ETV Bharat / bharat

ನ.​​16ರಿಂದ ದರ್ಶನಕ್ಕೆ ಶಬರಿಮಲೆ ಮುಕ್ತ.. ಪ್ರತಿ ದಿನ 25 ಸಾವಿರ ಭಕ್ತರಿಗೆ ಅವಕಾಶ.. - Sabarimala Lord Ayyappa

ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿರುವ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲಾಗಿದ್ದು, ನವೆಂಬರ್​ 16ರಿಂದ ಭಕ್ತರು ದರ್ಶನ ಪಡೆದುಕೊಳ್ಳಬಹುದಾಗಿದೆ..

Sabarimala
Sabarimala
author img

By

Published : Nov 12, 2021, 8:42 PM IST

ತಿರುವನಂತಪುರಂ(ಕೇರಳ) : ಭಾರತದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿರುವ ಶಬರಿಮಲೆ(Sabarimala temple) ಅಯ್ಯಪ್ಪ ಸ್ವಾಮಿ ಭಕ್ತರಿಗೆ ಇದೀಗ ಸಿಹಿ ಸುದ್ದಿ ಸಿಕ್ಕಿದೆ.

ಬರುವ ನವೆಂಬರ್​ 16ದಿಂದ ಭಕ್ತರ ದರ್ಶನಕ್ಕೆ ಶಬರಿಮಲೆ ಮುಕ್ತವಾಗಲಿದೆ. ಪ್ರತಿದಿನ 25 ಸಾವಿರ ಭಕ್ತಾಧಿಗಳಿಗೆ ದರ್ಶನ ಪಡೆದುಕೊಳ್ಳಲು ಅವಕಾಶ ನೀಡಲಾಗುವುದು ಎಂದು ದೇವಾಲಯದ ಅಧ್ಯಕ್ಷರು ತಿಳಿಸಿದ್ದಾರೆ.

ಎರಡು ತಿಂಗಳ ವಾರ್ಷಿಕ ಧಾರ್ಮಿಕ(annual pilgrimage to Sabarimala) ಯಾತ್ರೆಯ ಅವಧಿ ಆರಂಭಗೊಂಡಿರುವ ಕಾರಣ, ಪ್ರತಿದಿನ ಸುಮಾರು 25 ಸಾವಿರ ಭಕ್ತರಿಗೆ ಅವಕಾಶ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ.

ನವೆಂಬರ್​ 16ರಿಂದ ಧಾರ್ಮಿಕ ಯಾತ್ರೆ ಆರಂಭಗೊಳ್ಳಲಿದ್ದು, ನವೆಂಬರ್​ 15ರ ಸಂಜೆ 5ಕ್ಕೆ ದೇವಾಲಯದ ಬಾಗಿಲು ಓಪನ್​ ಆಗಲಿದೆ. ಕೋವಿಡ್ ಮಾರ್ಗಸೂಚಿ ಪಾಲನೆ ಕಡ್ಡಾಯವಾಗಿದೆ.

ಇಲ್ಲಿಗೆ ಭೇಟಿ ನೀಡಲು ಎರಡು ಡೋಸ್​ ಕೋವಿಡ್​ ಲಸಿಕೆ(Covid vaccine) ಪಡೆದಿರುವುದು ಅಥವಾ ಆರ್​ಟಿಪಿಸಿಆರ್(RTPCR negative certificate)​​ ನೆಗೆಟಿವ್​ ಪ್ರಮಾಣ ಪತ್ರ ಹೊಂದಿರುವುದು ಕಡ್ಡಾಯವಾಗಿದೆ.

ಇದನ್ನೂ ಓದಿರಿ: ಮಲಗಿದ್ದಾಗ ಆಯುಧದಿಂದ ಹಲ್ಲೆ ಮಾಡಿ ಹೆಂಡತಿ-ಮಗಳ ಕೊಲೆಗೈದ ವ್ಯಕ್ತಿ

ಇದಕ್ಕೆ ಸಂಬಂಧಿಸಿದಂತೆ ಈಟಿವಿ ಭಾರತ ಜೊತೆ ಮಾತನಾಡಿರುವ ದೇವಸ್ಥಾನದ ಅಧ್ಯಕ್ಷರಾದ ಎನ್​.ವಾಸು,(Travancore Devaswom Board president N Vasu) ಆರಂಭದಲ್ಲಿ ಪ್ರತಿ ದಿನ 25 ಸಾವಿರ ಭಕ್ತರಿಗೆ ಅವಕಾಶ ನೀಡಲಾಗುವುದು.

ತದನಂತರ ಹೆಚ್ಚಿನ ಭಕ್ತರಿಗೆ ಅವಕಾಶ ನೀಡಲಾಗುವುದು ಎಂದಿದ್ದಾರೆ. ವರ್ಚುವಲ್​ ಕ್ಯೂ ಸಿಸ್ಟಿಮ್​ ಮೂಲಕ ಸ್ಲಾಟ್​ ಬುಕ್ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಅಯ್ಯಪ್ಪ ಸ್ವಾಮಿ ಭೇಟಿಗೆ ಬಂದ ಯಾರನ್ನೂ ವಾಪಸ್​ ಕಳುಹಿಸುವುದಿಲ್ಲ. ಆದರೆ, ಎರಡು ಡೋಸ್​​ ಕೋವಿಡ್ ಲಸಿಕೆ ಪಡೆದಿರುವ ಪ್ರಮಾಣ ಪತ್ರ ಅಥವಾ ಆರ್​ಟಿಪಿಸಿಆರ್​ ನೆಗೆಟಿವ್​ ಪ್ರಮಾಣಪತ್ರ ಕಡ್ಡಾಯವಾಗಿದೆ ಎಂದಿದ್ದಾರೆ.

ಪಂಪಾ ನದಿಯಲ್ಲಿ ಸ್ನಾನಕ್ಕಾಗಿ ಅವಕಾಶ ಕಲ್ಪಿಸಲಾಗಿದೆ. ತಮಿಳುನಾಡು, ಕರ್ನಾಟಕ, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಿಂದ ಬರುವ ಭಕ್ತರಿಗೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲಾಗಿದೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.