ETV Bharat / bharat

ಅಫ್ಘನ್ ಪ್ರಜೆಗಳು ಇ-ವೀಸಾದಡಿಯಲ್ಲಿ ಭಾರತಕ್ಕೆ ಪ್ರಯಾಣಿಸಬೇಕು : ಕೇಂದ್ರ ಗೃಹ ಇಲಾಖೆ

ಅಫ್ಘನ್​ ಪ್ರಜೆಗಳ ಕೆಲವು ಪಾಸ್‌ಪೋರ್ಟ್‌ಗಳು ಕಳೆದಿವೆ ಎಂದು ಕೆಲವು ವರದಿಗಳನ್ನು ಗಮನದಲ್ಲಿಟ್ಟುಕೊಂಡು, ಪ್ರಸ್ತುತ ಭಾರತದಲ್ಲಿ ಇಲ್ಲದ ಎಲ್ಲಾ ಅಫ್ಘನ್​​ ಪ್ರಜೆಗಳಿಗೆ ಈ ಹಿಂದೆ ನೀಡಲಾದ ವೀಸಾಗಳನ್ನು ತಕ್ಷಣವೇ ಜಾರಿಗೆ ಬರುವಂತೆ ಅಮಾನ್ಯಗೊಳಿಸಲಾಗಿದೆ ಎಂದು ಗೃಹ ಸಚಿವಾಲಯ ಘೋಷಿಸಿದೆ..

all-afghans-must-travel-to-india-on-e-visa-govt
ಅಫ್ಘನ್ ಪ್ರಜೆಗಳು ಇ-ವೀಸಾದಡಿಯಲ್ಲಿ ಭಾರತಕ್ಕೆ ಪ್ರಯಾಣಿಸಬೇಕು
author img

By

Published : Aug 25, 2021, 5:15 PM IST

ನವದೆಹಲಿ : ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸ ಮುಂದುವರಿದಿದೆ. ಅಲ್ಲಿನ ಪ್ರಜೆಗಳು ಜೀವ ಉಳಿಸಿಕೊಳ್ಳಲು ಬೇರೆ ರಾಷ್ಟ್ರಗಳತ್ತ ಮುಖ ಮಾಡಿದ್ದಾರೆ. ಈ ನಡುವೆ ಅಫ್ಘನ್ ನಿರಾಶ್ರಿತರು ಇ-ವೀಸಾದಲ್ಲಿ ಮಾತ್ರ ಭಾರತಕ್ಕೆ ಆಗಮಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಅಫ್ಘನ್​ನ ಪ್ರಸ್ತುತ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಅಲ್ಲಿನ ಪ್ರಜೆಗಳು ಇನ್ನುಮುಂದೆ ಇ-ವೀಸಾದಡಿ ಭಾರತಕ್ಕೆ ಆಗಮಿಸಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಸೂಚಿಸಿದೆ. ಸಂಪೂರ್ಣ ಅಫ್ಘಾನಿಸ್ತಾನ ತಾಲಿಬಾನ್ ವಶಕ್ಕೆ ಪಡೆದ ಬಳಿಕ ಭಾರತ ಹೊಸ ವೀಸಾ ನೀತಿ ಜಾರಿ ಮಾಡಿದೆ. ‘ಇ-ಎಮರ್ಜೆನ್ಸಿ ಎಕ್ಸ್​-ಮಿಸ್ಕ್​​​​ ವೀಸಾ’ ​ಎಂಬ ಹೊಸ ವರ್ಗದ ವೀಸಾದಡಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

ಅಫ್ಘನ್​ ಪ್ರಜೆಗಳ ಕೆಲವು ಪಾಸ್‌ಪೋರ್ಟ್‌ಗಳು ಕಳೆದಿವೆ ಎಂದು ಕೆಲವು ವರದಿಗಳನ್ನು ಗಮನದಲ್ಲಿಟ್ಟುಕೊಂಡು, ಪ್ರಸ್ತುತ ಭಾರತದಲ್ಲಿ ಇಲ್ಲದ ಎಲ್ಲಾ ಅಫ್ಘನ್​​ ಪ್ರಜೆಗಳಿಗೆ ಈ ಹಿಂದೆ ನೀಡಲಾದ ವೀಸಾಗಳನ್ನು ತಕ್ಷಣವೇ ಜಾರಿಗೆ ಬರುವಂತೆ ಅಮಾನ್ಯಗೊಳಿಸಲಾಗಿದೆ ಎಂದು ಗೃಹ ಸಚಿವಾಲಯ ಘೋಷಿಸಿದೆ.

ಭಾರತಕ್ಕೆ ಆಗಮಿಸಲು ಇಚ್ಛಿಸುವ ಅಫ್ಘನ್ ಪ್ರಜೆಗಳು ಇ-ವೀಸಾಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ. ನವದೆಹಲಿಯಲ್ಲಿ ಈ ಅರ್ಜಿಗಳ ಪರಿಶೀಲನೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಓದಿ: ಭಾರತದಿಂದ ಬರುವ ಪ್ರಯಾಣಿಕರಿಗೆ 'ಸ್ಥಳದಲ್ಲೇ ವೀಸಾ ಸೌಲಭ್ಯ' ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಯುಎಇ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.