ್ಣಗಾಗುವ ಮುನ್ನವೇ ಇದೀಗ ಮತ್ತೊಂದು ಸುದ್ದಿ ಸದ್ದು ಮಾಡುತ್ತಿದೆ. ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಪ್ರಜಾಪ್ರಭುತ್ವ ಅಥವಾ ವಿರೋಧ ಪಕ್ಷಗಳ ಮೇಲೆ ಯಾವುದೇ ನಂಬಿಕೆ ಇಲ್ಲ ಎಂದು ವಿರೋಧ ಪಕ್ಷಗಳು ಆರೋಪ ಮಾಡಿವೆ.

ನವದೆಹಲಿಯಲ್ಲಿ ನಾಳೆ ನಡೆಯಲಿರುವ ಜಿ20 ಶೃಂಗಸಭೆಯ ನಿಮಿತ್ತ ಶನಿವಾರ ಪರಾಗ್ತಿ ಮೈದಾನದಲ್ಲಿ ವಿಶ್ವ ನಾಯಕರಿಗೆ ಆಯೋಜಿಸಿರುವ ಗಾಲಾ ಔತಣಕೂಟಕ್ಕೆ ಯಾವುದೇ ವಿರೋಧ ಪಕ್ಷಗಳ ನಾಯಕರನ್ನು ಆಹ್ವಾನಿಸಿಲ್ಲ. ಇದು ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.

ಬ್ರಸೆಲ್ಸ್​ನಲ್ಲಿರುವ ಕಾಂಗ್ರೆಸ್​ ರಾಹುಲ್​ ಗಾಂಧಿ ಅವರು, ಕಾಂಗ್ರೆಸ್​ ಪಕ್ಷದ ಮುಖ್ಯಸ್ಥ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಜಿ20 ಔತಣಕೂಟಕ್ಕೆ ಆಹ್ವಾನಿಸಿಲ್ಲ. ಮೋದಿ ಸರ್ಕಾರ ವಿರೋಧ ಪಕ್ಷದ ನಾಯಕರನ್ನು ಭಾರತದ ಜನಸಂಖ್ಯೆಯ ಶೇ 60 ರಷ್ಟು ಕೂಡ ಗೌರವಿಸುವುದಿಲ್ಲ ಎಂದು ಸರ್ಕಾರದ ವಿರುದ್ಧ ರಾಹುಲ್​​​ ಆರೋಪ ಮಾಡಿದ್ದಾರೆ.

ಇದರ ಮಧ್ಯೆ ನವದೆಹಲಿಯಲ್ಲಿ ಈಟಿವಿ ಭಾರತದ ಜೊತೆ ಮಾತನಾಡಿರುವ ಕಮ್ಯುನಿಸ್ಟ್​ ಪಾರ್ಟಿ ಆಫ್​ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಡಿ ರಾಜಾ, "ವಿಶ್ವದ ನಾಯಕರು ಭಾಗಿಯಾಗುತ್ತಿರುವ ಔತಣಕೂಟಕ್ಕೆ ನಮಗೆ ಯಾವುದೇ ಆಹ್ವಾನ ಬಂದಿಲ್ಲ. ಕೇಂದ್ರಕ್ಕೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಹಾಗಾಗಿ ಅದು ಪ್ರತಿಪಕ್ಷಗಳ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.

ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಮಾಜಿ ಸಂಸದ ಹಾಗೂ ಕಮ್ಯುನಿಸ್ಟ್​ ಪಾರ್ಟಿ ಆಫ್​ ಇಂಡಿಯಾ (ಸಿಪಿಐ- ಮಾರ್ಕ್ಸ್​ವಾದಿ) ನಾಯಕ ಹನ್ನಾನ್​ ಮೊಲ್ಲಾ, ಪ್ರಸ್ತುತ ಕೇಂದ್ರ ದೇಶವನ್ನು ನಿರಂಕುಶ ರೀತಿಯಲ್ಲಿ ಆಳುತ್ತಿದೆ. ಬಿಜೆಪಿಗೆ ಯಾವುದೇ ವಿರೋಧ ಪಕ್ಷ ಇರಬಾರದು. ಅದಕ್ಕಾಗಿಯೇ ಅವರು ಒನ್​ ನೇಷನ್​ ಒನ್​ ಎಲೆಕ್ಷನ್​​ ಎಂಬ ಸೂತ್ರದೊಂದಿಗೆ ಮುನ್ನಡೆಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇತ್ತೀಚೆಗೆ ರಾಷ್ಟ್ರಪತಿ ಅವರ ಔತಣಕೂಟದ ಆಹ್ವಾನಪತ್ರಿಕೆಯ ವಿಷಯ ರಾಜಕೀಯ ಬಿರುಗಾಳಿಯನ್ನು ಎಬ್ಬಿಸಿತ್ತು. ಆಹ್ವಾನ ಪತ್ರಿಕೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು 'ಪ್ರೆಸಿಡೆಂಟ್​ ಆಫ್​ ಭಾರತ' ಎಂದು ಉಲ್ಲೇಖಿಸಲಾಗಿತ್ತು. ಇದು ವಿರೋಧ ಪಕ್ಷಗಳಿಂದ ತೀವ್ರ ಟೀಕೆಗೆ ಒಳಗಾಗಿತ್ತು. ಕೇಂದ್ರ ಸರ್ಕಾರ ದೇಶದ ಹೆಸರನ್ನು ಇಂಡಿಯಾ ಬದಲು ಭಾರತ ಎಂದು ಬದಲಾಯಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪ ಮಾಡಿದ್ದರು.

ಆದರೆ, ಎಲ್ಲ ಕ್ಯಾಬಿನೆಟ್​ ಹಾಗೂ ರಾಜ್ಯ ಸಚಿವರು, ಎಲ್ಲ ಮುಖ್ಯಮಂತ್ರಿಗಳನ್ನು ಹಾಗೂ ಭಾರತ ಸರ್ಕಾರದ ಕಾರ್ಯದರ್ಶಿಗಳನ್ನು ಔತಣಕೂಟಕ್ಕೆ ಆಹ್ವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮಾಜಿ ಪ್ರಧಾನಿಗಳಾದ ಡಾ. ಮನಮೋಹನ್​ ಸಿಂಗ್​ ಹಾಗೂ ಹೆಚ್​ ಡಿ ದೇವೇಗೌಡ ಅವರನ್ನೂ ಆಹ್ವಾನಿಸಲಾಗಿತ್ತು. ಆದರೆ ದೇವೇಗೌಡರು ಆರೋಗ್ಯದ ಕಾರಣದಿಂದಾಗಿ ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ ಎಂದು ಹೇಳಿದ್ದರು.

ಎಲ್ಲಾ ಆಹ್ವಾನಿತ ಅತಿಥಿಗಳನ್ನು ಶನಿವಾರ ಸಂಜೆ ಆರು ಗಂಟೆಗೆ ಸಂಸತ್ ಭವನಕ್ಕೆ ತಲುಪುವಂತೆ ತಿಳಿಸಲಾಗಿತ್ತು. ಅಲ್ಲಿಂದ ಅವರನ್ನು ವಿಶೇಷ ಸಾರಿಗೆ ವ್ಯವಸ್ಥೆಯ ಮೂಲಕ ಪ್ರಗತಿ ಮೈದಾನದಲ್ಲಿರುವ ಭಾರತ ಮಂಟಪಕ್ಕೆ ಕರೆದೊಯ್ದು ಹಿಂತಿರುಗಿಸಲಾಗುವುದು ಎಂದು ಮೂಲಗಳು ತಿಳಿಸಿತ್ತು. ಆದರೆ, ಬಿಜೆಪಿಯ ಹಿರಿಯ ನಾಯಕ ಮತ್ತು ರಾಜ್ಯಸಭಾ ಸಂಸದ ಭುವನೇಶ್ವರ್ ಕಲಿತಾ ಅವರು ವಿರೋಧ ಪಕ್ಷದ ನಾಯಕರ ಇಂತಹ ಟೀಕೆಗಳನ್ನು ತಳ್ಳಿಹಾಕಿದ್ದಾರೆ.

ಇದನ್ನೂ ಓದಿ : ಜಿ20 ಶೃಂಗಸಭೆ: ಟೀಕೆಗೆ ಗುರಿಯಾದ ನೃತ್ಯ... ಏನಿದು ವಿವಾದ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.